ಗಜೇಂದ್ರಗಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ.20 ರಂದು ನಿಡಗುಂದಿಕೊಪ್ಪದ ಶಿವಯೋಗ ಮಂದಿರದ ಶಾಖೆಯಲ್ಲಿ ಗುರುವಾರ ಫೆ.20 ರಂದು ನಡೆಯಲಿದೆ. ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ. ಎ. ಹಿರೆವಡೆಯರ ಆಯ್ಕೆಯಾಗಿದ್ದಾರೆ.
ನರೇಗಲ್ಲ:ಗಜೇಂದ್ರಗಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆ.20 ರಂದು ನಿಡಗುಂದಿಕೊಪ್ಪದ ಶಿವಯೋಗ ಮಂದಿರದ ಶಾಖೆಯಲ್ಲಿ ಗುರುವಾರ ಫೆ.20 ರಂದು ನಡೆಯಲಿದೆ. ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ. ಎ. ಹಿರೆವಡೆಯರ ಆಯ್ಕೆಯಾಗಿದ್ದಾರೆ.
ಅಂದು ಮುಂಜಾನೆ 8 ಗಂಟೆಗೆ ಶಾಸಕ ಜಿ. ಎಸ್. ಪಾಟೀಲ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲರಿಂದ ಪರಿಷತ್ ಧ್ವಜಾರೋಹಣ. ತಾಲೂಕು ಅಧ್ಯಕ್ಷ ಅಮರೇಶ ಗಾಣಿಗೇರರಿಂದ ಕನ್ನಡ ಧ್ವಜಾರೋಹಣ ನೆರವೇರುವುದು. ತಹಶಿಲ್ದಾರ ಕಿರಣಕುಮಾರ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಆರ್. ಎಸ್. ಬುರಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು. ಬೆ. 8.30 ಕ್ಕೆ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಿಡಗುಂದಿ ಗ್ರಾಮದಿಂದ ಹೊರಟು ನಿಡಗುಂದಿಕೊಪ್ಪ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವುದು. ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರ ಸಾನಿಧ್ಯದಲ್ಲಿ, ಧರ್ಮರಮಠದ ಷಣ್ಮುಖಪ್ಪಜ್ಜನವರ ಸಮ್ಮುಖದಲ್ಲಿ, ನಿಡಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಕುಕನೂರ ಮೆರವಣಿಗೆಗೆ ಚಾಲನೆ ನೀಡುವರು. ಈ ಸಂದರ್ಭದಲ್ಲಿ ನಿಡಗುಂದಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು, ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿರುವರು.ಬೆ. 11 ಗಂಟೆಗೆ ಶಾಸಕ ಜಿ.ಎಸ್. ಪಾಟೀಲ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯ, ಅಭಿನವ ಚನ್ನಬಸವ ಸ್ವಾಮೀಜಿಯವರ ಸಾನಿಧ್ಯ ವಹಿಸಲಿದ್ದಾರೆ. ಸರ್ವಾಧ್ಯಕ್ಷ ಎಂ. ಎ. ಹಿರೆವಡೆಯರ ಅವರು ಸರ್ವಾಧ್ಯಕ್ಷ ನುಡಿ ನುಡಿಯಲಿದ್ದಾರೆ. ಎಸ್. ಎಸ್. ಭೂಸನೂರಮಠ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು. ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ ಆಶಯ ನುಡಿ ನುಡಿಯುವರು. ನರೇಗಲ್ಲ ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಧುರೀಣ ರವಿ ದಂಡಿನ, ಪಿ. ಕೆ. ಕರಡಿ, ಅಂದಪ್ಪ ಬಿಚ್ಚೂರ, ಇನ್ನೂ ಅನೇಕ ಗಣ್ಯರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.
ಮ 1 ಕ್ಕೆ ಸಾಹಿತ್ಯ ಸಂಸ್ಕೃತಿಗೆ ಗಜೇಂದ್ರಗಡ ತಾಲೂಕಿನ ಕೊಡುಗೆ ವಿಷಯ ಕುರಿತು ಗೋಷ್ಠಿ ನಡೆಯಲಿದ್ದು, ಗುರುಪಾದ ಸ್ವಾಮೀಜಿ ಸಾನಿಧ್ಯದಲ್ಲಿ ರಮೇಶ ಮರಾಠಿ ಆಶಯ ನುಡಿ ನುಡಿಯಲಿದ್ದಾರೆ.ಡಾ. ವೈ. ಆರ್. ಬೇಲೇರಿ ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕ ಎಸ್. ಆರ್. ನದಾಫ್ ಉಪನ್ಯಾಸ ನೀಡಲಿದ್ದಾರೆ. ಎಸ್. ಎಸ್. ಭೂಸನೂರಮಠರು ಸಂ. ಶಿ. ಭೂಸನೂರಮಠರ ಸಾಹಿತ್ಯಾವಲೋಕನ ಮಾಡಲಿದ್ದು, ಆರ್. ಕೆ. ಬಾಗವಾನ ಎಂ. ಡಿ. ಗೋಗೇರಿಯವರ ಸಾಹಿತ್ಯಾವಲೋಕನ ಮಾಡಲಿದ್ದಾರೆ. ವೀರಣ್ಣ ಶೆಟ್ಟರ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.ಮ. 3 ಕ್ಕೆ ವಿಶೇಷ ಉಪನ್ಯಾಸ ನಡೆಯಲಿದ್ದು ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಪುಂಡಲೀಕ ಕಲ್ಲಿಗನೂರ ಅಧ್ಯಕ್ಷತೆ ವಹಿಸುವ ಗೋಷ್ಠಿಯಲ್ಲಿ ಡಾ, ಕಲ್ಲಯ್ಯ ಹಿರೇಮಠ ಹಾನಗಲ್ಲ, ಶ್ರೀ ಗುರುಕುಮಾರೇಶ್ವರರ ಸಾಮಾಜಿಕ ಕೊಡುಗೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂದೇಶ ದೊಡ್ಡಮೇಟಿ ಸೇರಿದಂತೆ ಅನೇಕರು ಪಾಲ್ಗೊಳ್ಲಲಿದ್ದಾರೆ.ಮ 3.30 ಕ್ಕೆ ಕವಿಗೋಷ್ಠಿ ಜರುಗಲಿದ್ದು ಸದಾಶಿವ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದು, ಕಸ್ತೂರೆಮ್ಮ ಹಿರೇಮಠ ಅಧ್ಯಕ್ಷತೆ ವಹಿಸುತ್ತಾರೆ. ಎಚ್.ವೈ.ಕುರಿ ಆಶಯ ನುಡಿಗಳನ್ನಾಡಲಿದ್ದು, ಶಶಿಕಲಾ ಪಾಟೀಲ ಮುಖ್ಯ ಅತಿಥಿಗಳಾಗಲಿದ್ದಾರೆ.
ಸಂಜೆ 5 ಕ್ಕೆ ತಾಲೂಕು ಅಧ್ಯಕ್ಷ ಅಮರೇಶ ಗಾಣಿಗೇರರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಂತರ ಸನ್ಮಾನ ಜರುಗಲಿದೆ.
ಸಂಜೆ 7 ಕ್ಕೆ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಹಿಸಲಿದ್ದು, ಶಾಸಕ ಜಿ. ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ. ಎ. ಕೆಂಚರೆಡ್ಡಿ ಸಮಾರೋಪ ನುಡಿ ನುಡಿಯಲಿದ್ದು, ಸರ್ವಾಧ್ಯಕ್ಷ ಎಂ. ಎ. ಹಿರೆವಡೆಯರ ಸಮ್ಮೇಳನಾಧ್ಯಕ್ಷರ ನುಡಿ ನುಡಿಯಲಿದ್ದಾರೆ. ವಿ. ಪ. ಸದಸ್ಯ ಎಸ್. ವಿ. ಸಂಕನೂರ, ಮಾಜಿ ಸಚಿವ ಕೆ. ಜಿ. ಬಂಡಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.