ಯುದ್ಧಪೀಡಿತ ಪ್ರದೇಶದಂತಿರುವ ಇಂದಿರಾ ನಗರ ಪುಟ್‌ಪಾತ್!

KannadaprabhaNewsNetwork |  
Published : Oct 03, 2026, 04:00 AM IST
indiranagara

ಸಾರಾಂಶ

ನಗರದ ಪ್ರತಿಷ್ಠಿತ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾ ನಗರ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಯುದ್ಧಪೀಡಿತ ದೇಶದಂತಿವೆ ಎಂದು ಕೆನಡಾ ದೇಶದ ಪ್ರಜೆ ಫ್ರೆಸನ್ ಎಂಬುವರು ಟೀಕಿಸಿದ್ದಾರೆ.

 ಬೆಂಗಳೂರು : ನಗರದ ಪ್ರತಿಷ್ಠಿತ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾ ನಗರ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಯುದ್ಧಪೀಡಿತ ದೇಶದಂತಿವೆ ಎಂದು ಕೆನಡಾ ದೇಶದ ಪ್ರಜೆ ಫ್ರೆಸನ್ ಎಂಬುವರು ಟೀಕಿಸಿದ್ದಾರೆ.

ಪಾದಚಾರಿ ಮಾರ್ಗದ ಅದ್ವಾನ

ಪಾದಚಾರಿ ಮಾರ್ಗದ ಅದ್ವಾನ ಸ್ಥಿತಿಯ ವಿಡಿಯೋವನ್ನು ಫ್ರೆಸನ್ ಅವರು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ವೈರಲ್ ಆಗಿದೆ.

ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ದೊಡ್ಡ ಗುಂಡಿ

ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳ ಕುರಿತು, ‘ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಸೃಷ್ಟಿಯಾಗುವ ಕುಳಿಯಂತೆ ಈ ಗುಂಡಿ ಇದೆ. ಇದರಲ್ಲಿ ಜನರು ಈಗ ಕಸ ಸುರಿಯುತ್ತಿದ್ದಾರೆ. ನಗರದಲ್ಲಿ ತಂತ್ರಜ್ಞಾನ ಕಂಪನಿಗಳ ಸಿಇಒ, ಸಂಸ್ಥಾಪಕರನ್ನು ಭೇಟಿ ಮಾಡಲು ಹೊರ ದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಇಂತಹ ಕಳಪೆ ಮೂಲಸೌಕರ್ಯ ನೋಡಿ ನಿರಾಸೆ ಮತ್ತು ಬೇಸರವಾಗುತ್ತದೆ ಎಂದಿದ್ದಾರೆ.

ನೈಜತೆ ಅನಾವರಣ: ಇಂದಿರಾ ನಗರದ 12ನೇ ಮುಖ್ಯ ರಸ್ತೆ ಅಧ್ವಾನವಾಗಿದೆ. ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ಅವಶೇಷಗಳು ಸಂಘರ್ಷದ ಪ್ರದೇಶದಂತೆ ಕಾಣಿಸುತ್ತವೆ. ಮರಗಳ ಬುಡಗಳು ಕಸದ ತೊಟ್ಟಿಗಳಾಗಿವೆ. ನಡೆದಾಡುವ ಸ್ಲ್ಯಾಬ್‌ಗಳು ಕಿತ್ತು ಹೋಗಿದ್ದು, ಕೆಲವು ಕಡೆ ಸ್ಲ್ಯಾಬ್ ಕಾಣೆಯಾಗಿವೆ. ಹಲವೆಡೆ ಗುಂಡಿಗಳು ಸೃಷ್ಟಿಯಾಗಿವೆ ಎಂದು ದೂರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತಂದೆಯ ಹಣ ಸುಲಿಗೆಗೆ ಕಿಡ್ನಾಪ್ ನಾಟಕವಾಡಿದ ಮಗ : ಅಂದರ್‌
ಹೆಬ್ಬಾಳ ಎಲಿವೇಟೆಡ್‌ನಿಂದ ಹಾನಿ ಇಲ್ಲ: ಬಿಡಿಎ