ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮದ ಸರ್ವೇ ನಂ. ೬ರಲ್ಲಿ ಭೂ ಮಂಜೂರಾತಿಯಾದ ೧.೨೦ ಎಕರೆ ಸೇರಿದಂತೆ ಸರ್ಕಾರಿ ಗೋಮಾಳ ೨.೨೦ ಎಕರೆ ಬಗರ್‌ಹುಕುಂ ಸಾಗುವಳಿ ಜಮೀನನ್ನು ವಶಪಡಿಸಿಕೊಳ್ಳುವ ಸಲುವಾಗಿ ಅನಿಲ್‌ಕುಮಾರ್ ಎಂಬಾತ ಜಯಕುಮಾರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಬೆಂಕಿಗೆಸೆದಿರುವ ಪ್ರಕರಣವನ್ನು ದಸಂಸ ಉಗ್ರವಾಗಿ ಖಂಡಿಸುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಯಕುಮಾರ್‌ಗೆ ಸೇರಿದ ಜಮೀನಿನಲ್ಲಿ ಅನಿಲ್‌ಕುಮಾರ್ ಹುಲ್ಲಿನ ಮೆದೆಯನ್ನು ಹಾಕಿಕೊಂಡಿದ್ದು, ಅದನ್ನು ಖಾಲಿ ಮಾಡಿಕೊಡುವಂತೆ ಜಯಕುಮಾರ್ ಕೇಳಿದಾಗ ಅದು ನನ್ನ ಜಮೀನು ಎಂದು ವಾದಿಸಿದ್ದಾನೆ. ಈ ಸಂಬಂಧ ಮೇ ೧೫ರಂದು ಜಯಕುಮಾರ್ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲು ಹೋದಾಗ ದೂರನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿ ಜಯಕುಮಾರ್‌ಗೆ ರಕ್ಷಣೆ ಒದಗಿಸುವಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ. ಅದರ ಮರುದಿನವೇ ಜಯಕುಮಾರ್‌ನನ್ನು ಕೊಲೆ ಮಾಡಿ ಹುಲ್ಲಿನಮೆದೆಗೆ ಬೆಂಕಿ ಹಚ್ಚಿ ಶವವನ್ನು ಎಸೆಯಲಾಗಿದೆ. ಇದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯೇ ನೇರ ಹೊಣೆಗಾರರು ಎಂದು ಆರೋಪಿಸಿದರು.ಜಯಕುಮಾರ್ ಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳ ಹಸ್ತಕ್ಷೇಪವಿದೆ. ಪೊಲೀಸ್ ಅಧಿಕಾರಿಗಳೂ ಸೇರಿ ಜಿಲ್ಲಾಡಳಿತ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಂಗ ಇಲಾಖೆ ಅಥವಾ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಪಡಿಸಿದರು.
----------------------------
ಕನ್ನಡಪ್ರಭ ವಾರ್ತೆ ಮಂಡ್ಯ
ಜಯಕುಮಾರ್ ಸಾವಿನ ಪ್ರಕರಣ ಕುರಿತು ಗ್ರಾಮದ ಅನಿಲ್‌ಕುಮಾರ್ ಅವರ ಮೇಲೆ ಶಂಕೆ ವ್ಯಕ್ತಪಡಿಸಿರುವುದರಿಂದ ಅನಿಲ್‌ಕುಮಾರ್‌ನನ್ನು ಬಂಧಿಸಲಾಗಿದೆ. ಜಯಕುಮಾರ್‌ಗೆ ಸೇರಿದ ಜಮೀನು ರಸ್ತೆ ಪಕ್ಕದಲ್ಲಿದ್ದು, ಹಲವಾರು ವರ್ಷಗಳಿಂದ ಅನಿಲ್‌ಕುಮಾರ್ ಹುಲ್ಲಿನ ಮೆದೆ ಹಾಕಿಕೊಂಡು ಬರುತ್ತಿದ್ದನೆಂದೂ ಹೇಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.