ಯಾವ ರೀತಿ ನಾಯಕರಾಗುವಿರಿ ಇಂದೇ ಯೋಚಿಸಿ

KannadaprabhaNewsNetwork |  
Published : Jun 01, 2025, 03:12 AM IST
ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಯುವ ನಾಯಕತ್ವ ತರಬೇತಿ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಲ್ಲಿ ಮುಂದೆ ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಆರ್ಟ್‌ ಆಫ್‌ ಲೀವಿಂಗ್‌ನ ಡಾ.ಬಿ.ಎಂ.ಪಾಟೀಲ ಗುರೂಜಿ ಹೇಳಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಲ್ಲಿ ಮುಂದೆ ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಆರ್ಟ್‌ ಆಫ್‌ ಲೀವಿಂಗ್‌ನ ಡಾ.ಬಿ.ಎಂ.ಪಾಟೀಲ ಗುರೂಜಿ ಹೇಳಿದರು.

ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಯುವ ನಾಯಕತ್ವ ತರಬೇತಿ ಉದ್ಘಾಟಿಸಿ ಮಾತನಾಡಿದರು. ನಾವಿಂದು ರಾಜಕೀಯ ನಾಯಕರು, ಸಾಮಾಜಿಕ ನಾಯಕರು ಮತ್ತು ಆಧ್ಯಾತ್ಮಿಕ ನಾಯಕರನ್ನು ಸಮಾಜದಲ್ಲಿ ನೋಡುತ್ತಿದ್ದೇವೆ. ಹೀಗಾಗಿ, ನಾವು ಯಾವ ರೀತಿಯ ನಾಯಕರಾಗಬೇಕೆಂದು ಈಗಿಂದಲೇ ಯೋಚಿಸಿ ಮುನ್ನೇಡೆಯಬೇಕು ಎಂದರು.

ಉತ್ತಮ ನಾಯಕರಾಗಲು ತಾಳ್ಮೆ, ಬುದ್ದಿಶಕ್ತಿ, ಯೋಚನಾಶಕ್ತಿ, ಮಾತನಾಡುವ ಕಲೆ, ವಿವೇಚನೆ ಶಕ್ತಿ, ಸಮಸ್ಯೆಯನ್ನು ಬಗೆಹರಿಸುವ ಕಲೆ ಗೊತ್ತಿರಬೇಕು. ಪ್ರತಿದಿನ ಈ ಕುರಿತು ನಿವೆಲ್ಲ ಅಭ್ಯಸಿಸಿ, ಮನನ ಮಾಡಿ, ಮುಂದು ಒಬ್ಬ ಉತ್ತಮ ನಾಯಕರಾಗಿ ಹೊರಹೊಮ್ಮುವಂತೆ ಸಲಹೆ ನೀಡಿದರು.

ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳಿನ ನಾಯಕರು, ಮುಂದಿನ ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಅದಕ್ಕಾಗಿ ನಾಯಕತ್ವ ಗುಣಗಳನ್ನು ಹೊಂದಿದಲ್ಲಿ, ಕೃಷಿ ಉದ್ಯಮಿಯಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲು ಅನುಕೂಲ ಎಂದರು.

ಡೀನ್ ಡಾ.ಅಶೋಕ ಸಜ್ಜನ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ತಮ್ಮ ಜೀವನಕ್ಕೆ ಹತ್ತಿರವಾದ ವಿಷಯಗಳನ್ನು ಕಲಿತುಕೊಳ್ಳಲು ಅವಕಾಶವನ್ನು ಮಹಾವಿದ್ಯಾಲಯದಲ್ಲಿ ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ ಉತ್ತಮ ನಾಯಕತ್ವ ತರಬೇತಿಯನ್ನು ಇಂದು ಆಯೋಜಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ, ಡಾ.ಸಿದ್ರಾಮ ಪಾಟೀಲ, ನಿಂಗಣ್ಣ ಮಸೂತಿ, ಚಂದ್ರಶೇಖರ ಸಿಂದೂರ, ಶೋಭಾ, ವೈಷ್ಣವಿ ಪಾಟೀಲ, ಅಭಿಷೇಕ ಗರ್ಜೆ ಸೇರಿದಂತೆ ಮುಂತಾದವರು ಇದ್ದರು. ಚೈತ್ರಾ ದಾಸರ ಪ್ರಾರ್ಥಿಸಿದರು. ಅಭಿಷೇಕ ದನವಾಡೆ ನಿರೂಪಿಸಿದರು. ಮಂಜುನಾಥ ತೊಂಡಿಕಟ್ಟಿ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ