ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಹೈದರಾಬಾದ್ ಸೇರಿದಂತೆ ಇರಾನ್ ಹಾಗೂ ರಷ್ಯಾದ ಖ್ಯಾತ ಮಲ್ಲರು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೈದಾನದಲ್ಲಿ ರೋಚಕ ಸೆಣಸಾಟ ನಡೆಸಿದರು. ಮೊದಲ ಕ್ರಮಾಂಕದ ಪಂದ್ಯದಲ್ಲಿ ಇರಾನ್‌ನ ಅಮೀರಮಹ್ಮದ್ ಹುಸೇನ್ ಹಾಜಿಪೌರಂಗನಿಯನ್ನು ಕೊಲ್ಹಾಪುರದ ಪೈಲ್ವಾನ್ ಶಿಕಂದರ್ ಶೇಖ್ ಮಣಿಸಿದರು. ಉಭಯ ಪೈಲ್ವಾನರ ಜಿದ್ದಾಜಿದ್ದಿನ ಸೆಣಸಾಟಕ್ಕೆ ಪ್ರೇಕ್ಷಕರು ಉಸಿರು ಬಿಗಿಹಿಡಿದು ಸಾಕ್ಷಿಯಾದರು.
ರಷ್ಯಾದ ಜಬರಲಿ ವಿರುದ್ಧ ಪುಣೆಯ ಪೈಲ್ವಾನ್ ಪೃಥ್ವಿರಾಜ್ ಮೋಹಳ್ ತಮ್ಮ ವಿಶಿಷ್ಟ ಪೇಚು ಪ್ರದರ್ಶಿಸಿ ಒಂದೇ ನೆಗೆತದಲ್ಲಿ ಚಿತ್‌ಗೊಳಿಸಿ ಜಯಶಾಲಿಯಾದರು. 2ನೇ ಕ್ರಮಾಂಕದಲ್ಲಿ ಇರಾನ್‌ನ ಅಲಿ ಅವರನ್ನು ಮುಂಬೈನ ಗಣೇಶ್ ಮಣಿಸಿದರು. 3ನೇ ಕ್ರಮಾಂಕದಲ್ಲಿ ವಿಕ್ರಮ ಘೋರ್ಪಡೆ ಹಾಗೂ ಶಿವಯ್ಯ ಕಂಕಣವಾಡಿ ಸಮಬಲದ ಪ್ರದರ್ಶನ ನೀಡಿದರು.ಅಸ್ಲಮ್ ಹನಗಮಡಿ, ಮಹ್ಮದ್ ಯರಗಟ್ಟಿ, ಸಮರ್ಥ ತೇರದಾಳ, ಗುರು ಚಾಂದಕೋಟಿ, ಆನಂದ ಸಿದಾಪೂರ, ಗುತ್ತೆಪ್ಪ, ಚಿಮ್ಮಡದ ಬೀರಪ್ಪ, ಲಾಡಸಾಬ ಹನಗಂಡಿ, ಜುನೇದ್ ಹನಗಂಡಿ, ಮನೋಜ್ ಸವಸುದ್ದಿ, ಶ್ರೀಶೈಲ ಶಿರೋಳ, ಅಮೀನ್ ಹನಗಮಡಿ, ಸೋನು ಜಾಧವ್, ಮಲ್ಲಿಕಾರ್ಜುನ ಹಾರೂಗೇರಿ, ಸಾಗರ ಇಚಿಡಿ, ಗಣೇಶ್ ಸಿಂದಗಿ, ಸಮೀರ್ ಹನಗಂಡಿ, ಗಜಾನಂದ ಹನಗಂಡಿ, ಆನಂದ ಹನಗೋಜಿ, ಸಿದ್ಧಾರೂಢ ತೇರದಾಳ, ವಿಷ್ಣವ ಪಾಟೀಲ ಹಾಗೂ ಸಂಜು ಇಂಗಳಗಿ ಸೇರಿದಂತೆ ಹಲವು ಮಲ್ಲರು ಗೆಲುವು ಸಾಧಿಸಿದರು.
ಒಟ್ಟು 82 ಜೋಡಿಗಳು ಮೈದಾನದಲ್ಲಿ ಸೆಣಸಾಡಿ ಕುಸ್ತಿ ಪ್ರೇಮಿಗಳನ್ನು ರಂಜಿಸಿದರು. ತಮ್ಮಿಷ್ಟದ ಪೈಲ್ವಾನರು ಗೆಲುವು ಸಾಧಿಸಿದಾಗ ಪ್ರೇಕ್ಷಕರು ನಗದು ಬಹುಮಾನ ನೀಡಿ ಮಲ್ಲರನ್ನು ಹುರಿದುಂಬಿಸಿದರು. ಹಿರೇಮಠ ಗಂಗಾಧರ ದೇವರು ಮೈದಾನ ಪೂಜೆ ನೆರವೇರಿಸಿದರು.