ಕೇಂದ್ರ ಸರ್ಕಾರದಿಂದ ರೈತರಿಗೆ ಅನ್ಯಾಯ: ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Apr 11, 2024 12:48 AM

ಸಾರಾಂಶ

ಬರದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಬರಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡಿದೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬರದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಬರಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದರು.

ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಹಮ್ಮಿಕೊಂಡ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ 223 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಹಲವು ತಾಲೂಕುಗಳಲ್ಲಿ ಬರದ ಸ್ಥಿತಿ ತೀವ್ರವಾಗಿದೆ. ಲಕ್ಷಾಂತರ ಎಕರೆಯಷ್ಟು ಬೆಳೆ ನಷ್ಟವಾಗಿದೆ. ಹಲವೆಡೆ ಜನರು ಗುಳೆ ಹೋಗುವ ಸ್ಥಿತಿಯೂ ಎದುರಾಗಿದೆ. ರಾಜ್ಯದಲ್ಲಿ ಬರದ ಕಾರಣದಿಂದ ಆಗಿರುವ ನಷ್ಟದ ಸ್ವಲ್ಪ ಪ್ರಮಾಣವನ್ನು ಕೇಂದ್ರ ಸರ್ಕಾರವು ತುಂಬಿಸಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ತಂಡವೂ ರಾಜ್ಯಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸಿದೆ. ಆದರೆ ಕೇಂದ್ರ ಸರ್ಕಾರ ಈವರೆಗೂ ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಮತ್ತು ‌ಅನ್ನದಾತರ ವಿಚಾರದಲ್ಲಿ ‌ಕೇಂದ್ರ ತೋರಿದ ಧೋರಣೆ ಸರಿಯಲ್ಲ. ಕೂಡಲೇ ಬರ ಪರಿಹಾರ ಬಿಡುಗಡೆಗೊಳಿಸಿ ರಾಜ್ಯದ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿ ಎಂದು ತಾಕೀತು‌ ಮಾಡಿದರು.

ಕೊಪ್ಪಳ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಹಿಟ್ನಾಳ ಮತ್ತು ‌ಕರಡಿ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದೆ. ನಾವು ಇಷ್ಟು ವರ್ಷ ಕುಟುಂಬ ಮತ್ತು ವೈಯಕ್ತಿಕ ಟೀಕೆ ಮಾಡುವ ರಾಜಕಾರಣ ಮಾಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕುಟುಂಬ ಹತ್ತಿಕ್ಕಬೇಕು ಎಂಬ ಉದ್ದೇಶದಿಂದ ಮತ್ತೊಬ್ಬರು ಪ್ರಯತ್ನಪಟ್ಟರು. ಅದು‌ ಫಲಿಸಲಿಲ್ಲ. ಸಂಗಣ್ಣ ಕರಡಿ ಮುತ್ಸದಿ ರಾಜಕಾರಣಿ ಅವರನ್ನು ಕಡೆಗಣಿಸಿರುವುದು ಅವರ ಪಕ್ಷಕ್ಕೆ ನಷ್ಟ. ಮೂರನೇ ವ್ಯಕ್ತಿಯಿಂದ ಇಂದು ನೀವೆಲ್ಲರೂ ನಮ್ಮೊಂದಿಗೆ ಸೇರಿರುವುದೇ ಅದೃಷ್ಟ ಎಂದು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮುಖಂಡರಿಗೆ ಹೇಳಿದರು.

ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅನೇಕ ಬಡಕುಟುಂಬಗಳು ಜೀವನ ಸಾಗಿಸುತ್ತಿವೆ. ಅನೇಕ ಕುಟುಂಬಗಳು ಸರ್ಕಾರದ ಯೋಜನೆಗಳನ್ನೆ ನೆಚ್ಚಿಕೊಂಡಿವೆ. ಇನ್ನಾದರೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಟೀಕೆ ಮಾಡೋದನ್ನು ಕೈಬಿಡಿ ಎಂದರು.

ಈ ಸಂದರ್ಧದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನಾರ್ದನ ಹುಲಿಗಿ, ಮುಖಂಡರಾದ ವೀರನಗೌಡ ಪಾಟೀಲ್, ಪ್ರಸನ್ನ ಗಡಾದ, ವೆಂಕಟೇಶ ಕಂಪಸಾಗರ, ಪಾಲಾಕ್ಷಪ್ಪ ಗುಂಗಾಡಿ, ವೈಜನಾಥ ದಿವಟರ್, ವಿರುಪಾಕ್ಷಯ್ಯ ಗದುಗಿನಮಠ, ವೀರಣ್ಣ ಗಾಣಿಗೇರ್, ಈರಣ್ಣ ಹುಲಿಗಿ, ಬಾಲಚಂದ್ರನ ಮುನಿರಾಬಾದ್, ಬಸವರಾಜ ಬೋವಿ, ಯಂಕಪ್ಪ ಹೊಸಳ್ಳಿ, ನಾಗರಾಜ ಪಟವಾರಿ, ಕನಕರಾಜ ಬುಳ್ಳಾಪುರ, ಕೃಷ್ಣ ಗಡಾದ, ಕಾವೇರಿ ರ್‍ಯಾಗಿ, ಪದ್ಮಾವತಿ ಕಂಬಳಿ, ಖಾಜವಲಿ ಹುಲಿಗಿ, ಅಶೋಕ ಹಿಟ್ನಾಳ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಸೇರ್ಪಡೆಗೊಂಡವರು:

ತಾಪಂ ಮಾಜಿ ಬಿಜೆಪಿ ಸದಸ್ಯ ಜಂಬಣ್ಣ ಜಂತಕಲ್, ಬಿಜೆಪಿ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಸಿದ್ದೇಶ್ ಪೂಜಾರ, ವಕೀಲರಾದ ಆನಂದಹಳ್ಳಿ ಪ್ರಕಾಶ, ಎಸ್.ಎಂ. ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಬಸವರಾಜ ಭೋವಿ, ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ಬಸವಲಿಂಗಯ್ಯ ಗದಗಿನಮಠ, ಮುಖಂಡರಾದ ವೀರಯ್ಯ ಹುಲಿಗಿ ಮತ್ತು ಪರಶುರಾಮ ನಾಯಕ ಹುಲಿಗಿ, ಬಸವರಾಜ ಕರ್ಕಿಹಳ್ಳಿ, ಗೋಣಿಬಸಪ್ಪ ಕಟ್ಟಿಮನಿ, ಹನುಮಂತಪ್ಪ ಭೋವಿ, ವೀರೇಶ ಕನಕಗಿರಿ, ದೇವರಾಜ ಸಿಂದೋಗಿ, ಶಿವರಾಜ್ ಕರ್ಕಿಹಳ್ಳಿ, ನಂದೀಶ್ ಕರ್ಕಿಹಳ್ಳಿ, ವಿನಯ ಸಿಂದೋಗಿ, ರೇವಣ್ಣಸಿದ್ದಯ್ಯ ತಳಕಲ್ಲ, ಉಮೇಶ ಕರ್ಕಿಹಳ್ಳಿ ಸೇರಿದಂತೆ ಅನೇಕ ಮುಖಂಡರು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

Share this article