ಇಎನ್‌ಟಿ ವೈದ್ಯರ ನೇಮಕ
ಸುಮಾರು ₹2.45 ಕೋಟಿ ವೆಚ್ಚದಲ್ಲಿ ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 49 ಗ್ರಾಪಂ ವ್ಯಾಪ್ತಿಯಲ್ಲಿ ಹೈಮಾಸ್ಕ್ ಲೈಟ್ ಅಳವಡಿಕೆಗೆ ಮಂಗಳವಾರ ಪಟ್ಟಣದ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಶಾಸಕಿ ನಯನಾ ಮೋಟಮ್ಮ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಕ್ಷೇತ್ರದ 49 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ಹೈ ಮಾಸ್ಕ್ ಲೈಟ್ ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ಮುಖ್ಯಮಂತ್ರಿ ವಿಶೇಷ ಅನುದಾನ ದಡಿ ₹2.45 ಕೋಟಿ ಮೀಸಲಿಟ್ಟು, ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅವಶ್ಯಕತೆ ಇರುವ ಸ್ಥಳದಲ್ಲಿ ಹೈಮಾಸ್ಕ್ ಲೈಟ್ ಅಳವಡಿಸಲು ಚಾಲನೆ ನೀಡಲಾಗಿದೆ ಎಂದು ಹೇಳಿದರು.ಎಂಜಿಎಂ ಆಸ್ಪತ್ರೆಯಲ್ಲಿ ಕೊರತೆಯಿದ್ದ ಇಎನ್‌ಟಿ ವೈದ್ಯರನ್ನು ನೇಮಿಸಲಾಗಿದೆ. ಶಸ್ತ್ರ ಚಿಕಿತ್ಸಾ, ಮೂಳೆ ಹಾಗೂ ಅರವಳಿಕೆ ವೈದ್ಯರಿಲ್ಲದೇ ಜನರು ಪರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿವೇಶನ ದಲ್ಲಿ ಪ್ರಸ್ತಾಪ ಮಾಡುವ ಜತೆಗೆ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರಕಾರದ ಗಮನ ಸೆಳೆದು ವೈದ್ಯರನ್ನು ನೇಮಿಸಲು ಶ್ರಮಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್‌ಬಾಬು, ಎಂಜಿಎಂ ಆಡಳಿತ ವೈದ್ಯಾಧಿಕಾರಿ ಡಾ.ಪ್ರಿಯಾಂಕ, ಮುಖಂಡರಾದ ಕುನ್ನಳ್ಳಿ ರವಿ, ಸಿ.ಬಿ.ಶಂಕರ್, ರಘು ಮಗ್ಗಲಮಕ್ಕಿ, ರಮೇಶ್ ಹೊಸ್ಕೆರೆ, ಚಂದ್ರು ಒಡೆಯರ್, ಹರೀಶ್ ಸಬ್ಬೇನಹಳ್ಳಿ, ಸಂಪತ್ ಬಿಳಗುಳ, ಬಿ.ಎಸ್.ಲವ, ಎಚ್.ಎಂ.ಜಗದೀಶ್ ಹಾಜರಿದ್ದರು.20 ಮೂಡಿಗೆರೆ 1ಎ ಮೂಡಿಗೆರೆ ಪಟ್ಟಣದ ಎಂಜಿಎಂ ಆಸತ್ರೆ ಆವರಣದಲ್ಲಿ ಶಾಸಕಿ ನಯನಾ ಮೋಟಮ್ಮ ಹೈಮಾಸ್ಕ್ ಲೈಟ್ ಅಳವಡಿಕೆಗೆ ಗುದ್ದಲಿ ಪೂಜೆ ನೆರವೇರಿಸಿದರು.