ಕನ್ನಡಪ್ರಭ ವಾರ್ತೆ ಸಿಂಧನೂರು
ಪಾಲಕರು ಮಕ್ಕಳನ್ನು ಯಾವುದೇ ವಿದ್ಯಾಸಂಸ್ಥೆಗೆ ಸೇರಿಸಬೇಕಾದರೆ ಸುಮಾರು ರು.30 ರಿಂದ ರು.1 ಲಕ್ಷವರೆಗೆ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುತ್ತಿವೆ. ಇದರ ಜೊತೆಗೆ ನಗರದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಕೂಡ ವಿಪರೀತವಾಗಿ ತಲೆದೂರಿವೆ ಎಂದು ಆರೋಪಿಸಿದರು.
ಕೆಲವು ಖಾಸಗಿ ಶಾಲೆಗಳಲ್ಲಿ ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಅನಧಿಕೃತವಾಗಿ ವಸತಿ ನಿಲಯವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಪಟ್ಟಿ ಬಿಡುಗಡೆ ಮಾಡಬೇಕು.ನಗರದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ಹಾಗೂ ಕೋಚಿಂಗ್ ಸೆಂಟರ್‌ಗಳಿಗೆ ಸ್ಥಾನಿಕ ಭೇಟಿ ನೀಡಿ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ವಿವರವನ್ನು ಬಹಿರಂಗಪಡಿಸಬೇಕು. ವಿದ್ಯಾರ್ಥಿಗಳ ಮೂಲಸೌಕರ್ಯಗಳ ಬಗ್ಗೆ ವರದಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಿ ಹಾಗೂ ತಪ್ಪಿತಸ್ಥ ಕೋಚಿಂಗ್ ಸೆಂಟರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ನಮ್ಮ ಸಮಿತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.