ಕನ್ನಡಪ್ರಭ ವಾರ್ತೆ ಶಿರಸಿ
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಸಂಸ್ಕೃತ ಶೋಧ ಸಂಸ್ಥಾನ ಶನಿವಾರದಿಂದ ನಗರದ ಸಾಮ್ರಾಟ್ ವಿನಾಯಕ ಹಾಲ್‌ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ ಜಗತ್ತಿನ ಜ್ಞಾನಕ್ಕೆ, ಪುಸ್ತಕಗಳಿಗೆ ಭಾರತದ ಕೊಡುಗೆಗಳ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು.
ಸಂಸ್ಕೃತ ಶೋಧ ಸಂಸ್ಥಾನ ಸಂಸ್ಥೆಗೆ ಮತ್ತು ಮಠಕ್ಕೆ ನಿಕಟ ಸಂಬಂಧವಿದ್ದು, ಸಂಸ್ಕೃತ ಶೋಧ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷ ಡಾ. ದಯಾನಂದ ಶಾನಭಾಗರ ಉದ್ದೇಶ ಕಾರ್ಯಗತಗೊಳಿಸಲು ಅವರ ಶಿಷ್ಯ ವೃಂದ ಯತ್ನಿಸುತ್ತಿರುವುದು ತುಂಬಾ ಸಂತೋಷ. ಸಂಸ್ಕೃತ ಹಾಗೂ ಭಾರತೀಯ ಸಂಸ್ಕೃತಿ ಪರಿಚಯಿಸುವ ಕಾರ್ಯವನ್ನು ದೇಶಾದ್ಯಂತ ಮಾಡುತ್ತ ಸನಾತನ ಧರ್ಮದ ಉತ್ಕರ್ಷಕ್ಕೆ ಕಾರಣವಾಗುತ್ತಿದೆ. ಭಾರತೀಯ ಪರಂಪರೆ ಉಳಿಸಲು ಒಂದೊಳ್ಳೆ ಮಾರ್ಗ ಎಂದರು.ಹಿರಿಯ ವಿದ್ವಾಂಸ, ಸೇವಾ ನಿವೃತ್ತ ಉಪಕುಲಪತಿ ರಾಮಚಂದ್ರ ಭಟ್ಟ ಕೋಟೆಮನೆ ಮಾತನಾಡಿ, ಉತ್ತರ ಕನ್ನಡದ ಗ್ರಾಮ ಗ್ರಾಮಗಳಲ್ಲಿ ಪಾಂಡಿತ್ಯ ಉಳ್ಳವರು ಇದ್ದರು. ಇತಿಹಾಸ ಅರಿತು ಮುನ್ನಡೆಯಬೇಕು. ಸಂಸ್ಕೃತಿ ಉಳಿಸಲು ಸಂಸ್ಕೃತ ಉಳಿಸಬೇಕು ಎಂದರು.
ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ವಿ.ಕೆ. ಹಂಪಿಹೋಳಿ, ವಿನಾಯಕ ಕುಮಾರ ಬಂಡಿ, ನೆದರಲ್ಯಾಂಡಿನಲ್ಲಿ ಸಂಸ್ಕೃತ ಶಾಲೆ ತೆರೆದ ಪದ್ಮಶ್ರೀ ರುಟ್ಜರ್ ಕೊರ್ಟನ್ ಹಾಸ್ಟ್, ಎಂ.ಕೆ. ಶ್ರೀಧರ, ಡಾ. ಸುರೇಶ ಮೈಸೂರು, ಡಾ. ಜಿ.ಎನ್. ಭಟ್ಟ ಬೆಂಗಳೂರು, ಡಾ. ವಿನಾಯಕ ಭಟ್ಟ ಗಾಳಿಮನೆ, ಪುಟ್ಟು ಕುಲಕರ್ಣಿ, ಡಾ. ಸುಮಿತ್ರಾ ಭಟ್ಟ ಶಿವಮೊಗ್ಗ, ಡಾ. ಎಂ.ಜಿ. ಹೆಗಡೆ, ಕೇಶವ ಕೊರ್ಸೆ ಮತ್ತಿತರರು ಪಾಲ್ಗೊಂಡರು.