ಕನ್ನಡಪ್ರಭ ವಾರ್ತೆ, ತರೀಕೆರೆ.
ಪುರಸಭೆ ಕಾರ್ಯಾಲಯದಿಂದ ಗುರುವಾರ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಭರವಸೆ ನೀಡಿದರು.
ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಇತ್ಯಾದಿ ಮೂಲ ಸೌಲಭ್ಯ ಒದಗಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ, ಕಿಶೋರಿಯರಿಗೆ ಮಕ್ಕಳಿಗೆ ವಿತರಿಸುತ್ತಿರುವ ಪೌಷ್ಠಿಕಾಂಶಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ, ಗುಣ ಮಟ್ಟದ ಧಾನ್ಯ ವಿತರಿಸಬೇಕು, ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಟ್ಟಣದಲ್ಲಿ ವಿದ್ಯುತ್ ಹೈಟೆನ್ ಷನ್ ತಂತಿಗಳು ಅನೇಕ ಮನೆಗಳ ಮೇಲೆ ಹಾದುಹೋಗಿದೆ, ಮಳೆಗಾಲದಲ್ಲಿ ಕರೆಂಟು ಶಾಕ್ ಹೊಡೆಯುವ ಸಂಭವವಿರುತ್ತದೆ ವಿದ್ಯುತ್ ಇಲಾಖೆ ಸುರಕ್ಷತೆ ಒದಗಿಸಬೇಕು ಎಂದು ತಿಳಿಸಿದರು.ಸದಸ್ಯ ಟಿ.ಎಸ್.ಬಸವರಾಜ್ ಮಾತನಾಡಿ ಮಾರಿಗದ್ದಿಗೆ ವೃತ್ತದ ಬಳಿಯ ಅಂಗನವಾಡಿ ಕೇಂದ್ರ ಕಟ್ಟಡದ ಹಂಚುಗಳೆಲ್ಲಾ ಬಿದ್ದು ಹೋಗಿದೆ, ಕೇಂದ್ರದ ಪಕ್ಕದಲ್ಲೇ ಗಿಡಮರಗಳು ಬೆಳೆದಿದೆ, ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಿಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸುವುದಿಲ್ಲ, ಪಟ್ಟಣ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗರ್ಭಿಣಿಯರಿಗೆ, ಕಿಶೋರಿಯರಿಗೆ ಸರ್ಕಾರ ನೀಡುತ್ತಿರುವ ಪೌಷ್ಠಿಕಾಂಶಗಳ ಸಮರ್ಪಕ ವಿತರಣೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.
ಸದಸ್ಯ ಟಿ.ಜಿ.ಶಶಾಂಕ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿ 75ರಷ್ಟು ಭಾಗ ಮನೆಗಳ ಖಾತೆಗಳು ಆಗಿಲ್ಲ, ಇ-ಸ್ವತ್ತು ಸಿಗದೆ ಹೊಸ ಮನೆಗಳನ್ನು ಕಟ್ಟಲು ಪುರಸಭೆ ಅನುಮತಿ ನೀಡುತ್ತಿಲ್ಲ, ಪುರಸಭೆ ಸ್ಥಳೀಯವಾಗಿ ಪ್ರಾಧಿಕಾರ ರಚನೆ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲು ಅನುಮತಿ ಮಾಡಿ ಕೊಡಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವಿನ್, ಪುರಸಭೆ ಸದಸ್ಯರು, ಪರಿಸರ ಅಭಿಯಂತರರಾದ ತಾಹಿರ ತಸ್ನೀಮ್, ವ್ಯವಸ್ಥಾಪಕ
ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಪುರಸಭೆ ಅಧ್ಯಕ್ಷ ಪರಮೇಶ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ಸಾಮಾನ್ಯ ಸಭೆ ಏರ್ಪಡಿಸ ಲಾಗಿತ್ತು. ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವಿನ್, ಪುರಸಭ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.