ಮಧ್ಯಂತರ ಪರಿಹಾರ ನೀಡುವಂತೆ ಒತ್ತಾಯ

KannadaprabhaNewsNetwork |  
Published : Jul 30, 2024, 12:32 AM IST
ಮಧ್ಯಂತರ ಪರಿಹಾರ ನೀಡವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಳೆದ ವರ್ಷ ಶೇ. 70% ರೈತರಿಗೆ ಬೆಳೆ ಪರಿಹಾರ ಹಣ ಜಮೆಯಾಗಿಲ್ಲ ಕಾರಣ ಈಗಲಾದರೂ ಬೆಳೆ ಪರಿಹಾರ ಹಾಕಲು ಕ್ರಮ ಕೈಗೊಳ್ಳಬೇಕೆಂದು ಮನವಿ

ಗದಗ: ಪ್ರಸಕ್ತ ವರ್ಷ ಮುಂಗಾರಿನ ಅಬ್ಬರ ಜೋರಾಗಿದ್ದು, ಜಿಲ್ಲೆಯಲ್ಲಿ ಸತತ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಬೆಳೆಗಳು ಹಾನಿಯಾಗುತ್ತಿವೆ. ಆದ್ದರಿಂದ ವಿಮಾ ಕಂಪನಿಯವರು ರೈತರಿಗೆ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆ ವಿಮಾ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿ ರೈತ ಹಿತಾಭಿವೃದ್ಧಿ ಸಂಘದಿಂದ ನಗರದ ಒಕ್ಕಲಗೇರಿ ಓಣಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಂಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಪರಪ್ಪ ಜಂತ್ಲಿ ಮಾತನಾಡಿ, ತಾಲೂಕಿನಲ್ಲಿ ಸತತ 20 ದಿನ ಮಳೆಯಾಗಿ ಮುಂಗಾರಿನಲ್ಲಿ ಬಿತ್ತಿದ ಹೆಸರು, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬಿಟಿ ಹತ್ತಿ ಬೆಳೆಗಳು ಮಳೆ ಹೆಚ್ಚಾಗಿ ಕೊಳೆ ರೋಗ ಬಂದು ಎಲೆ ಹಳದಿಯಾಗಿ ಜಿಗಿ ಹುಳ ಬಿದ್ದು,ಗೋವಿನ ಜೋಳಕ್ಕೆ ಲದ್ದಿ ಹುಳ ಬಿದ್ದು ಬೆಳೆಗಳು ರೋಗಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಎಲ್ಲ ಬೆಳೆಗಳಿಗೂ ಸರ್ಕಾರ ಬೆಳೆ ಹಾನಿ ಕೊಡಬೇಕು ಮತ್ತು ಎಲ್ಲ ಬೆಳೆಗಳಿಗೂ ಬೆಳೆದ ರೈತರಿಗೆ ಮಧ್ಯಂತರ ಪರಿಹಾರ ಕೊಡಿಸಬೇಕು ಹಾಗೂ ಕಳೆದ ವರ್ಷ ಶೇ. 70% ರೈತರಿಗೆ ಬೆಳೆ ಪರಿಹಾರ ಹಣ ಜಮೆಯಾಗಿಲ್ಲ ಕಾರಣ ಈಗಲಾದರೂ ಬೆಳೆ ಪರಿಹಾರ ಹಾಕಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಈ ವೇಳೆ ಬಸಪ್ಪ ಕಲಬಂಡಿ, ಕಳಕಪ್ಪ ರೇವಡಿ, ಮಂಜುನಾಥ್ ಕೋಳಿವಾಡ, ಮುತ್ತಣ್ಣ ಜೆಡಿ, ಮಂಜುನಾಥ್ ಹಿತ್ತಲಮನಿ, ವಿರುಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಬಸವರಾಜ ಕವಳಿಕಾಯಿ, ಕರಬಸಯ್ಯ ನಲ್ವಾತವಾಡಮಠ, ರವಿ ಹುಡೇದ, ಬಸವರಾಜ್ ಹುಬ್ಬಳ್ಳಿ, ಮಂಜುನಾಥ ಮಂದಾಲಿ, ಉಮೇಶ ಲಿಂಗರೆಡ್ಡಿ, ಶರಣ್ಣಪ್ಪ, ಫಕೀರಗೌಡ ಪಾಟೀಲ್, ಬಸವರಾಜ ದೊಡೆಪ್ಪನವರ, ಬಸವರಾಜ ಕವಳಿಕಾಯಿ ಹಾಗೂ ರೈತರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ