ತರೀಕೆರೆಯಲ್ಲಿ ಶ್ರೀ ಕನಕದಾಸರ ಪ್ರತಿಮೆ ಸ್ಥಾಪನೆ: ಶಾಸಕ ಶ್ರೀನಿವಾಸ್

KannadaprabhaNewsNetwork |  
Published : Jun 16, 2025, 01:14 AM IST
ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ  ಶ್ರೀ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದುಃ ಶಾಸಕ ಜಿ.ಹೆಚ್.ಶ್ರೀನಿವಾಸ್ | Kannada Prabha

ಸಾರಾಂಶ

ತರೀಕೆರೆ, ಪಟ್ಟಣದ ಬಿ.ಎಚ್.ರಸ್ತೆಯ ಸರ್ವಸಮ್ಮತ ಸ್ಥಳದಲ್ಲಿ ಶ್ರೀ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ಶ್ರೀ ಸತ್ಯಹರಿಶ್ಚಂದ್ರ ಪ್ರತಿಮೆ ಗುರುವಿನ ಮನೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಬಿ.ಎಚ್.ರಸ್ತೆಯ ಸರ್ವಸಮ್ಮತ ಸ್ಥಳದಲ್ಲಿ ಶ್ರೀ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ಭಾನುವಾರ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದಿಂದ ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ರುದ್ರಭೂಮಿ ಯಲ್ಲಿ ನಡೆದ ಶ್ರೀ ಸತ್ಯಹರಿಶ್ಚಂದ್ರ ಪ್ರತಿಮೆ ಗುರುವಿನ ಮನೆ ಉದ್ಘಾಟನೆ, ತೋಟದಲ್ಲಿ ಹಿಂಗಾರು ಪೂಜೆ ಸಮಾರಂಭದಲ್ಲಿ ಮಾತನಾಡಿದರು. ಶ್ರೀ ಸತ್ಯಹರಿಶ್ಟಂದ್ರ ಚಕ್ರವರ್ತಿ ಸ್ಮಶಾನ ಕಾದಿದ್ದು ಇತಿಹಾಸ. ಸರ್ವರ ಸಹಕಾರದಿಂದ ಶ್ರೀ ಗುರು ರೇವಣಸಿದ್ದೇಶ್ವರ ರುದ್ರ ಭೂಮಿಯಲ್ಲಿ ಶ್ರೀ ಸತ್ಯ ಹರಿಶ್ಚಂದ್ರ ಪ್ರತಿಮೆ ಸ್ಥಾಪಿಸಿರುವುದು ಸಂತೋಷ ತಂದಿದೆ. ಕುರುಬ ಸಮಾಜ ಬಹಳ ದೊಡ್ಡ ಸಮಾಜ ವಾಗಿದ್ದು, ಪ್ರತಿವರ್ಷ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿಯ ಉತ್ಸವ ನಡೆಸಲು ತೇರು ನಿರ್ಮಾಣ ವಾಗುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಶ್ರೀ ಗುರು ರೇವಣಸಿದ್ದೇಶ್ವರ ರುದ್ರಭೂಮಿಯಲ್ಲಿ ಶ್ರೀ ಸತ್ಯ ಹರಿಶ್ಚಂದ್ರ ಪ್ತತಿಮೆ ಅನಾವರಣ ಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಶ್ರೀ ಸತ್ಯಹರಿಶ್ಚಂದ್ರರು ನುಡಿದಂತೆ ನಡೆದ ಮಹಾನ್ ಮಾನವತಾವಾದಿ, ಸತ್ಯ ಮತ್ತು ನ್ಯಾಯ ಎತ್ತಿಹಿಡಿದರು. ಸತ್ಯಕ್ಕಾಗಿ ಸಾಮ್ರಾಜ್ಯವನ್ನೇ ತ್ಯಜಿಸಿದರು, ಎಂತಹ ಕಷ್ಟಗಳು ಬಂದರೂ ಎದೆಗುಂದದೆ ಸತ್ಯದ ಹಾದಿಯಲ್ಲಿ ನಡೆದರು, ಇಂತಹ ಪುಣ್ಯಪುರುಷನ ಪ್ರತಿಮೆ ಅನಾವರಣವಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.

ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಎಲ್ಲಾ ಬಳಗದವರ ಸಹಕಾರ ಪಡೆದು ಶ್ರೀ ಸತ್ಯಹರಿಶ್ಚಂದ್ರರ ಪ್ರತಿಮೆ ಸ್ಥಾಪಿಸಲಾಗಿದೆ. ಶ್ರೀ ಸತ್ಯಹರಿಶ್ಚಂದ್ರರು ಧರ್ಮ, ಸತ್ಯದ ಹಾದಿಯಲ್ಲಿ ನಡೆದ ಮಹಾನ್ ಚೇತನ, ಶ್ರೀ ಸತ್ಯಹರಿಶ್ಚಂದ್ರರ ಪ್ರತಿಮೆ ಸ್ಥಾಪನೆಗೆ ನೆರವು ನೀಡಿದ ಶಾಸಕ ಜಿ.ಎಚ್.ಶ್ರೀನಿವಾಸ್ ಸೇರಿದಂತೆ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಮುಖಂಡರಾದ ಟಿ.ಆರ್.ಇಂದ್ರಯ್ಯ, ರಂಗಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಮಾತನಾಡಿದರು. ಪುರಸಭೆ ಸದಸ್ಯ ಚೇತನ್ ಕುಮಾರ್, ಮುಖಂಡರಾದ ಗೋವಿಂದಪ್ಪ, ರೇವಣ್ಣ, ಟಿ.ಎನ್.ಶಿವಣ್ಣ, ಟಿ.ಎನ್. ಕುಮಾರಸ್ವಾಮಿ, ಟಿ.ಜಿ.ಹರೀಶ್, ಎಸ್.ಆರ್.ಎಸ್.ರಾಮು, ಟಿ.ಡಿ.ರವಿಕುಮಾರ್, ಪ್ರಸನ್ನಕುಮಾರ್, ಎಸ್.ರವಿ, ಗೋವಿಂದಣ್ಣ, ಮಲ್ಲಿಕಣ್ಣ, ಟಿ.ಎಂ.ಹರೀಶ್, ಮಧು, ನವೀನ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು.-

15ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದಿಂದ ಶ್ರೀ ಗುರು ರೇವಣಸಿದ್ದೇಶ್ವರ ರುದ್ರಭೂಮಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಶ್ರೀ ಸತ್ಯಹರಿಶ್ಚಂದ್ರ ಪ್ರತಿಮೆ ಗುರುವಿನ ಮನೆ ಉದ್ಘಾಟನೆ ನೆರವೇರಿಸಿದರು. ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ