ಅನುಮತಿ ಇಲ್ಲದೆ ನಾಮಫಲಕ ಅಳವಡಿಕೆ: ಗ್ರಾಪಂನಿಂದ ತೆರವು

KannadaprabhaNewsNetwork |  
Published : Mar 17, 2026, 01:15 AM IST
 | Kannada Prabha

ಸಾರಾಂಶ

ಆಲ್ದೂರು. ಹಾಂದಿ ಗ್ರಾಮದ ವೃತ್ತದಲ್ಲಿ ಭಾನುವಾರ ಉದ್ಘಾಟನೆಯಾಗಿದ್ದ ಬಿಲ್ಲವ ವೃತ್ತದ ನಾಮಫಲಕವನ್ನು ಸತ್ತಿಹಳ್ಳಿ ಗ್ರಾಮ ಪಂಚಾಯತಿಯಿಂದ ತೆರವು ಮಾಡಿದ್ದು ಈ ನಡೆಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲ್ದೂರು.

ಹಾಂದಿ ಗ್ರಾಮದ ವೃತ್ತದಲ್ಲಿ ಭಾನುವಾರ ಉದ್ಘಾಟನೆಯಾಗಿದ್ದ ಬಿಲ್ಲವ ವೃತ್ತದ ನಾಮಫಲಕವನ್ನು ಸತ್ತಿಹಳ್ಳಿ ಗ್ರಾಮ ಪಂಚಾಯತಿಯಿಂದ ತೆರವು ಮಾಡಿದ್ದು ಈ ನಡೆಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಂದಿ ಗ್ರಾಮದ ವೃತ್ತದಲ್ಲಿ ಭಾನುವಾರ ಬಿಲ್ಲವ ಸಮಾಜದಿಂದ ವೃತ್ತ ನಿರ್ಮಿಸಿ ಬ್ರಹ್ಮಶ್ರೀ ನಾರಾಯಣಗುರು ಹೆಸರಿನ ನಾಮಫಲಕ ಆಳವಡಿಸಿ ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಗಿತ್ತು.

ಆದರೆ ಸೋಮವಾರ ಬೆಳಗ್ಗೆ ವೃತ್ತದಲ್ಲಿ ಆಳವಡಿಸಿದ್ದ ನಾಮಫಲಕ ಕಾಣೆಯಾಗಿದ್ದು ಬಿಲ್ಲವ ಸಮಾಜದವರು ಇದು ಕಿಡಿಗೇಡಿಗಳ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ನಾಮಫಲಕ ಆಳವಡಿಸಲು ಸ್ಥಳೀಯ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯದ ಕಾರಣ ಸ್ಥಳೀಯ ಗ್ರಾಮ ಪಂಚಾಯತಿ ತಡ ರಾತ್ರಿ ನಾಮ ಫಲಕ ತೆರವುಗೊಳಿಸಿತ್ತು.

ಬಿಲ್ಲವ ಸಮಾಜದವರು ವೃತ್ತದಲ್ಲಿ ನಾಮಫಲಕ ಆಳವಡಿಸಲು ಸ್ಥಳೀಯ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದು ಈ ಮನವಿಯನ್ನು ತಾಪಂ ಹಾಗೂ ಜಿಲ್ಲಾ ಪಂಚಾಯತಿಗೆ ರವಾನಿಸಿತ್ತು ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಅನುಮತಿ ಇಲ್ಲದೇ ನಾಮಫಲಕ ಆಳವಡಿಸಿದಕ್ಕೆ ಕೆಲವು ಸಂಘಟನೆಗಳಿಂದ ಬಾರಿ ಅಸಮಧಾನ ವ್ಯಕ್ತವಾಗಿತ್ತು ಎನ್ನಲಾಗಿದೆ.

-- ಕೋಟ್‌--

ವೃತ್ತಕ್ಕೆ ನಾಮಫಲಕ ಆಳವಡಿಸಲು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಮುಂಜಾಗ್ರತ ಕ್ರಮವಾಗಿ ಸ್ಥಳೀಯ ಗ್ರಾಪಂ ಪೋಲಿಸ್ ಇಲಾಖೆ ರಕ್ಷಣೆಯೊಂದಿಗೆ ನಾಮಫಲಕವನ್ನು ತಡ ರಾತ್ರಿ ತೆರವು ಗೊಳಿಸಲಾಗಿದೆ.

ಸೋಮೇಗೌಡ ವೃತ್ತ ನೀರಿಕ್ಷಕ ಆಲ್ದೂರು

೧೬ಎಎಲ್‌ಡಿ-೧

ಹಾಂದಿ ಗ್ರಾಮದಲ್ಲಿ ಭಾನುವಾರ ಉದ್ಘಾಟನೆಯಾಗಿದ್ದ ನಾಮ ಫಲಕ.

೧೬ ಎಎಲ್‌ಡಿ-೧ಎ

ಸೋಮವಾರ ಅ ವೃತ್ತದಿಂದ ನಾಮ ಫಲಕ ತೆರವು ಮಾಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು
ಸಿಲಿಂಡರ್ ದರ ಹೆಚ್ಚಳ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ