ಬ್ಯಾಡಗಿ: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಅಗತ್ಯ ತಾಂತ್ರಿಕ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ಒದಗಿಸುವ ಕಾರ್ಯವಾಗಬೇಕಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ಡಿ.15ರಿಂದ ಅನುಷ್ಠಾನಗೊಳ್ಳಲಿರುವ ಎಫ್.ಎಫ್.ಎಸ್ ಮೊಬೈಲ್ ಆ್ಯಪ್ ಬಳಕೆ ಮಾಡಿಕೊಂಡು ತಮಗೆ ಅಗತ್ಯವಿರುವ ರಸಗೊಬ್ಬರದ ವಿಧ ಹಾಗೂ ಪ್ರಮಾಣವನ್ನು ನಮೂದಿಸಿ ಮುಂಗಡವಾಗಿ ಕಾಯ್ದಿ ರಿಸಿಕೊಳ್ಳಬಹುದು. ನಂತರ ಮೂಲಕ ಲಭ್ಯವಾಗುವ ಕ್ಯೂಆರ್ ಕೋಡ್ ಅಥವಾ ಟೋಕನ್ ಬಳಸಿ ಸಂಬಂಧಿಸಿದ ರಸಗೊಬ್ಬರ ಮಾರಾಟ ಕೇಂದ್ರದಿಂದ ರಸಗೊಬ್ಬರ ಖರೀದಿಸಬಹುದು. ಈ ವ್ಯವಸ್ಥೆಯಿಂದ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ರಸಗೊಬ್ಬರದ ದಾಸ್ತಾನು ಮತ್ತು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳು “ತೇಗ ಸಿರಿ” ಸಮಗ್ರ ವೃಕ್ಷಾಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದರು. ನಂತರ ಖೇತ್ ಬಚಾವೋ ಅಭಿಯಾನದ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷರಾದ ನಿಂಗನಗೌಡ ಪಾಟೀಲ್, ಜಿಲ್ಲಾ ಪ್ರತಿನಿಧಿ ಗಂಗಾಧರ ಎಲಿ, ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು, ಕೃಷಿ ಅಧಿಕಾರಿ ನಾಗರಾಜ್ ಬನ್ನಿಹಟ್ಟಿ, ತೋಟಗಾರಿಕೆ, ಪಶುಸಂ ಗೋಪನೆ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.