ಕಡೂರುಹೆಚ್ಚುವರಿ ಫೀಡರ್ ಗಳ ಅಳವಡಿಕೆಯಿಂದ ತಂಗಲಿ ಭಾಗದ 110 ಕೆ.ವಿ. ರಿಸೀವಿಂಗ್ ಕೇಂದ್ರದಿಂದ ಸುತ್ತಲಿನ ಗ್ರಾಮಗಳು ಮತ್ತು ಐ ಪಿ ಸೆಟ್ ಗಳಿಗೆ ವೋಲ್ಟೇಜ್ ಸಮಸ್ಯೆ ನಿವಾರಿಸಲು ಕರೆಂಟ್ ನೀಡಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಶಾಸಕ ಕೆ.ಎಸ್. ಆನಂದ್ । ತಂಗಲಿ 110 ಕೆವಿ. ವಿದ್ಯುತ್ ಕೇಂದ್ರದಲ್ಲಿ ಫೀಡರ್ ಅಳವಡಿಕೆಗೆ ಚಾಲನೆ
ಕನ್ನಡಪ್ರಭ ವಾರ್ತೆ ಕಡೂರು
ಹೆಚ್ಚುವರಿ ಫೀಡರ್ ಗಳ ಅಳವಡಿಕೆಯಿಂದ ತಂಗಲಿ ಭಾಗದ 110 ಕೆ.ವಿ. ರಿಸೀವಿಂಗ್ ಕೇಂದ್ರದಿಂದ ಸುತ್ತಲಿನ ಗ್ರಾಮಗಳು ಮತ್ತು ಐ ಪಿ ಸೆಟ್ ಗಳಿಗೆ ವೋಲ್ಟೇಜ್ ಸಮಸ್ಯೆ ನಿವಾರಿಸಲು ಕರೆಂಟ್ ನೀಡಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಗುರುವಾರ ಕಡೂರು ಸಮೀಪದ ತಂಗಲಿ 110 ಕೆವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ₹6 ಕೋಟಿ ವೆಚ್ಚದ ಹೆಚ್ಚುವರಿ 6 ಫೀಡರ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ನಿಗದಿಯತ್ ಕಾವಲಿನ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜಿದ್ದು, ಶೀಘ್ರ ಸಬ್ ಸ್ಟೇಷನ್ ಪ್ರಾರಂಭವಾಗಲಿದೆ. ಅಲ್ಲಿನ ಜವಳಿ ಪಾರ್ಕ್ ಗೆ ಕರೆಂಟ್ ನೀಡಲು ಇದೀಗ ₹6 ಕೋಟಿ ವೆಚ್ಚದಲ್ಲಿ ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಜೆ ಜಾರ್ಜ್ ಕೈಗಾರಿಕೆಗಳ ಆರಂಭಕ್ಕೆ ಹೆಚ್ಚು ಉತ್ಸಾಹ ತೋರಿ ಕಾಳಜಿ ವಹಿಸಿ ₹6 ಕೋಟಿ ಮಂಜೂರು ಮಾಡಿದರು ಎಂದರು.
ಅಳಡಿಸುವ 6 ಫೀಡರ್ ಗಳ ಮುಖೇನ ವೋಲ್ಟೇಜ್ ಸಮಸ್ಯೆ ನಿವಾರಣೆ ಆಗಲಿದೆ. 220 ಕೆ.ವಿ. ಟಿಸಿಯಿಂದ ಕಾವಲಿನ ಕೈಗಾರಿಕಾ ವಲಯದ 264 ಎಕರೆಯ ಕೈಗಾರಿಕ ಪ್ರದೇಶಕ್ಕೆ ಕರೆಂಟ್ ನೀಡಲು ಸಾಧ್ಯವಾಗಲಿದೆ ಎಂದರು.
ಮೆಸ್ಕಾಂನ ಇ.ಇ. ಕುಮಾರಸ್ವಾಮಿ ಮಾತನಾಡಿ, ಇಂದು 120 ಎಂ.ಎ. ಮತ್ತು 10 ಎಂಎ. ಟ್ರಾನ್ಸ್ ಫಾರ್ಮರ್ ಅಳಡಿಸಲಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ವೋಲ್ಟೇ ಜ್ ಸಮಸ್ಯೆಗಳ ನಿವಾರಣೆ, ಪಂಪ್ ಸೆಟ್ ಗಳು, ಐ.ಪಿ. ಸೆಟ್ ಗಳು ಮತ್ತು ಸಣ್ಣ ಪುಟ್ಟ ಕೈಗಾರಿಕೆಗಳಿಗೆ ಇಲ್ಲಿಂದಲೇ ಕರೆಂಟ್ ನೀಡಲಾಗುತ್ತದೆ. ಕಳೆದ ವರ್ಷ ಇಲ್ಲಿಂದ ಕೈಗಾರಿಕೆ ಗಳಿಗೆ ಕರೆಂಟ್ ನೀಡಲು ಆಗದ ಕಾರಣ ಶಾಸಕರ ಪ್ರಯತ್ನದಿಂದ ಹೆಚ್ಚುವರಿ ಟಿ.ಸಿ. ಮಂಜೂರು ಮಾಡಿಸಿರುವುದರಿಂದ ಘಟಕ ಅಳವಡಿಕೆಗೆ ಶಾಸಕರಿಂದ ಚಾಲನೆ ನೀಡಲಾಗುತ್ತಿದೆ. ನಗದಿಯತ್ ಕಾವಲಿನ ಕೈಗಾರಿಕೆಗಳಿಗೆ ಕರೆಂಟ್ ನೀಡಲಾ ಗುವುದು. ಇಲ್ಲಿ 23 ಫೀಡರ್ ಗಳು ಈ ಕೇಂದ್ರದಲ್ಲಿದ್ದು, ಹೆಚ್ಚುವರಿ 6 ಫೀಡರ್ ಅಳವಡಿಸಲಾಗುವುದು ಎಂದರು.
ಮೆಸ್ಕಾಂನ ಎಇಇ ಚಂದ್ರು, ಯೋಗೀಶ್, ಮುಖಂಡರಾದ ರುದ್ರೇಗೌಡ, ನಂದೀಶ್, ಪುಟ್ಟರಾಜು, ಲೈನ್ ಮನ್ ಗಳು ಮತ್ತಿತರರು ಇದ್ದರು..
3ಕೆಕೆಡಿಯು 1. ಕಡೂರು ತಾಲೂಕಿನ ತಂಗಲಿಯ ಮೆಸ್ಕಾಂನ ರಿಸೀವಿಂಗ್ ಸ್ಟೇಷನ್ ಕೇಂದ್ರದಲ್ಲಿ ₹6 ಕೋಟಿ ಹೆಚ್ಚುವರಿ ವಿದ್ಯುತ್ ವಿತರಣಾ ಘಟಕ ಅಳವಡಿಕೆ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು. ಮುಖಂಡರಾದ ರುದ್ರೇಗೌಡ, ಮೆಸ್ಕಾಂ ಇಲಾಖೆ ಅಧಿಕಾರಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.