ರಾಮನಗರ: ಕಾಡಂಚಿನ ಪ್ರದೇಶಗಳನ್ನು ಹೆಚ್ಚಾಗಿ ಹೊಂದಿರುವ ಗ್ರಾಮಗಳ ರಸ್ತೆಗಳಿಗೆ ಸೋಲಾರ್ ಬೀದಿ ದೀಪ, ಬಡವರಿಗೆ ಹಸುಗಳು ಹಾಗೂ ಮಕ್ಕಳಿಗಾಗಿ ಡಿಜಿಟಲ್ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿಕೊಡುವಂತೆ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಟೊಯೋಟಾ ಟ್ಸು ಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಲ್ಲಿ ಮನವಿ ಮಾಡಿದರು.
ಈಗ ಟೊಯೋಟಾ ಸಿಎಸ್ ಆರ್ ವತಿಯಿಂದ ಹುಲಿಕೆರೆ ಗುನ್ನೂರು ಗ್ರಾಪಂನ ಹುಲಿಕೆರೆ ಗುನ್ನೂರು ಎಸ್‌ಆರ್‌ಎಸ್ ಬೆಟ್ಟ, ಪೂಜಾರಿದೊಡ್ಡಿ, ಸಾಹುಕಾರ್ ದೊಡ್ಡಿ, ಕೋಟಹಳ್ಳಿ, ಸಬ್ಬಕೆರೆ ಕಾಲೋನಿ, ಕೆರೆಮೇಗಳದೊಡ್ಡಿ, ಕುರುಬಳ್ಳಿದೊಡ್ಡಿ, ದಣೆವರದೊಡ್ಡಿ, ಅಮ್ಮನಪುರ, ತೆಂಗಿನಕಲ್ಲು, ಗುನ್ನೂರುಕೆಬ್ಬೆ ಗ್ರಾಮಗಳಿಗೆ 100 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಒಂದು ಸೋಲಾರ್ ಬೀದಿ ದೀಪಕ್ಕೆ 33 ಸಾವಿರ ರುಪಾಯಿ ವೆಚ್ಚ ತಗುಲಲಿದ್ದು, ಇದನ್ನು ಯುನೈಟೆಡ್ ವೇ ಎನ್ ಜಿಓರವರೇ 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದಾರೆ. ಇವುಗಳ ಅಳವಡಿಕೆಯಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಳ್ಳಿಗಳಲ್ಲಿ ಹೆಚ್ಚು ಪ್ರಕಾಶಮಾನ ಜೊತೆಗೆ ಸೌಂದರ್ಯ ವೃದ್ದಿ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.ಗ್ರಾಪಂಗೆ ಸೇರಿದ ಹಳ್ಳಿಗಳಲ್ಲಿ ತುಂಬಾ ಹಿಂದುಳಿದ ರೈತ ಕುಟುಂಬಗಳಿದ್ದು, ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಲು ಆಸಕ್ತರಾಗಿದ್ದಾರೆ. ಅವರ ಕೌಟುಂಬಿಕ ನಿರ್ವಹಣೆಗಾಗಿ ಬಡ ಕುಟುಂಬದವರಿಗೆ 200 ಸೀಮೆ ಹಸುಗಳನ್ನು ವಿತರಿಸುವ ಮೂಲಕ ಹಿಂದುಳಿದ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಗ್ರಾಪಂ ವ್ಯಾಪ್ತಿಗೆ ಸೇರಿದ ಕುರುಬರಹಳ್ಳಿದೊಡ್ಡಿ, ತೆಂಗಿನಕಲ್ಲು ಮತ್ತು ಕೋಟಹಳ್ಳಿ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ನಿವೇಶನ ಮತ್ತು ಕಟ್ಟಡವು ಇಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಮೂಲ ಸೌಕರ್ಯಗಳಿಲ್ಲದೆ ಅಂಗನವಾಡಿ ಕೇಂದ್ರಗಳನ್ನು ನಡೆಸುತ್ತಿದ್ದು, ಮಳೆಗಾಲದಲ್ಲಿ ಕಟ್ಟಡಗಳ ಮೇಲ್ಛಾವಣಿ ಸೋರುತ್ತಿದೆ.
ಲಿಮಿಟೆಡ್ ಕಂಪನಿಯ ಟೈಸುಕೆ ವಯೋಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಂಪನಿಯ ಸಿಎಸ್ ಆರ್ ಅನುದಾನದಲ್ಲಿ ಖುಷಿಯಿಂದ ಬೀದಿ ದೀಪ ಅಳವಡಿಸಿದ್ದೇವೆ. ಇವುಗಳನ್ನು ಗ್ರಾಮಸ್ಥರು ಸಂರಕ್ಷಣೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನಾವು ಅದನ್ನು ನೋಡಿ ಮತ್ತಷ್ಟು ಸಮುದಾಯ ಕೆಲಸ ಮಾಡಲು ಹೆಚ್ಚು ಆಸಕ್ತಿ ಬರಲಿದೆ. ಬೀದಿ ದೀಪ ಬೆಳಗಿದಂತೆ ನಿಮ್ಮ ಜೀವನ ಸಹ ಬೆಳಗಲಿ ಎಂದು ಆಶಿಸಿದರು.
ಕೋಟ್ .............
- ಗಿರೀಶ್, ಅಧ್ಯಕ್ಷರು, ಹುಲಿಕೆರೆ ಗುನ್ನೂರು ಗ್ರಾಪಂ
ರಾಮನಗರ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುನ್ನೂರು ಗ್ರಾಮದಲ್ಲಿ ಗಣ್ಯರು ಸೋಲಾರ್ ಬೀದಿ ದೀಪ ಲೋಕಾರ್ಪಣೆ ಮಾಡಿದರು.