ಕನ್ನಡಪ್ರಭ ವಾರ್ತೆ ಪಾವಗಡ
ಈ ಕುರಿತು ಮುಖ್ಯಾಧಿಕಾರಿ ಷರೀಪ್ ಅವರು ಮಾತನಾಡಿ, ಶಾಸಕರ ನೇತೃತ್ವದಲ್ಲಿ ಈಗಾಗಲೇ ಪಟ್ಟಣದ 15ಲಕ್ಷ ಲೀಟರ್ ಸಂಗ್ರಹ ಸಾಮಾರ್ಥ್ಯ ಬೃಹತ್ ಟ್ಯಾಂಕ್‌ಗಳಿಗೆ ತುಂಗಭದ್ರಾ ಕುಡಿಯುವ ನೀರು ಸರಬರಾಜ್ ಆಗಿದೆ. ಈ ನೀರನ್ನು ಮನೆಮನೆಗೆ ಪೂರೈಕೆಗೊಳಿಸಲು ಈಗಾಗಲೇ ಪಟ್ಟಣದಲ್ಲಿ ಅಮೃತ್ ಯೋಜನೆ ಅಡಿ ಮನೆಮನೆ ನೀರು ಸರಬರಾಜ್ ಮಾಡುವ ಕೊಳಾಯಿ ಸಂಪರ್ಕ ಅಳವಡಿಕೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ತುಮಕೂರು ಮಾರ್ಗದ ರಸ್ತೆಗೆ ಡ್ಯಾಮೇಜ್ ಆಗದ ರೀತಿಯಲ್ಲಿ 40ಮೀಟರ್ ನಷ್ಟು 15ಅಡಿ ಆಳದಲ್ಲಿ ಸುರಂಗ ಬಗೆದು ಪೈಪ್ ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. 8ಮಂದಿ ತಂಡದೊಂದಿಗೆ ಅಧುನಿಕ ಮಿಶನರಿ ಯಂತ್ರಗಳಿಂದ ಸುರಂಗ ಮಾರ್ಗದ ಪೈಪ್ ಲೈನ್ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಜೂನ್ ಅಂತ್ಯದ ವೇಳೆಗೆ ಪಟ್ಟಣದ ಜನತೆಗೆ ತುಂಗಭದ್ರಾ ಕುಡಿಯುವ ನೀರು ಕಲ್ಪಿಸಲು ಸಿದ್ದತೆ ಕೈಗೊಳ್ಳಲಾಗಿದೆ. 40ಮೀಟರ್ ಉದ್ದದ ಸುರಂಗ ಮಾರ್ಗದ ಕಾಮಗಾರಿ ಸಾಹಸದ ಕೆಲಸವಾಗಿದ್ದು 15ಅಡಿ ಆಳದಲ್ಲಿ ರಸ್ತೆ ಒಳಗಡೆ ಅಕ್ಸಿಜನ್ ಹಾಕಿಕೊಂಡು ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿದರು.