ಯಲ್ಲಾಪುರ: ನಮಸ್ತೆ ಶಾರದಾದೇವಿ ಎಂದು ಕರೆಯಲ್ಪಡುವ ಕಾಶ್ಮೀರ ರಕ್ತ ಪೀಪಾಸುಗಳಿಗೆ ಬಲಿಯಾಗುತ್ತಿದೆ. ಹಿಡಿಯಷ್ಟಿರುವ ಪಾಕಿಸ್ತಾನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಭಾರತವನ್ನು ಆಳಬೇಕು ಎಂದು ಕನಸು ಕಾಣುತ್ತಿದೆ ಎಂದು ಆರೆಸ್ಸೆಸ್ ರಾಜ್ಯ ಪ್ರಮುಖ ಜಯರಾಮ ಬೊಳ್ಳಾಜೆ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್, ಹಿಂದೂ ಸಂಘಟನೆಗಳ ಆಶ್ರಯದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಪ್ರವಾಸಿಗರಿಗೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.ಭಾರತ ಶಾಂತಿಪ್ರಿಯ ದೇಶ ನಿಜ. ಆದರೆ ಶಾಂತಿಯ ಸಹನೆ ಎಲ್ಲಿಯವರೆಗೆ? ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಪಾಕಿಸ್ತಾನವನ್ನು ಆಮೂಲಾಗ್ರವಾಗಿ ನಾಶ ಮಾಡಿ. ಇದು ಕೋಟ್ಯಂತರ ಜನರ ಆಗ್ರಹ. ಜಗತ್ತಿನ ಶಾಂತಿಗಾಗಿ ಪಾಕಿಸ್ತಾನದ ನಿರ್ನಾಮ ಅಗತ್ಯವಿದೆ ಎಂದು ಆಗ್ರಹಿಸಿದರು. ಜಾತಿಯನ್ನು ಕೇಳಿಲ್ಲ, ಹಿಂದೂ ಎಂಬುದನ್ನು ಕೇಳಿ ಗುಂಡು ಹೊಡೆದಿದ್ದಾರೆ. ಇದನ್ನು ಹಿಂದೂಗಳ ಅರಿತು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂದರು.
ಆರ್.ಎಸ್.ಎಸ್. ಪ್ರಮುಖ ರಾಮಕೃಷ್ಣ ಕೌಡಿಕೆರೆ ಸ್ವಾಗತಿಸಿದರು. ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯಕ ನಿರೂಪಿಸಿದರು. ಖಜಾಂಚಿ ನಾಗರಾಜ ಮದ್ಗುಣಿ ವಂದಿಸಿದರು. ಯಲ್ಲಾಪುರದಲ್ಲಿ ಆರೆಸ್ಸೆಸ್ ರಾಜ್ಯ ಪ್ರಮುಖ ಜಯರಾಮ ಬೊಳ್ಳಾಜೆ ನುಡಿ ನಮನ ಸಲ್ಲಿಸಿ ಮಾತನಾಡಿದರು.