ಕನ್ನಡಪ್ರಭ ವಾರ್ತೆ ಸಿರುಗುಪ್ಪ
ನಗರದ ಅಮೃತೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಅಮೃತೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ 20ನೇ ವರ್ಷದ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಶಿವ ವಚನಾಮೃತ ಮತ್ತು ಸತ್ಯಾವತಾರ ಸ್ವರ ಸಂಚಾರ ಕಾರ್ಯಕ್ರಮವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಹಾಗೂ ಈ ದೇಶದ ಜನರ ಸಂಸ್ಕಾರ ವಿಶ್ವಕ್ಕೆ ಮಾದರಿಯಾಗಿದೆ. ವಿದೇಶದಲ್ಲಿರುವ ಲಕ್ಷಾಂತರ ಜನರು ಭಾರತೀಯ ಸಂಸ್ಕೃತಿಗೆ ಮೊರೆ ಹೋಗಿದ್ದಾರೆ. ಇಲ್ಲಿನ ವೇದ-ಉಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯತೆಯನ್ನು ವಿದೇಶಿಯರು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದರು.ಶಿವನು ಭಕ್ತಿಪ್ರಿಯನು. ಭಕ್ತಿಯಿಂದ ಪೂಜಿಸಿ, ಧ್ಯಾನಿಸಿದರೆ ಖಂಡಿತ ಒಲಿಯುತ್ತಾನೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಮೈಗೂಡಿಸಿ. ಈ ದೇಶದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸಿ. ದೇಶದ-ನಾಡಿನ ಅನನ್ಯ ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ರಾಮಚಂದ್ರ ಹಡಪದ ಮತ್ತು ತಂಡದವರು ಭಕ್ತಿಗೀತೆಗಳ ಗಾಯನ ಪ್ರಸ್ತುತಪಡಿಸಿದರು. ವಿವಿಧ ಮಕ್ಕಳು ಪ್ರದರ್ಶನ ನೀಡಿದ ಶಿವ ತಾಂಡವ ನೃತ್ಯ ಗಮನ ಸೆಳೆಯಿತು. ನೇಹ ರಂಗ ತಂಡದವರು ಡೊಳ್ಳುಕುಣಿತ ಪ್ರದರ್ಶನ ನೀಡಿದರು.