ಕಸದ ರಾಶಿ ತೆರವಿಗೆ ನಿವಾಸಿಗಳ ಒತ್ತಾಯ

KannadaprabhaNewsNetwork |  
Published : Jun 16, 2024, 01:49 AM IST
ಮಾರ್ಟಳ್ಳಿ ಎಲ್ಲೆಂದರಲ್ಲಿ ಕಸದ  ಸ್ವಚ್ಛತೆಗೆ ನಿವಾಸಿಗಳ  ಒತ್ತಾಯ | Kannada Prabha

ಸಾರಾಂಶ

ಹನೂರು ಮಾರ್ಟಳ್ಳಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ರಸ್ತೆ ಬದಿ ಕಸ ಸಂಗ್ರಹವಾಗಿದ್ದು, ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಹನೂರು: ಮಾರ್ಟಳ್ಳಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯಾಗಿದ್ದು ಗ್ರಾಪಂ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ಕೇಂದ್ರ ಸ್ಥಾನವಾಗಿದ್ದು ಕೇಂದ್ರ ಸ್ಥಾನದಲ್ಲೇ ಈ ಪರಿಸ್ಥಿತಿಯಾದರೆ ಬೇರೆ ಗ್ರಾಮಗಳ ಪರಿಸ್ಥಿತಿ ಹೇಗಿರಬೇಡ ಎಂಬುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಟಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಗಬ್ಬು ನಾರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಜೊತೆಗೆ ಹಸುಗಳು ಇದನ್ನು ಚೆಲ್ಲಾಪಿಲ್ಲಿ ಮಾಡಿ ಇನ್ನಷ್ಟು ಗಲೀಜು ಮಾಡುತ್ತಿವೆ. ಮಾರ್ಟಳ್ಳಿಯಿಂದ ವಡಕ್ಕೆಹಳ್ಳ ಮಾರ್ಗ ರಸ್ತೆಯಲ್ಲಿ ಹಾಲಿನ ಡೈರಿ ಮುಂಬಾಗ ಕಸದ ರಾಶಿ ತುಂಬಿರುವುದು. ಇನ್ನೆಂದು ಕಡೆ ಮಾರ್ಟಳ್ಳಿಯಿಂದ ನಾಲ್ ರೋಡ್ ಮಾರ್ಗ ರಸ್ತೆಯಲ್ಲಿ ಕಸದ ರಾಶಿ ತುಂಬಿ ಗಬ್ಬು ನಾರುತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು ಕಸ ವಿಲೇವಾರಿ ಮಾಡಬೇಕು. ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಸಿದ್ದಾರೆ. ಕಸ ವಾಹನ ಬಳಕೆಗೆ ಒತ್ತಾಯ: ಮಾರ್ಟಳ್ಳಿ ಪಂಚಾಯಿತಿಗೆ ಕಸ ವಿಲೇವಾರಿ ವಾಹನ ಬಂದು ಮೂರು ವರ್ಷ ಕಳೆದರೂ ಇನ್ನೂ ಬಳಕೆಗೆ ಬಂದಿಲ್ಲ. ದೊಡ್ಡ ಗ್ರಾಪಂ ಆಗಿರುವುದರಿಂದ ಇಲ್ಲಿನ ಗ್ರಾಪಂ ಅಧಿಕಾರಿಗಳು ಕೂಡಲೇ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸದ ವಾಹನ ಬಳಕೆಗೆ ಉಪಯೋಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರೇಜ್‌ ಮೆಕಾನಿಕ್‌ ಕೊಲೆ ಕೇಸ್‌: 7 ಆರೋಪಿಗಳ ಸೆರೆ
ಪೋಟೋ ಫ್ರೇಮ್‌ನಲ್ಲಿ ಅಡಗಿಸಿಟ್ಟುಸಾಗಿಸುತ್ತಿದ್ದ 37 ಲಕ್ಷದ ಗಾಂಜಾ ಜಪ್ತಿ