ಇನ್ನರ್ ವ್ಹೀಲ್ ಕ್ಲಬ್‌ ಸಾಮಾಜಿಕ ಸೇವಾಕಾರ್ಯಕ್ಕೀಗ ಶತಮಾನ: ಮೀರಾ ರಮೇಶ್

KannadaprabhaNewsNetwork |  
Published : Jan 14, 2024, 01:32 AM ISTUpdated : Jan 14, 2024, 03:33 PM IST
ಪೋಟೋ೧೨ಸಿಎಲ್‌ಕೆ೨ ಚಳ್ಳಕೆರೆ ನಗರದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಇನ್ನರ್ ವ್ಹೀಲ್ ಕ್ಲಬ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನು ಅಧ್ಯಕ್ಷೆ ಮೀರಾರಮೇಶ್ ವಿತರಿಸಿದರು. | Kannada Prabha

ಸಾರಾಂಶ

ಕಳೆದ ಸುಮಾರು ೧೦೦ ವರ್ಷಗ ಳಿಂದ ಅಂತರ ರಾಷ್ಟ್ರೀಯ ಇನ್ನರ್ ವ್ಹೀಲ್ ಕ್ಲಬ್ ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡಿದೆ ಎಂದು ಮೀರಾ ರಮೇಶ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ / ಚಿತ್ರದುರ್ಗ

ಅಂತರಾ ಇನ್ನರ್ ವ್ಹೀಲ್ ಕ್ಲಬ್‌ನ ಶತಮಾನೋತ್ಸವ ಹಿನ್ನೆಲೆಯಲ್ಲಿ ನಗರದ ವಿದ್ಯಾಭಾರತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಪುಸ್ತಕ, ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು ಎಂದು ಅಧ್ಯಕ್ಷೆ ಮೀರಾ ರಮೇಶ್ ತಿಳಿಸಿದರು.

ಅವರು, ನಗರದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ ಸುಮಾರು ೧೦೦ ವರ್ಷಗ ಳಿಂದ ಅಂತರ ರಾಷ್ಟ್ರೀಯ ಇನ್ನರ್ ವ್ಹೀಲ್ ಕ್ಲಬ್ ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡಿದೆ. 

ವಿಶೇಷವಾಗಿ ಕಳೆದ ೨೦೨೦ರಲ್ಲಿ ಸಂಭವಿ ಸಿದ ಕೊರೋನಾ ಸಂದರ್ಭದಲ್ಲೂ ಸಹ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸೇರಿದಂತೆ ಉಚಿತವಾಗಿ ಅನೇಕ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವು ನೀಡಿದೆ. ಇಂತಹ ಸಂಸ್ಥೆಯ ಶತದಿನೋತ್ಸವ ಆಚರಣೆ ನಮ್ಮೆಲ್ಲರಿಗೂ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುಧಾ ಪ್ರಹ್ಲಾದ್, ಕಾರ್ಯದರ್ಶಿ ಸುನಿತಾ ಬಸವರಾಜು, ಖಜಾಂಚಿ ಪದ್ಮ ನಾಗರಾಜು, ಐಎಸ್‌ಯು ಸದಸ್ಯೆ ಮಂಜುಳಾ ರಾಜ್, ನಿರ್ದೇಶಕರಾದ ರಾಜೇಶ್ವರಿ ಶ್ರೀನಾಥ, ಅಪರ್ಣ, ಕವಿತಾ ವಿಶುಕುಮಾರ್, ಸೂರ್ಯಪ್ರಭಾ ವೀರಭದ್ರಪ್ಪ, ಜ್ಯೋತಿ ನಾಗರಾಜು, ಅರುಣಾರಾಜ್, ಜಾನಕಿ, ಅನ್ನಪೂರ್ಣ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ಇನ್ನರ್‌ವ್ಹೀಲ್ ಕ್ಲಬ್‌ ಸಮಾಜಮುಖಿ ಕಾರ್‍ಯಗಳಿಗೆ ಪೌರಾಯುಕ್ತೆ ಶ್ಲಾಘನೆ

ರೋಟರಿ ಬಾಲ ಭವನದಲ್ಲಿ ಇನ್ನರ್‌ ವ್ಹೀಲ್ ಕ್ಲಬ್ ಚಿತ್ರದುರ್ಗ ವತಿಯಿಂದ ನೂರನೇ ವರ್ಷದ ದಿನಾಚರಣೆ ಹಾಗೂ ಮಕರ ಸಂಕ್ರಾಂತಿ ಸಂಭ್ರಮವನ್ನು ಗುರುವಾರ ಆಚರಿಸಲಾಯಿತು.ನಗರಸಭೆ ಪೌರಾಯುಕ್ತೆ ರೇಣುಕಾ ಎಂ.ಮಾತನಾಡಿ, ಸ್ನೇಹ ಮತ್ತು ಸೇವಾ ಗುಣ ಹೊಂದಿರುವ ಇನ್ನರ್ ವ್ಹೀಲ್ ಕ್ಲಬ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಇನ್ನರ್ ವ್ಹೀಲ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡಿ, 1924ರಲ್ಲಿ ಕೇವಲ ಐವರು ಸದಸ್ಯರುಗಳಿಂದ ಹುಟ್ಟಿಕೊಂಡ ಇನ್ನರ್ ವ್ಹೀಲ್ ಕ್ಲಬ್‍ನಲ್ಲಿ ಈಗ ಒಂದು ಲಕ್ಷದ 24 ಸಾವಿರ ಸದಸ್ಯ ರಿದ್ದಾರೆ. 108 ದೇಶಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಅನೇಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಹ್ಯಾಪಿ ಸ್ಕೂಲ್‍ಗಳನ್ನಾಗಿ ಮಾಡಲಾಗಿದೆ. 

ಮಕ್ಕಳಿಗೆ ಸಮವಸ್ತ್ರ, ಶುದ್ಧ ಕುಡಿಯುವ ನೀರು ಪೂರೈಸಿದ್ದೇವೆ ಎಂದರು.ಇನ್ನರ್ ವ್ಹೀಲ್ ಕ್ಲಬ್ ಚಿತ್ರದುರ್ಗ ಜಂಟಿ ಕಾರ್ಯದರ್ಶಿ ವೀಣ ಜಯರಾಂ, ಪಿಡಿಸಿ ಗಳಾದ ಜ್ಯೋತಿ ಲಕ್ಷ್ಮಣ್, ವೀಣಸ್ವಾಮಿ, ಭಾಗ್ಯಕ್ಕ, ನಂದಿನಿ ಸುಹಾಸ್, ಶೈಲಜಾರೆಡ್ಡಿ, ದೀಪದತ್, ಅಮೃತ ಇದ್ದರು.

 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ