ಜಿ.ಸೋಮಶೇಖರ
ಈ ಸಂಸ್ಥೆಯ ಹೆಮ್ಮೆಯ ಇಂದು ಪದವಿಪೂರ್ವ ಕಾಲೇಜಿನ ಗಮನಾರ್ಹ ಸಂಗತಿ ಎಂದರೇ ಈ ಕಾಲೇಜಿನ ವಿದ್ಯಾರ್ಥಿಗಳು ನಿರಂತರ 11 ಬಾರಿ ದ್ವಿತೀಯ ಪಿಯುಸಿಯಲ್ಲಿ ಫಸ್ಟ್ ರ್‍ಯಾಂಕ್ ಪಡೆದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ರಾಜ್ಯದ ಹೆಮ್ಮೆಯ ಕೊಟ್ಟೂರಿನ ವಿದ್ಯಾಸಂಸ್ಥೆ ಇಂದು ಕಾಲೇಜ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಕೆಸಿಇಟಿ, ಗುಣಮಟ್ಟದ ತರಬೇತಿ ನೀಡುತ್ತಿದೆ. ಪಿಸಿಎಂಬಿ ಮತ್ತು ಪಿಸಿಎಂಸಿಎಸ್ ಸಂಯೋಜನೆಯಲ್ಲಿ ವ್ಯಾಸಂಗ ಮಾಡಲು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಇದೇ ಸಂಸ್ಥೆಯ ಸಾಕಷ್ಟು ವಿದ್ಯಾರ್ಥಿಗಳು ಮೆಡಿಕಲ್, ಎಂಜಿನಿಯರಿಂಗ್, ಬಿ.ಎಸ್ಸಿ, ಎ.ಜಿ., ಬಿ.ಫಾರ್ಮ ಇತ್ಯಾದಿ ಕೋರ್ಸ್‌ಗಳಿಗೆ ಉತ್ತಮ ರ‍್ಯಾಂಕ್‌ಗಳೊಂದಿಗೆ, ವ್ಯಾಸಂಗ ಮಾಡುತ್ತಿದ್ದಾರೆ. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ರ‍್ಯಾಂಕ್ ಪಡೆಯುತ್ತಿರುವುದು ಇಂದುವಿನ ಮತ್ತೊಂದು ವಿಶೇಷ. ರಾಯಚೂರಿನ ದೇವಿಶೆಟ್ಟಿ ಭರತ್ 10ನೇ ತರಗತಿಯಲ್ಲಿ ಶೇಕಡ 49.60 ಉತ್ತೀರ್ಣನಾಗಿ ಇಂದು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಶೇಕಡ 90.33 ಅಂಕ ಪಡೆದಿರುತ್ತಾನೆ.ವಾಣಿಜ್ಯ ವಿಭಾಗವನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ. ಸಿಇಬಿಎ, ಎಸ್‌ಇಬಿಎ, ಹೆಚ್‌ಇಬಿಎ ಸಂಯೋಜನೆಯಲ್ಲಿ ವ್ಯಾಸಂಗ ಮಾಡಲು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪಠ್ಯದ ಜೊತೆ ಸಿ.ಎ. ಪೌಂಢೇಷನ್, ಸಿಪಿಟಿ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಪಡೆಯುತ್ತಿರುವುದು ಇಂದು ಕಾಲೇಜಿನ ಮತ್ತೊಂದು ವಿಶೇಷ. ಬಳ್ಳಾರಿಯ ಕೆ.ಎಚ್. ಸುರೇಶ್ ಕುಮಾರ್ 10ನೇ ತರಗತಿಯಲ್ಲಿ ಶೇಕಡ 43.84 ಉತ್ತೀರ್ಣನಾಗಿ ಇಂದು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಶೇಕಡ 92.17 ಅಂಕ ಪಡೆದಿದ್ದಾನೆ.
ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿ, ಪಿಯುಸಿಯಲ್ಲಿ ಇಂದು ಕಾಲೇಜಿನಲ್ಲಿ ಪ್ರವೇಶ ಪಡೆದು, ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ನೂರಾರು ಉದಾಹರಣೆಗಳು ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಇವೆ.