ಶಿಕ್ಷಣದಲ್ಲಿ ಭಾರತೀಯತೆ ತಂದರೆ ರಾಷ್ಟ್ರ, ಮಕ್ಕಳ ಅಭಿವೃದ್ಧಿ: ಪ್ರೊ.ಬಸವರಾಜ ಡೊಣೂರು

KannadaprabhaNewsNetwork |  
Published : Jul 14, 2026, 01:15 AM IST
 | Kannada Prabha

ಸಾರಾಂಶ

ರಾಷ್ಟ್ರದ ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸವಾಗಬೇಕಾದರೆ, ಶಿಕ್ಷಣದಲ್ಲಿ ಭಾರತೀಯತೆ ತರುವುದರಿಂದ ಮಾತ್ರ ಸಾಧ್ಯವೆಂದು ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪ್ರೊ.ಬಸವರಾಜ ಡೊಣೂರು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಷ್ಟ್ರದ ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸವಾಗಬೇಕಾದರೆ, ಶಿಕ್ಷಣದಲ್ಲಿ ಭಾರತೀಯತೆ ತರುವುದರಿಂದ ಮಾತ್ರ ಸಾಧ್ಯವೆಂದು ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪ್ರೊ.ಬಸವರಾಜ ಡೊಣೂರು ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಸ್ಮಿತೆಯಿರಲಿ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯ, ನಡೆ ನುಡಿಯಲ್ಲಿ ತನ್ನ ದೇಶದ ಜೀವನ ವಿಧಾನವನ್ನು ಅಳವಡಿಸಿಕೊಳ್ಳಬೇಕು, ದೇಶದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯಬೇಕು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಪಾಲಕರು, ಶಿಕ್ಷಕರು ಮತ್ತು ಸಂಸ್ಥಾಚಾಲಕರು, ಸಾಮಾಜಿಕ ಸಂಘಟನೆಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಕೈಜೊಡಿಸೋಣ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಭಯ ಹೋಗಲಾಡಿಸಲು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಮತ್ತು ಕಾರ್ಯಗಾರಗಳನ್ನು ಆಯೋಜಿಸೋಣ ಎಂದರು.

ಒತ್ತಡಮುಕ್ತ ಶೈಕ್ಷಣಿಕ ವಾತಾವಾರಣದಿಂದ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯ. ತಾಯಿ ಗರ್ಭದಿಂದಲೇ ಮಕ್ಕಳ ಶಿಕ್ಷಣ ಆರಂಭವಾಗುವುದು. ಹೀಗಾಗಿ ಶಿಕ್ಷಣ ಮತ್ತು ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತಾಮಾಡಿದ ಭಾರತೀಯ ಶಿಕ್ಷಣ ಮಂಡಲದ ಪ್ರಾಂತ ಸಹ ಕಾರ್ಯದರ್ಶಿ, ಡಾ. ಪಲ್ಲವಿ ಪಾಟೀಲ ಸೇಡಂ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೂಲ್ಯ ವಾದದ್ದು, ಶಿಕ್ಷಕ ವಿಷಯ ಶಿಕ್ಷಕನಾಗದೆ, ಗುರುವಾಗುವಡೆಗೆ ಸಾಗಬೇಕು ಎಂದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪಾಲಕಕು ಅಂಕಪಟ್ಟಿಯ ಅಂಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಕಿಂದ, ಇಂದು ಮಕ್ಕಳಿಗೆ ಶಿಕ್ಷಣವೆಂದರೆ ಜೈಲಿನಂತೆ ಭಾಸವಾಗುತ್ತಿದೆ.ಆಟದ ಜತೆಗೆ ಪಾಠವಿರಲಿ. ದೇಶ ಕ್ರಿಡೆಗಳಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.

ಮಕ್ಕಳಿಗೆ ಮುಕ್ತ ಶೈಕ್ಷಣಿಕ ವಾತವರಣ ಕಲ್ಪಿಸಬೇಕು, ವರ್ತಮಾನದ ಶೈಕ್ಷಣಿಕ ವ್ಯವಸ್ಥೆ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದೆ. ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಒತ್ತು ನೀಡುತ್ತಿಲ್ಲ ಎಂದರು.

ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಅನುಸಂಧಾನ ಗತಿವಿಧಿ ಪ್ರಾಂತ ಪ್ರಮುಖರಾದ ಪ್ರೊ. ರವೀಂದ್ರ ಹೆಡಗಿ , ಜಿಲ್ಲಾ ಉಪಾಧ್ಯಕ್ಷೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಜಿಲ್ಲಾ ಉಪಾಧ್ಯಕ್ಷ ಡಾ. ಉದಯ ಪಾಟೀಲ, ಡಾ. ಮಹೇಶ ತನವಾಡೆ, ಡಾ.ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ. ,ಡಾ. ನಾಗಬಸವಣ್ಣ ಗುರಾಗೋಳ ,ಪ್ರೊ. ಭಾರತಿ ಹರಸೂರ್ ,ಪ್ರೊ.ಸುವರ್ಣಾ ನಂದ್ಯಾಳ, ಡಾ.ಜಗದೀಶ್ ಬಿರಾದಾರ, ಶಶಿಕಲಾ ಬಿ.ಎಸ್.. ಮಳಯ್ಯ ಹಿರೇಮಠ, ಡಾ.ವಿಜಯಕುಮಾರ ಹಾಜರಿದ್ದರು.

ಪ್ರಾಂತ ವಿದ್ಯಾಲಯ ಗತಿವಿಧಿ ಪ್ರಮುಖ ಶರಣು ಉದನೂರ ನಿರೂಪಿಸಿದರು. ಡಾ.ಶರಭಯ್ಯ ಸ್ವಾಮಿ ಪರಿಚಯಸಿ ಸ್ವಾಗತಿಸಿದರು, ಡಾ.ಉದಯ ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗೆಮಡು ಗಂಗಾಧರೇಶ್ವರ ಕ್ಷೇತ್ರದ ಅಭಿವೃದ್ಧಿಗೆ ವೇಗ
ಅರಸೀಕೆರೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ