ಕಲ್ಲೇಶ್ವರ ದೇವಾಲಯದ ಬಳಿ 6ನೆಯ ಶತಮಾನದ್ದು ಎನ್ನಲಾದ ಲಿಪಿ । ರಮೇಶ ಬಿ. ಹಿರೇಜಂಬೂರು, ಮಂಜಪ್ಪ ಚುರ್ಚಿ ಗುಂಡಿ ಶೋಧ
ತಾಲೂಕಿನ ಶಿಗ್ಗಾ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಬಳಿ ೬ನೇ ಶತಮಾನದ ಆದಿ ಕದಂಬರ ಅವಧಿಯ ಶಾಸನ ಪತ್ತೆಯಾಗಿದೆ.
ಕೆಲವು ವರುಷಗಳ ಹಿಂದೆ ಶ್ರೀ ಕಲ್ಲೇಶ್ವರ ದೇವಾಲಯದ ಮರು ನಿರ್ಮಾಣ ಕಾರ್ಯಕೈಗೊಂಡಾಗ ಶಾಸನದ ಜೊತೆ ಹಲವಾರು ವೀರಗಲ್ಲುಗಳೂ ದೊರಕ್ಕಿದ್ದವು. ಸ್ಥಳೀಯರು ಅವುಗಳನ್ನು ಸಂರಕ್ಷಿಸಿದ್ದರು. ಈಚೆಗೆ ಇತಿಹಾಸ ಸಂಶೋಧಕರಾದ ರಮೇಶ ಬಿ. ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿ ಗುಂಡಿ ಕ್ಷೇತ್ರ ಕಾರ್ಯಕ್ಕೆ ಹೋದಾಗ ಈ ಶಾಸನವನ್ನು ೬ನೇ ಶತಮಾನದ ಕದಂಬರ ಅವಧಿಯ ಶಾಸನವೆಂದು ಗುರುತಿಸಿದ್ದಾರೆ.ದೇವಾಲಯ ನಿರ್ಮಾಣಕ್ಕೆ ಬಳಸಲಾದ ಚೌಕಾಕಾರದ ಕಂಬದ ಒಂದು ಮುಖದ ಮೇಲೆ ೨೦ ಸಾಲುಗಳನ್ನು ಹೊಂದಿದ್ದು ಪ್ರತಿ ಸಾಲಿನ ಎಡ ಮತ್ತು ಬಲಬದಿಯ ಹಲವು ಅಕ್ಷರಗಳು ದೊರಕುವುದಿಲ್ಲ. ಮೊದಲಿಗೆ ಹೆಚ್ಚು. ಅಗಲವಿದ್ದ ಈ ಕಂಬದ ಮೇಲೆ ಶಾಸನ ಬರೆದಿರಬೇಕು. ನಂತರ ಈ ಕಂಬದ ಎರಡೂ ಪಾರ್ಶ್ವಗಳನ್ನು ಕೆತ್ತಿ ದೇವಾಲಯದ ಮರುನಿರ್ಮಾಣಕ್ಕೆ ಚಿಕ್ಕದಾಗಿ ಮಾಡಿರಬಹುದಾಗಿದೆ. ಹಾಗಾಗಿ ಪೂರ್ಣ ಸಾಲಿನ ಅಕ್ಷರಗಳು ಕಂಡು ಬರುವುದಿಲ್ಲ. ಶಾಸನದ ಅಕ್ಷರಗಳು ೬ನೇ ಶತಮಾನದ ಕನ್ನಡ ಲಿಪಿಯನ್ನು ಹೋಲುತ್ತವೆ. ಶಾಸನದ ಮೇಲಿನ ಸಾಲುಗಳಲ್ಲಿ ಕದಂಬ ವಂಶದ ಕುರಿತಾದ ಮಾಹಿತಿ ಇದೆ. ಮಾತೃಗಣ, ಮಾನವಸ್ಯ ಗೋತ್ರ- ಚರ್ಚಾ ಪಾರಂಗತರು ಮುಂತಾದ ವರ್ಣನೆಗಳು ಕಂಡುಬರುತ್ತದೆ.
ವಿಶೇಷ ಆತ್ಮಬಲಿ ಶಿಲ್ಪ:
ಶೋಧನೆಗೆ ಶಿಗ್ಗ ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪ, ಲೋಕೇಶ ಬಂಗಾರಿ, ಮಲೆನಾಡು ಪ್ರೌಢ ಶಾಲೆ ಹಿರೇಜಂಬೂರಿನ ಮುಖ್ಯ ಶಿಕ್ಷಕರಾದ ತೇಜಪ್ಪ ಮತ್ತು ಬಿ.ಕೆ.ಶಿವಕುಮಾರ್ ಸಹಕಾರ ನೀಡಿರುತ್ತಾರೆ. ಅಧ್ಯಯನಕ್ಕೆ ಡಾ. ಶ್ರೀನಿವಾಸ್ ಪಾಡಿಗಾರ್, ಡಾ. ಜಗದೀಶ್ ಅಗಸಿಬಾಗಿಲು, ಡಾ ಶೇಜೇಶ್ವರ ನಾಯಕ್ ಮತ್ತು ಶ್ರೀಪಾದ್ ಬಿಚ್ಚುಗತ್ತಿ ಮಾರ್ಗದರ್ಶನ ನೀಡಿರುತ್ತಾರೆ.
ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ.