ಇಂಡಿಯನ್ ಓಪನ್ ಆಫ್ ಸರ್ಫಿಂಗ್: ತಮಿಳುನಾಡು ಸರ್ಫರ್‌ಗಳ ಗೆಲವು

KannadaprabhaNewsNetwork |  
Published : Jun 22, 2025, 11:48 PM IST
ಇಂಡಿಯನ್ ಓಪನ್ ಆಫ್ ಸರ್ಫಿಂಗ್  ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಡಿ ,ಮಹಿಳಾ ವಿಭಾಗದಲ್ಲಿ  ಕಮಲಿ ಮೂರ್ತಿಗೆ ಪ್ರಶಸ್ತಿ  | Kannada Prabha

ಸಾರಾಂಶ

ತಮಿಳುನಾಡಿನ ಶ್ರೀಕಾಂತ್ ಡಿ. ಪುರುಷರ ಓಪನ್ ವಿಭಾಗದಲ್ಲಿ ಪ್ರಶಸ್ತಿ, ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು ಗ್ರೋಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ, ತಮಿಳುನಾಡಿನ ಪ್ರಹ್ಲಾದ್ ಶ್ರೀರಾಮ್ ಗ್ರೋಮ್ಸ್ ಬಾಯ್ಸ್ (ಯು-16) ವಿಭಾಗದಲ್ಲಿ ಜಯ ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

2025ರ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್ ಸರಣಿಯ ಎರಡನೇ ಹಂತವಾಗಿದ್ದ, ಇತ್ತೀಚೆಗೆ ಮಂಗಳೂರಿನಲ್ಲಿ ಸಂಪನ್ನಗೊಂಡ 6ನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ ಎಲ್ಲ ನಾಲ್ಕು ವಿಭಾಗಗಳನ್ನೂ ತಮಿಳುನಾಡಿನ ಸರ್ಫರ್‌ಗಳು ಗೆಲುವನ್ನು ಸಾಧಿಸಿದ್ದಾರೆ.

ತಮಿಳುನಾಡಿನ ಶ್ರೀಕಾಂತ್ ಡಿ. ಪುರುಷರ ಓಪನ್ ವಿಭಾಗದಲ್ಲಿ ಪ್ರಶಸ್ತಿ, ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು ಗ್ರೋಮ್ಸ್ ಗರ್ಲ್ಸ್ (ಯು-16) ವಿಭಾಗಗಳಲ್ಲಿ, ತಮಿಳುನಾಡಿನ ಪ್ರಹ್ಲಾದ್ ಶ್ರೀರಾಮ್ ಗ್ರೋಮ್ಸ್ ಬಾಯ್ಸ್ (ಯು-16) ವಿಭಾಗದಲ್ಲಿ ಜಯ ಸಾಧಿಸಿದ್ದಾರೆ.

ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜನೆಯಲ್ಲಿ ಮಂತ್ರ ಸರ್ಫ್ ಕ್ಲಬ್ ಆತಿಥ್ಯದಲ್ಲಿ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಮೇ 30ರಿಂದ ಜೂನ್ 1ರ ವರೆಗೆ ನಡೆಯಬೇಕಿದ್ದ ಈ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಸಂಭವಿಸಿದ ಬಿರುಗಾಳಿ ಹಾಗೂ ಮಳೆ ಕಾರಣದಿಂದ ಮುಂದೂಡಲಾಗಿದ್ದು, ನಂತರ ಸಾರ್ವಜನಿಕರ ಪ್ರವೇಶವಿಲ್ಲದಂತೆ ಸ್ಪರ್ಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸ್ಪರ್ಧೆಯನ್ನು ನಡೆಸಲಾಗಿತ್ತು.

ಹಿಂದಿನ ವರ್ಷ ಎರಡನೇ ಸ್ಥಾನ ಗಳಿಸಿದ್ದ ಶ್ರೀಕಾಂತ್ ಡಿ. ಈ ಬಾರಿ 14.63 ಅಂಕಗಳೊಂದಿಗೆ ಜಯ ಸಾಧಿಸಿದರು. ರಾಷ್ಟ್ರೀಯ ಚಾಂಪಿಯನ್ ರಮೇಶ್ ಬುದಿಲಾಲ್ (11.87) ಎರಡನೇ ಸ್ಥಾನ ಪಡೆದರೆ, ಶಿವರಾಜ್ ಬಾಬು (9.77) ಮತ್ತು ಸಂಜಯ್ ಸೆಲ್ವಮಣಿ (7.07) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದರು.ದೇಶದ ಅಗ್ರ ಮಹಿಳಾ ಸರ್ಫರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಕಮಲಿ ಮೂರ್ತಿ, ಮಹಿಳೆಯರ ಓಪನ್ ಮತ್ತು ಗ್ರೋಮ್ಸ್ ಗರ್ಲ್ಸ್ ವಿಭಾಗಗಳಲ್ಲೂ ಗೆಲುವು ಸಾಧಿಸಿದರು. ಮಹಿಳೆಯರ ಓಪನ್ ಫೈನಲ್‌ನಲ್ಲಿ 13.33 ಅಂಕಗಳೊಂದಿಗೆ ಅವರು ಸುಗರ್ ಶಾಂತಿ ಬನರ್ಸ್ (10.50) ಅವರನ್ನು ಸೋಲಿಸಿದರು. ಸೃಷ್ಟಿ ಸೆಲ್ವಂ 2.47 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡರು. ಗ್ರೋಮ್ಸ್ ಗರ್ಲ್ಸ್ ಫೈನಲ್‌ನಲ್ಲಿ ಕಮಲಿ ಈ ಸ್ಪರ್ಧೆಯಲ್ಲೇ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿ 15.50 ಅಂಕಗಳನ್ನು ಪಡೆದುಕೊಂಡರು. ಆದ್ಯಾ ಸಿಂಗ್ (2.36) ಮತ್ತು ಸಾನ್ವಿ ಹೆಗ್ಡೆ (2.20) ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಗ್ರೋಮ್ಸ್ ಬಾಯ್ಸ್ (ಯು-16) ವಿಭಾಗದ ಫೈನಲ್‌ನಲ್ಲಿ ಪ್ರಹ್ಲಾದ್ ಶ್ರೀರಾಮ್ 11.06 ಅಂಕಗಳೊಂದಿಗೆ ಗೆಲುವು ದಾಖಲಿಸಿದರು. ಹರಿಷ್ ಪಿ. (9.67) ಮತ್ತು ಸೊಮ್ ಸೇಥಿ (9.30) ಅವರೊಂದಿಗೆ ಈ ವಿಭಾಗದ ಪೈಪೋಟಿ ತೀವ್ರವಾಗಿತ್ತು.

PREV

Recommended Stories

ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ
ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು