25ಕ್ಕೆ ಸಾಯಿಬಾಬಾ ಮಂದಿರದಲ್ಲಿ ಮೂರ್ತಿ ಲೋಕಾರ್ಪಣೆ

KannadaprabhaNewsNetwork | Published : Dec 20, 2024 12:49 AM

ಸಾರಾಂಶ

ನೂತನ ಸಾಯಿಬಾಬಾ ಮಂದಿರ ಸ್ಥಾಪಿಸಲಾಗಿದ್ದು, ಮಂದಿರದ ಮೂರ್ತಿ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಬಾಬುರಾವ್‌ ಗುದಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಈ ತಿಂಗಳ 25ರಂದು ಬೆಳಿಗ್ಗೆ 11ಕ್ಕೆ ತಾಲೂಕಿನ ಸುಕ್ಷೇತ್ರ ಹೊನ್ನಿಕೇರಿ ಸಿದ್ಧೇಶ್ವರ ಮಂದಿರದ ಸಮಿಪ ದೂರದಲ್ಲಿ ನೂತನ ಸಾಯಿಬಾಬಾ ಮಂದಿರ ಸ್ಥಾಪಿಸಲಾಗಿದ್ದು, ಮಂದಿರದ ಮೂರ್ತಿ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾದ ಹಿರಿಯ ರಾಜಕಾರಣಿ ಬಾಬುರಾವ್‌ ಗುದಗೆ ತಿಳಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 37 ವರ್ಷಗಳ ಹಿಂದೆ ಜನವಾಡದ ಓರ್ವ ದಾನಿಗಳು ಮಂದಿರ ಕಟ್ಟಲು ಜಾಗ ಕೊಡುವುದಾಗಿ ಘೋಷಿಸಿದ್ದರು. ಅದರಂತೆ ಕಳೆದ 3 ವರ್ಷಗಳ ಹಿಂದೆ ಶ್ರೀ ಸಿದ್ಧೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್‌ ಸ್ಥಾಪನೆ ಮಾಡಿ, ಸುಮಾರು 10 ಎಕರೆ ಪರಿಸರದಲ್ಲಿ ಮಂದಿರ ಹಾಗೂ ಅದಕ್ಕೆ ಸಂಬಂಧಿಸಿದ ಕಾಂಪ್ಲೆಕ್ಸ್‌ ಹಾಗೂ ಮಂದಿರವನ್ನು ಕಳೆದ ಎರಡೂವರೆ ವರ್ಷಗಳಿಂದ ಕಟ್ಟಲ್ಪಟ್ಟು, ಅದನ್ನು ಈಗ ಪೂರ್ಣಗೊಳಿಸಲಾಗಿದೆ ಎಂದರು. ಗುದಗೆ ಹಾಗೂ ಅಷ್ಟೂರ್‌ ಪರಿವಾರ ಸೇರಿಕೊಂಡು ಟ್ರಸ್ಟ್‌ ಸ್ಥಾಪಿಸಿ ಅದರಡಿಯಲ್ಲಿ 112 ಎಕರೆ ಜಮೀನಿನನ ಪೈಕಿ 110ರಲ್ಲಿ ಎನ್‌ಎ ಮಾಡಿ ಮಂದಿರ ಅಭಿವೃದ್ಧಿಗಾಗಿ ಅಲ್ಲಿ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಂದು ಮಾದರಿ ಹಾಗೂ ದೂರದೃಷ್ಟಿಯುಳ್ಳ ಮಂದಿರವನ್ನಾಗಿ ಪರಿವರ್ತಿ ಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.ಮಂದಿರದ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅಲ್ಲಿ ಉಳಿದುಕೊಳ್ಳಲು ಪುರುಷರು ಹಾಗೂ ಮಹಿಳಾ ಭಕ್ತಾದಿಗಳಿಗೆ ಪ್ರತ್ಯೇಕ ವಸತಿ ಗೃಹಗಳು, ಶೌಚಾಲಯ ಗಳನ್ನು ನಿರ್ಮಿಸಲಾಗಿದೆ. ಶಿರಡಿ ಸಾಯಿಬಾಬಾ ಮಂದಿರದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸುವ ಮೂಖೇನ ಕ್ರಮ ವಹಿಸಲಾಗುವುದೆಂದರು.ಟ್ರಸ್ಟಿಗಳು ಹಾಗೂ ಕರ್ನಾಟಕ ರಾಷ್ಟೀಯ ಶಿಕ್ಷಣ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವರಾಜ ಪಾಟೀಲ್‌ ಅಷ್ಟೂರ್‌ ಮಾತನಾಡಿ, 23ರ ಸೋಮವಾರ 10.30ಕ್ಕೆ ಹಾಗೂ 24ರಂದು ಅದೇ ಸಮಯಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಡೆಯುವವು. 25ರಂದು ಬೆಳಿಗ್ಗೆ 11ಕ್ಕೆ ಹಾರಕೂಡ ಶ್ರೀಮಠದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಾಡುವರು. ಖೇಳಗಿಯ ಶಿವಲಿಂಗ ಮಹಾಸ್ವಾಮಿಗಳು ಕಳಸಾರೊಹಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯ ಅತಿಥಿಗಳಾಗಿ, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸೇರಿದಂತೆ ಜಿಲ್ಲೆಯ ಶಾಸಕರುಗಳು ಗೌರವ ಅತಿಥಿಗಳಾಗಿ ಭಾಗವಹಿಸುವರು. ಮಂದಿರದ ಟ್ರಸ್ಟಿಗಳು ಹಾಗೂ ಖ್ಯಾತ ವೈದ್ಯರಾದ ಡಾ.ಚಂದ್ರಕಾಂತ ಗುದಗೆ ಮಾತನಾಡಿದರು.

Share this article