ಕನ್ನಡಪ್ರಭ ವಾರ್ತೆ ಚಾಮರಾಜನಗರಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶೈಕ್ಷಣಿಕ ಸಹಾಯಧನ ಕಡಿತ ಮಾಡುವ ಮೂಲಕ ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕೂಡ್ಲೂರು ಶ್ರೀಧರಮೂರ್ತಿ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ನೀಡುತ್ತೇವೆ ಎಂದು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕಣಿಕವಾಗಿ ನೀಡುತ್ತಿರುವ ವಿದ್ಯಾರ್ಥಿ ವೇತನ ಕಡಿತ ಮಾಡಿ, ಬಡ ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದೆ ಎಂದರು. ವಿದ್ಯಾಭ್ಯಾಸ ಮಾಡಲು 1ನೇ ತರಗತಿಯಿಂದ 4ನೇ ತರಗತಿಯವರೆಗೆ ರೂ.5 ಸಾವಿರ ಬದಲು 1100 ರು. 5ರಿಂದ 8ನೇ ತರಗತಿ ವರಗೆ 5 ಸಾವಿರ ಬದಲು 1250, 9ರಿಂದ 10ನೇ ತರಗತಿವರಗೆ 12 ಸಾವಿರ ಬದಲು 3 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ 15 ಸಾವಿರ ಬದಲು 4600, ಪಾಲಿಟೆಕ್ನಿಕ್, ಡಿಪ್ಲೋಮಾ, ಐಟಿಐ 20 ಸಾವಿರಕ್ಕೆ ಬದಲು 6 ಸಾವಿರ, ಬಿಎಸ್ಸಿ ನರ್ಸಿಂಗ್, ಜೆಎನ್‌ಎಂ, ಪ್ಯಾರಾಮೆಡಿಕಲ್ ಕೋರ್ಸ್‌ಗಳು 40 ಸಾವಿರಕ್ಕೆ ಬದಲು 10 ಸಾವಿರ, ಡಿಎಡ್ 25 ಸಾವಿರಕ್ಕೆ ಬದಲು 4600 , ಬಿಎಡ್ 25 ಸಾವಿರಕ್ಕೆ ಬದಲು 6000, ಬಿಇ, ಬಿಟೆಕ್ 50 ಸಾವಿರಕ್ಕೆ ಬದಲು 10 ಸಾವಿರ, ವೈದ್ಯಕೀಯ ಶಿಕ್ಷಣ 60 ಸಾವಿರಕ್ಕೆ ಬದಲು 12 ಸಾವಿರ, ಪಿಎಚ್‌ಡಿ ಮತ್ತು ಎಂಫಿಲ್‌ಗೆ 25 ಸಾವಿರ ಬದಲು 11 ಸಾವಿರ, ಐಐಟಿ, ಎಂಎಸ್, ಎಂಬಿಎದಂತಹ ಕೋರ್ಸ್‌ಗಳಿಗೆ ಸಂಪೂರ್ಣ ಬೋಧನಾ ಶುಲ್ಕದ ಬದಲು 11 ಸಾವಿರ ರು. ಗಳನ್ನು ಮಾತ್ರ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಮಹಾಲಿಂಗಯ್ಯ ಸತ್ತೇಗಾಲ, ಗ್ರಾಪಂ.ಮಾಜಿ ಸದಸ್ಯ ಜಯಶಂಕರ್ ಎಚ್.ಮೂಕಳ್ಳಿ, ಮಹದೇವಯ್ಯ ಹೊಂಗನೂರು, ಚಂದ್ರಶೇಖರ ಅಂಬಳೆ ಹಾಜರಿದ್ದರು.