ಕನ್ನಡಪ್ರಭ ವಾರ್ತೆ ಮುಂಡರಗಿ
ಈ ಕುರಿತು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿ ಮತಕ್ಷೇತ್ರದಲ್ಲಿ ಬರುವ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಹೋಬಳಿ ಸೇರಿ ಒಟ್ಟು 8 ಜಿಪಂ ಕ್ಷೇತ್ರಗಳಿದ್ದು, ಅದರಲ್ಲಿ ಮುಂಡರಗಿ ತಾಲೂಕಿಗೆ ನಾಲ್ಕು ಜಿಪಂ ಕ್ಷೇತ್ರಗಳಿದ್ದು, ಆ ನಾಲ್ಕರಲ್ಲಿ ಎರಡು ಕ್ಷೇತ್ರಗಳು ಶಿರಹಟ್ಟಿ ಮತಕ್ಷೇತ್ರಕ್ಕೆ,ಇನ್ನೆರಡು ಕ್ಷೇತ್ರಗಳು ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಆದರೆ ಶಿರಹಟ್ಟಿ ಕ್ಷೇತ್ರದ ವ್ಯಾಪ್ತಿಗೆ ಬರುವ ಎರಡು ಹಾಗೂ ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎರಡು ಜಿಪಂ ಕ್ಷೇತ್ರಗಳಲ್ಲಿಯೂ ಸಾಮಾನ್ಯ ವರ್ಗ ಮೀಸಲಿಡದೆ ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರ ಮುಂಡರಗಿ ತಾಲೂಕನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಕುರಿತು ಚುನಾವಣಾ ಆಯೋಗ ಮರುಪಲಿಶೀಲಿಸಬೇಕು ಎಂದು ಮನವಿ ಮಾಡಿಕೊಂಡರು.
ಪುರಸಭೆ ಹಾಗೂ ಎಪಿಂಸಿ ಮಾಜಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, ಮುಂಡರಗಿಯೂ ಸೇರಿ ಇಡೀ ಕ್ಷೇತ್ರದಲ್ಲಿ ಸಾಮಾನ್ಯ ವರ್ಗವನ್ನು ಕಡೆಗಣಿಸಿರುವ ಕುರಿತು ಶಾಸಕರೊಂದಿಗೂ ಸಹ ಚರ್ಚಿಸಲಾಗುವುದು ಎಂದರು. ಬಿಜೆಪಿ ಮುಖಂಡರಾದ ರಜನೀಕಾಂತ ದೇಸಾಯಿ, ದಸಗೀರಸಾಬ್ ಹೊಸಮನಿ, ಶಿದ್ದಲಿಂಗಪ್ಪ ದೇಸಾಯಿ ಮಾತನಾಡಿದರು.