ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸುಯೋಗ್ ನರ್ಸಿಂಗ್ ಕಾಲೇಜ್ ಹಾಗೂ ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೇವೆ, ಶಿಕ್ಷಣ ಎಂಬುದು ಪವಿತ್ರ ಸೇವಾ ಕ್ಷೇತ್ರ. ಇದರಿಂದ ಸಾಕಷ್ಟು ಜನಗಳಿಗೆ ನೆರವಾಗಬಹುದು. ಈ ವೃತ್ತಿಯಲ್ಲಿ ಇರುವವರು ಪುಣ್ಯವಂತರು ಎಂದರು.
ಮನುಷ್ಯ ಹಣ, ಆಸ್ತಿ, ಅಂತಸ್ತು, ಅಧಿಕಾರ ಹೀಗೆ ಯಾವುದೇ ಸುಖ ಅನುಭವಿಸಿರಲಿ, ಆದರೆ, ಪರರರಿಗೆ ಮಾಡುವ ಸೇವೆಯ ಸುಖ ಇವೆಲ್ಲಕ್ಕಿಂತಲೂ ಮಿಗಿಲು. ತನ್ನ ವೃತ್ತಿಯನ್ನು ಪ್ರೀತಿಸುವವರು ಸೇವೆಯನ್ನೂ ಪ್ರಾಮಾಣಿಕವಾಗಿ ಮಾಡಬಲ್ಲರು ಎಂದರು.ಭಾರತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಮಾಯಣದಂತಹ ಬೃಹತ್ ಕಾವ್ಯವನ್ನು ರಚನೆ ಮಾಡಿದಂತಹ ಆದಿಗುರು ವಾಲ್ಮೀಕಿ ಬಹುದೊಡ್ಡ ಶಿಕ್ಷಕ. ನಂತರ ದ್ರೋಣಾಚಾರ್ಯ, ಶ್ರೀ ಕೃಷ್ಣ ಎಲ್ಲರೂ ಇತರರಿಗೆ ಬೋದಿಸುವ ಮೂಲಕ ಮಹಾ ಗುರುಗಳಾದರು ಎಂದರು.
ಇದೇ ವೇಳೆ ವಿದ್ಯಾ ವಿಕಾಸ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ವಿನೋಲಿಯ ರಾಜ್, ಮೌರ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕೆ.ಎಸ್. ಶುಭಾ, ಸಿಗ್ಮಾ ನರ್ಸಿಂಗ್ ಕಾಲೇಜಿನ ಪ್ರೊ. ಮಂಜುನಾಥ್ ಹಾಗೂ ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಟಿ. ನಾಗಮಣಿ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ
ನಗರದ ಎಂಎಂಕೆ ಮತ್ತು ಎಸ್.ಡಿಎಂ ಮಹಿಳಾ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕ, ಕ್ಲಿಯರಮೆಡಿ ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ಸಹಕಾರದೊಂದಿಗೆ ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ, ಐಕ್ಯುಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಎನ್ಎಸ್ಎಸ್ ಘಟಕದ ಸಂಚಾಲಕಿ ಅನಿತಾ ಪಿ.ಜಯರಾಮ್, ಸದಸ್ಯರಾದ ಡಾ.ಕೆ.ಎನ್. ಅರುಣ್ ಕುಮಾರ್, ಸೈಯದ್ ಸಾದತ್, ಎಂ. ಪ್ರತಿಮಾ, ವಾಣಿ, ಶ್ವೇತಾ ಮೊದಲಾದವರು ಇದ್ದರು.