ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ

KannadaprabhaNewsNetwork |  
Published : Jul 01, 2026, 03:15 AM IST
ಸವಣೂರ ಪಟ್ಟಣದ ಡಾ. ವಿ.ಕೃ.ಗೋಕಾಕ ಸಭಾ ಸಭವನದಲ್ಲಿ ಗುರುವಾರ ಜಿಲ್ಲೆ 317ರ ಅಡಿಯಲ್ಲಿ ಹಾವೇರಿ ಸ್ಪಾನ್ಸರ್ ಕ್ಲಬ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಇನ್ನರ್ ವೀಲ್ ಕ್ಲಬ್‌ನ ನೂತನ ಚಾರ್ಟರ್ ಪ್ರೆಸೆಂಟೇಷನ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ಚೇರ್ಮನ್ ಉತ್ಕರ್ಷ ಸಂಗ್ರಾಮ್ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಯರಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇನ್ನರ್ ವೀಲ್ ಕ್ಲಬ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ಚೇರ್ಮನ್ ಉತ್ಕರ್ಷ ಸಂಗ್ರಾಮ್ ಪಾಟೀಲ ತಿಳಿಸಿದರು.

ಸವಣೂರು:ಮಹಿಳೆಯರಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇನ್ನರ್ ವೀಲ್ ಕ್ಲಬ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ಚೇರ್ಮನ್ ಉತ್ಕರ್ಷ ಸಂಗ್ರಾಮ್ ಪಾಟೀಲ ತಿಳಿಸಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಸಭವನದಲ್ಲಿ ಗುರುವಾರ ಜಿಲ್ಲೆ 317ರ ಅಡಿಯಲ್ಲಿ ಹಾವೇರಿ ಸ್ಪಾನ್ಸರ್ ಕ್ಲಬ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಇನ್ನರ್ ವೀಲ್ ಕ್ಲಬ್‌ನ ನೂತನ ಚಾರ್ಟರ್ ಪ್ರೆಸೆಂಟೇಷನ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸವಣೂರಿನಲ್ಲಿ ಇಂದು ಉದ್ಘಾಟನೆಗೊಂಡಿರುವ ನೂತನ ಕ್ಲಬ್ ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲಾದ್ಯಂತ ಗ್ರಾಮೀಣ ಭಾಗದ ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಸವಣೂರು ಇನ್ನರ್ ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ಸುಮಾ ನಿರಂಜನ್ ಹಾವಣಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕ್ಲಬ್ ಸ್ಥಾಪನೆಯಾಗಲು ಕಾರಣರಾದ ಅಲ್ಲಮ್ ರಚನಾ ಅವರ ಸಾಮಾಜಿಕ ಚಿಂತನೆಯನ್ನು ಸವಣೂರು ಘಟಕದ ಪದಾಧಿಕಾರಿಗಳು ಅರ್ಥೈಯಿಸಿಕೊಂಡು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವದು. ಈ ಮೂಲಕ ಸಮಾಜ ಸೇವೆಯಲ್ಲಿ ಸವಣೂರಿನ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ಸಂತಸ ತಂದಿದೆ ಎಂದರು.

ಕಾರ್ಯದರ್ಶಿ ವೀಣಾ ವೀರನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಇಎಸ್‌ಒ ವಿರಾಜ್ ಕೋಟಕ್, ಅಲ್ಲಮ್ ರಚನಾ, ಹಾವೇರಿ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ವನಿತಾ ಮಾಗನೂರು, ಕಾರ್ಯದರ್ಶಿ ಶೋಭಾ ತಂಡೂರ ಮಾತನಾಡಿ, ಸಂಸ್ಥೆಯ ಕಾರ್ಯ ವೈಕರಿ ಕುರಿತು ಹಾಗೂ ಕೈಗೊಳ್ಳಬೇಕಾದ ಕಾರ್ಯಕ್ರಮ ವಿವರಿಸಿದರು.

ಉಪಾಧ್ಯಕ್ಷೆ ಸರೋಜಾ ರಾಯ್ಕರ್, ಪದಾಧಿಕಾರಿಗಳಾದ ವರ್ಷಾ ಹಾವಣಗಿ, ಪೂರ್ಣಿಮಾ ಬೆಣ್ಣಿ, ಲತಾ ವಾಲಿ, ದೀಪಾಂಜಲಿ ಸಿಂಧೂರ, ಜಯಶ್ರೀ ಗಾಣಗೇರ, ನಿರ್ಮಲಾ ಪಾಟೀಲ, ಜಯಲಕ್ಷ್ಮೀ ತೆಗ್ಗಿಹಳ್ಳಿ ಹಾಗೂ ಇತರರು ಅಧಿಕಾರ ಸ್ವೀಕರಿಸಿದರು. ಸರ್ವ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು. ಹಾವೇರಿ ಕ್ಲಬ್ ನ ಮಾಜಿ ಅಧ್ಯಕ್ಷೆ ಮಮತಾ ಬಾಲೆಹೊಸೂರು ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿ ರಂಗಾಯಣಕ್ಕೆ ಪೂರ್ಣಗೊಳ್ಳಲು ಬೇಕು ಇನ್ನೂ ₹ 4 ಕೋಟಿ
ರಂಗ ಸಮಾಜ ಶಿಫಾರಸಿನಂತೆ ‘ರಂಗಾಯಣ ಕಾರ್ಕಳ’ ಹೆಸರು ಬದಲಾವಣೆ: ಸ್ಪಷ್ಟನೆ