ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು

KannadaprabhaNewsNetwork |  
Published : Jul 01, 2026, 03:15 AM IST
ರಾಣಿಬೆನ್ನೂರಿನ ಮೃತ್ಯುಂಜಯನಗರದ ಚನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಭಾಂಗಣದಲ್ಲಿ ಜಂಗಮ ಜ್ಯೋತಿ ಮಹಿಳಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ವೈದ್ಯೆ ಡಾ. ಮಮತಾ ಮುಳಕೊಂಪಿಮಠ ಹೇಳಿದರು.

ರಾಣಿಬೆನ್ನೂರು: ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ವೈದ್ಯೆ ಡಾ. ಮಮತಾ ಮುಳಕೊಂಪಿಮಠ ಹೇಳಿದರು.

ಇಲ್ಲಿನ ಮೃತ್ಯುಂಜಯನಗರದ ಚನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಭಾಂಗಣದಲ್ಲಿ ಜಂಗಮ ಜ್ಯೋತಿ ಮಹಿಳಾ ವೇದಿಕೆಯಿಂದ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ನಿರಂತರ ಅಧ್ಯಯನ ಕೈಗೊಂಡು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಮೊಬೈಲ್, ಸಾಮಾಜಿಕ ಜಾಲ ತಾಣ, ಇನ್‌ಸ್ಟ್ರಾ ಗ್ರಾಂ, ಫೇಸ್‌ಬುಕ್ ಕಡೆಗೆ ಹೆಚ್ಚು ಒತ್ತು ಕೊಟ್ಟು ಆರೋಗ್ಯ ಹಾನಿ ಮಾಡಿಕೊಳ್ಳಬಾರದು. ಅತಿಯಾದ ಮೊಬೈಲ್ ಬಳಕೆಯಿಂದ ಎಳೆಯ ವಯಸ್ಸಿನ ಮಕ್ಕಳ ಕಣ್ಣಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ. ಮಕ್ಕಳು ಶೈಕ್ಷಣಿಕವಾಗಿ ಪಾಠ ಪ್ರವಚನಕ್ಕಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎಸ್.ಸಿ. ಷಡಕ್ಷರಿಮಠ ಮಾತನಾಡಿ, ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನ. ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಂಗಮ ಜ್ಯೋತಿ ಮಹಿಳಾ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆ ತಂದಿದೆ. ನಮ್ಮ ಜಂಗಮ ಸಮಾಜದ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ಆಗಬೇಕು ಎಂದರು.

ಜಂಗಮ ಜ್ಯೋತಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಭಸ್ಮಾಂಗಿಮಠ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗುರುಬಸಮ್ಮ ಸುರಳಿಕೇರಿಮಠ, ಪಲ್ಲವಿ ನೀರಲಗಿಮಠ, ಇಂದಿರಾ ಹಿರೇಮಠ, ರಾಜೇಶ್ವರಿ ಹನಗೋಡಿಮಠ, ಶೋಭಾ ದೇವಗಿರಿಮಠ, ಗಾಯತ್ರಾ ಹಿರೇಮಠ, ವಿದ್ಯಾಶ್ರೀ, ನಿರುಪಮಾ ಮಳೇಮಠ, ಶೈಲಜಾ ಉಜ್ಜನಿಮಠ, ಶಶಿಕಲಾ ಮಠದ, ಚೆನ್ನಮ್ಮ ಗುರುಪಾದದೇವರಮಠ, ವನಿತಾ, ಕವಿತಾ ಮುಕ್ತೇಶ ಕೂರಗುಂದಮಠ, ಜಯಮ್ಮ ಆರಾಧ್ಯಮಠ, ಮಂಗಳಾ ತೊರ್ಗಸಿಮಳೆಮಠ, ಉಮಾ ಚಪ್ಪರದಳ್ಳಿಮಠ, ಸುಧಾ ಮಠದ, ಶೋಭಾ ಶಂಕ್ರಿಮಠ, ಪೂರ್ಣಿಮಾ ತೊಗರ್ಸಿಮಳೇಮಠ, ವಿಜಯಲಕ್ಷ್ಮೀ ಬೂದಿಹಾಳಮಠ, ಎಂ.ಕೆ. ಸಾಲೀಮಠ, ರವಿಕುಮಾರ ಪಾಟೀಲ, ನಾಗಯ್ಯ ಮಾಗನೂರಮಠ , ಪಂಚಾಕ್ಷರಯ್ಯ ಚಪ್ಪರದಳ್ಳಿಮಠ, ವರ್ತಕ ಬೂದಿಹಾಳಮಠ ಮತ್ತು ಜಂಗಮ ಜ್ಯೋತಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿ ರಂಗಾಯಣಕ್ಕೆ ಪೂರ್ಣಗೊಳ್ಳಲು ಬೇಕು ಇನ್ನೂ ₹ 4 ಕೋಟಿ
ರಂಗ ಸಮಾಜ ಶಿಫಾರಸಿನಂತೆ ‘ರಂಗಾಯಣ ಕಾರ್ಕಳ’ ಹೆಸರು ಬದಲಾವಣೆ: ಸ್ಪಷ್ಟನೆ