ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮೂಲ ಸೌಲಭ್ಯಗಳು ಒಮ್ಮೆ ಮಾಡಿದರೆ ಮುಗಿಯುವಂತದ್ದಲ್ಲ. ರಸ್ತೆ, ಚರಂಡಿ ಮೊದಲಾದವುಗಳನ್ನು ಆಗಾಗ ಮಾಡುತ್ತಲೇ ಇರಬೇಕಾಗುತ್ತದೆ. ಕ್ಷೇತ್ರದ ಯಾವುದೇ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಾನು ಇಡೀ ರಾಜ್ಯಕ್ಕೆ ಮಂತ್ರಿಯಾಗಿದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಪಾಲಿಗೆ ಎಂದಿಗೂ ಮನೆಮಗಳಾಗಿರುವೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸು. ಕ್ಷೇತ್ರದ ಮಗಳಾಗಿ ಜನರ ಸೇವೆ ಮಾಡುತ್ತಿರುವೆ. ಚುನಾವಣೆ ಸಂದರ್ಭದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಗ್ರಾಮದ ಜನರಿಗೆ ಮಾತು ಕೊಟ್ಟಿದ್ದೆ. ಇದೀಗ ಕೊಟ್ಟ ಮಾತಿನಂತೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿರುವೆ. ಗ್ರಾಮದ ಅಭಿವೃದ್ಧಿಯಲ್ಲಿ ಜನರು ಕೈ ಜೋಡಿಸಬೇಕೆಂದು ಸಚಿವರು ಸಲಹೆ ನೀಡಿದರು.ಗುಣಮಟ್ಟದ ವಸ್ತುಗಳ ಬಳಕೆ ಮಾಡುವ ಮೂಲಕ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಸಚಿವರು, ರಸ್ತೆಗೆ ನೀರು ಕುಡಿಸಿ, ಬಾಳಿಕೆ ಬರುವಂತೆ ನೋಡಿಕೊಳ್ಳಿ ಎಂದು ಜನರಿಗೆ ವಿನಂತಿಸಿದರು.
ಹಲಗಾ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಿಂದ ಮಾಸ್ತಮರ್ಡಿ ಕ್ರಾಸ್ ವರೆಗಿನ ರಸ್ತೆಯ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ವೇಳೆ 1108 ಶ್ರೀ ಸಿದ್ಧಸೇನ ಮಹಾರಾಜರು, ಮಂಜುನಾಥ ಕೋಲಕಾರ, ಸಂತೋಷ ಅಷ್ಟೇಕರ್, ನಾಗೇಶ ಮಹಾರ, ಮಾರುತಿ ತಾನಸಿ, ಗೋಪಾಲ ಮರಕಟನಾಳ, ಪ್ರಕಾಶ ಪಾಟೀಲ, ಸುರೇಶ ಪಾಟೀಲ, ರಾಜು ಪಾಟೀಲ, ವಿಶ್ವನಾಥ ಕೆ, ನಾಗಪ್ಪ ತಳವಾರ, ರಮೇಶ ಜಳಕನ್ನವರ, ಬಸವರಾಜ ವಾನಿ, ನಾನದೇವ ಜೋಗನ್ನವರ, ಶಿವನಗೌಡ ಪಾಟೀಲ, ಯಮನಪ್ಪ ಸಣ್ಣಮನಿ, ಬಸವರಾಜ ಪಾರ್ವತಿ, ರಾಕೇಶ ಪಾಟೀಲ, ಮಹಾವೀರ ಪಾಟೀಲ, ಸುಕುಮಾರ ಹುಡೇದ, ಭರತೇಶ ಬೆಲ್ಲದ, ನಾಗಯ್ಯಸ್ವಾಮಿ ಪೂಜಾರ ಉಪಸ್ಥಿತರಿದ್ದರು.