ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು-ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಗಾಟನಾ ಕಾರ್ಯಕ್ರಮ
ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ. ಭಾರತೀಯ ಚಿಂತನೆಗಳು ಜಗತ್ತಿನ ಕಲ್ಯಾಣ ಬಯಸುತ್ತದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಶುಕ್ರವಾರ ಸಮೀಪದ ಲಿಂಗದಹಳ್ಳಿ ಬಳಿ ಪ್ರಕೃತಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ನಡೆದ 2 ದಿನಗಳ ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು-ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ಪಕ್ಷ. 17 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ 1850ಕ್ಕೂ ಹೆಚ್ಚು ಶಾಸಕರು, ಸಂಸದರನ್ನು ಹೊಂದಿದೆ. ಬಿಜೆಪಿ ಸೈದ್ದಾಂತಿಕ ಆಂದೋಲನ ಹಂತ ಹಂತವಾಗಿ ಬೆಳೆದಂತೆ ನಾಯಕತ್ವವೂ ಬೆಳೆದಿದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಲು ಈ ಪ್ರಶಿಕ್ಷಣದ ಮಹಾಭಿಯಾನ. ಸೈದ್ದಾಂತಿಕ ಪ್ರಕ್ರಿಯೆಯೇ ಈ ಕಾರ್ಯಕ್ರಮದ ಉದ್ದೇಶ.
ಸೈದ್ದಾಂತಿಕ ಪುನರುತ್ಥಾನ ಆಗಬೇಕು. ಸರ್ವೇ ಜನೋ ಸುಖಿನೋ ಭವಂತು ಎಂಬುದು ನಮ್ಮ ಉದ್ದೇಶ, ಅರ್ಥಿಕ ಬದಲಾವಣೆ ಸರ್ವವ್ಯಾಪಿಯಾಗಬೇಕು. ಪ್ರತಿಯೊಬ್ಬರೂ ಸ್ವಾವಲಂಬಿ, ಅತ್ಮನಿರ್ಬರರಾಗಬೇಕು. ಕಟ್ಟ ಕಡೆ ವ್ಯಕ್ತಿಗೂ ಶಕ್ತಿ ತುಂಬಬೇಕು. ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ, ರಾಷ್ಟ್ರ ಮೊದಲು ಎನ್ನುವದು ನಮ್ಮ ಸಿದ್ದಾಂತ. ಸೈದ್ದಾಂತಿಕ ಬದ್ಧತೆಯಿಂದ ಜನನಾಯಕತ್ವ ಬೆಳೆಸಬೇಕು. ಅದು ಜನಪರ ಹೋರಾಟದ ಮೂಲಕ ಬೆಳೆಯಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 9 ಮಂಡಲದಲ್ಲಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನಡೆದಿದೆ. ಭಾರತೀಯ ಜನತಾ ಪಕ್ಷ ಇತರ ಪಕ್ಷಗಳಿಗಿಂತ ವಿಭಿನ್ನ. ರಾಷ್ಟ್ರೀಯತೆ ಎತ್ತಿ ಹಿಡಿಯುತ್ತದೆ. ಆನಂತರವೇ ಪಕ್ಷ, ಪ್ರಶಿಕ್ಷಣ ವರ್ಗದಲ್ಲಿ 2 ದಿನಗಳು ಏನನ್ನು ಕಲಿತುಕೊಳ್ಳುತ್ತೇವೆಯೋ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಮುಖ್ ಅಶೋಕ್ ಮೂರ್ತಿ ಮಾತನಾಡಿ ಸಂಘಟನೆಗೆ ಶಕ್ತಿ ತುಂಬಬೇಕು. ಶಿಬಿರ ಯಶಸ್ವಿಯಾಗಲಿ ಎಂದರು.ಜಿಲ್ಲೆಯಲ್ಲಿ ಬಿಜೆಪಿ ಬೆಳೆದು ಬಂದ ಹಾದಿ ಚಿತ್ರ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟನೆ ನೆರವೇರಿಸಿದರು.
-