ಬೋಗಸ್ ಕಾರ್ಡುಗಳಿಂದಾಗಿ ನೈಜ ಕಾರ್ಮಿಕರಿಗೆ ಅನ್ಯಾಯ : ರಘು

KannadaprabhaNewsNetwork |  
Published : Mar 21, 2025, 12:32 AM IST
ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಗುರುವಾರ ಆರಂಭಗೊಂಡ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಜಿ. ರಘು ಉದ್ಘಾಟಿಸಿದರು. ಜಿ. ರಮೇಶ್‌, ನಾರಾಯಣಸ್ವಾಮಿ, ಡಾ. ಶ್ಯಾಮ್‌, ಅಬ್ದುಲ್‌ ಕಬೀರ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಕಾರ್ಡುದಾರರ ಹಾವಳಿ ಹೆಚ್ಚಾಗಿದ್ದು, ಇದರಿಂದ ನೈಜ ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಜಿ. ರಘು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಕಾರ್ಡುದಾರರ ಹಾವಳಿ ಹೆಚ್ಚಾಗಿದ್ದು, ಇದರಿಂದ ನೈಜ ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಜಿ. ರಘು ಹೇಳಿದ್ದಾರೆ. ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್‌, ನಿರ್ಮಿತಿ ಕೇಂದ್ರ, ಇನ್‌ಸ್ಟ್ರಕ್ಟ್ ಮತ್ತು ಫಾಸಕ್ ಕೆಮಿಕಲ್ ಕಂಪನಿ ಆಶ್ರಯದಲ್ಲಿ ನಗರದ ಹೊರವಲಯದ ಶಾಂತಿನಗರ ಬಡಾವಣೆಯ ನಿರ್ಮಿತಿ ಕೇಂದ್ರದಲ್ಲಿ ಗುರುವಾರ ಆರಂಭ ವಾದ ಕಟ್ಟಡ ಕಾರ್ಮಿಕರ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಎಂದು ಕಾರ್ಮಿಕ ಕಲ್ಯಾಣ ಮಂಡಳಿ ರಚನೆಯಾಗಿದೆ. ಈ ಮೂಲಕ ಹಲವು ಸೌಲಭ್ಯಗಳನ್ನು ಕಾರ್ಮಿಕರ ಅಭಿವೃದ್ಧಿಗೆ ಜಾರಿ ಮಾಡಿದೆ. ಈ ಸೌಲಭ್ಯ ಅರ್ಹ ಕಟ್ಟಡ ಕಾರ್ಮಿಕರಿಗೆ ತಲುಪಬೇಕೆಂಬುದು ಕಾರ್ಮಿಕ ಸಂಘಟನೆ ಉದ್ದೇಶವಾಗಿದೆ. ಈ ಸಂಬಂಧ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್ ಮತ್ತು ನಿರ್ಮಿತಿ ಕೇಂದ್ರ ಕಾರ್ಮಿಕರ ವೃತ್ತಿ ಕೌಶಲ್ಯತೆ ಹೆಚ್ಚಿಸಿಕೊಳ್ಳಲು ಈ ತರಬೇತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ತಮ್ಮ ವೃತ್ತಿ ಕೌಶಲ್ಯತೆ ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್‌ ಮತ್ತು ನಿರ್ಮಿತಿ ಕೇಂದ್ರ ಹಾಗೂ ಬೆಂಗಳೂರಿನ ಇನ್‌ಸ್ಟ್ರಕ್ ಕಂಪನಿ ಆಶ್ರಯದಲ್ಲಿ ಈ ಕೌಶಲ್ಯ ತರಬೇತಿ ಹಮ್ಮಿಕೊಂಡಿದ್ದು, ಎರಡು ದಿನಗಳ ಕಾಲ ನಡೆಯುವ ಈ ತರಬೇತಿ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸಿವಿಲ್ ಇಂಜಿನಿಯರ್ ಅಸೋಸಿಯೇಷನ್‌ ವೃತ್ತಿ ಕೌಶಲ್ಯ ಅಭಿವೃಧ್ಧಿಪಡಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದೆ. ಮುಂದಿನ ದಿನಗಳಲ್ಲಿ ಸಿವಿಲ್ ಇಂಜಿನಿಯರ್‌ಗಳಿಗೆ ದ್ರೋಣ್ ಸರ್ವೆ ಮತ್ತು ಟೋಟಲ್ ಸ್ಟೇಷನ್ ಸರ್ವೆ ಮುಂತಾದ ವಿಷಯಗಳಲ್ಲಿ ವಿಶೇಷ ತರಬೇತಿ ಶಿಬಿರ ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ ಎಂದರು.ಕಟ್ಟಡ ನಿರ್ಮಾಣ ಕೆಲಸದಲ್ಲಿ ಮಹಿಳೆಯರು ಹೆಚ್ಚಾಗಿ ಕೈಯಾಳುಗಳಾಗಿ ಕೆಲಸ ಮಾಡುತ್ತಿದ್ದು, ಇವರು ಸಹ ಗಾರೆ ಕೆಲಸ ಹಾಗೂ ಮೇಸ್ತ್ರಿ ಕೆಲಸ ಮಾಡಬೇಕೆಂಬ ಸದುದ್ದೇಶ ತಮ್ಮದಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಈ ತರಬೇತಿಯಲ್ಲಿ ಹೆಚ್ಚು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ಬೆಂಗಳೂರಿನ ಇನ್‌ಸ್ಟ್ರಕ್ ಕಂಪನಿ ಉಪಾಧ್ಯಕ್ಷ ಕೆ. ಮಂಜುನಾಥ್ ಮಾತನಾಡಿ, ಕಾರ್ಮಿಕರಿಗೆ ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿ ನೀಡುತ್ತಿರುವ ನಿರ್ಮಿತಿ ಕೇಂದ್ರ ಮತ್ತು ಸಿವಿಲ್ ಇಂಜಿನಿಯರ್ ಸಂಘದ ಕಾರ್ಯ ಶ್ಲಾಘಿಸಿದರು. ಚಿಕ್ಕಮಗಳೂರು ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ್ ಮಾತನಾಡಿ, ಈವರೆಗೆ ಯಾರೂ ಮಾಡದ ಕಾರ್ಮಿಕರಿಗೆ ತರಬೇತಿ ನೀಡುವ ಕೆಲಸವನ್ನು ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಮಾಡುವ ಮೂಲಕ ಕಾರ್ಮಿಕರಲ್ಲಿ ವೃತ್ತಿ ಕೌಶಲ್ಯತೆ ಹೆಚ್ಚುವಂತೆ ಮಾಡಿದೆ ಎಂದು ತಿಳಿಸಿದರು.ಚಿಕ್ಕಮಗಳೂರಿನ ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ಯಾಮ್, ಬೆಂಗಳೂರಿನ ಇನ್‌ಸ್ಟ್ರಕ್ ಕಂಪನಿ ಸದಸ್ಯ ಮಂಜುನಾಥ್, ಫಾಜಕ್ ಕೆಮಿಕಲ್ ಕಂಪನಿ ನಾಗೇಶ್ ಕಾರ್ವಿ ಮತ್ತು ಜಯಚಂದ್ರ ನಾಯರ್, ಸಿವಿಲ್ ಇಂಜಿನಿಯರ್ ಸಂಘದ ಉಪಾಧ್ಯಕ್ಷ ಟಿ. ನಾರಾಯಣಸ್ವಾಮಿ, ಖಜಾಂಚಿ ಅಬ್ದುಲ್ ಕಬೀರ್, ಕಾರ್ಯಕ್ರಮದ ಸಂಯೋಜಕ ಕೆ.ಜಿ. ವೆಂಕಟೇಶ್, ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಚಂದ್ರಶೇಖರ್, ಬಿ.ಸಿ. ಹರೀಶ್ ಉಪಸ್ಥಿತರಿದ್ದರು. 20 ಕೆಸಿಕೆಎಂ 2ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಗುರುವಾರ ಆರಂಭಗೊಂಡ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಜಿ. ರಘು ಉದ್ಘಾಟಿಸಿದರು. ಜಿ. ರಮೇಶ್‌, ನಾರಾಯಣಸ್ವಾಮಿ, ಡಾ. ಶ್ಯಾಮ್‌, ಅಬ್ದುಲ್‌ ಕಬೀರ್‌ ಇದ್ದರು.

--------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ
ಪ್ರಜಾಸೌಧ ನಿರ್ಮಾಣ ಜಾಗ ಬದಲಾವಣೆಗೆ ಆಗ್ರಹ