ಪಾಳೇದಹಳ್ಳಿಯಲ್ಲಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ

KannadaprabhaNewsNetwork |  
Published : Aug 14, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್   | Kannada Prabha

ಸಾರಾಂಶ

ಮೂರು ದಿನಗಳ ಕಾಲ ವಿವಿಧ ಪೂಜಾವಿಧಿ । ಕಳಶಾರೋಹಣ ಮಹೋತ್ಸವ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹೊಸದುರ್ಗ ತಾಲೂಕಿನ ಕಸಬಾ ಹೋಬಳಿಯ ಪಾಳೇದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪ್ರವೇಶ, ವಿಗ್ರಹ ಪ್ರತಿಷ್ಠಾಪನೆ, ಕಳಶಾರೋಹಣ ಹಾಗೂ ಧಾರ್ಮಿಕ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಶ್ರೀ ಅಂಜನೇಯಸ್ವಾಮಿ ದೇವಾಲಯ ಸೇವಾಟ್ರಸ್ಟ್, ಪಾಳೇದಹಳ್ಳಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತಾದಿಗಳ ಜಂಟಿ ಆಶ್ರಯದಲ್ಲಿ ಆ.15 ರಿಂದ 17ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಆಗಸ್ಟ್ 15ರ ಶನಿವಾರ ಸಂಜೆ 5 ಗಂಟೆಗೆ ಆಹ್ವಾನಿತ ದೇವರುಗಳ ‘ಕೂಡುಬೇಟಿ’ ಕಾರ್ಯಕ್ರಮದೊಂದಿಗೆ ಚಾಲನೆ ಪಡೆಯಲಿವೆ. ಈ ಸುಸಂದರ್ಭದಲ್ಲಿ ಹಳೇಕುಂದೂರಿನ ಶ್ರೀ ಅಂಜನೇಯಸ್ವಾಮಿ, ಪಾಳೇದಹಳ್ಳಿಯ ಶ್ರೀ ಗುಳ್ಳಮ್ಮದೇವಿ, ಬಾಗೂರಿನ ಶ್ರೀ ಮಸಿಯಮ್ಮದೇವಿ, ಕಲ್ಲೇರೆಯ ಶ್ರೀ ಕರಿಯಮ್ಮದೇವಿ ಹಾಗೂ ಅದ್ರಿಕಟ್ಟೆಯ ಶ್ರೀ ಹೊಲಮ್ಮದೇವಿ ಉತ್ಸವ ಮೂರ್ತಿಗಳು ಆಗಮಿಸಲಿದ್ದು, ಕೂಡುಬೇಟಿ ಕಾರ್ಯಕ್ರಮದ ನಂತರ ವಿವಿಧ ಹೋಮ-ಹವನಗಳು ಜರುಗಲಿವೆ.

ಆ.16ರ ಭಾನುವಾರ ಬೆಳಗಿನ ಜಾವ ಗಂಗಾಪೂಜೆ, ಗಣಪತಿ ಪೂಜೆ, ಗೋಪೂಜೆ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನಂದೀಪುರ ಹಿರೇಮಠದ ಶ್ರೀ ಷಟ್ಸ್ಥಲ ಬ್ರಹ್ಮ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ అಮೃತ ಹಸ್ತದಿಂದ ನೆರವೇರಲಿವೆ. ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಮಾರಂಭ ಆಯೋಜಿತಗೊಂಡಿದ್ದು, ಮುಷ್ಟೂರು ಶ್ರೀಶೈಲ ಶಾಖಾಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರದ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಹಡ್ಲಿಯ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಉದ್ಯಮಿ ಮಲ್ಲಿಕಾರ್ಜುನ್ ಪಿ.ಎಂ ಅಧ್ಯಕ್ಷತೆ ವಹಿಸುವರು. ಶಾಸಕರುಗಳಾದ ಬಿ.ಜಿ ಗೋವಿಂದಪ್ಪ ಕೆ.ಸಿ ವೀರೇಂದ್ರ ಪಪ್ಪಿ, ಕೆ.ಎನ್. ನವೀನ್, ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆಗಮಿಸಲಿದ್ದಾರೆ. 17 ರ ಸೋಮವಾರ ಸಂಜೆ 5.30ಕ್ಕೆ ದೇವರುಗಳ ಹೂವಿನ ಉತ್ಸವ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ, ಟ್ಯಾಕ್ಸಿ ನಿಲ್ದಾಣ ಕಾಮಗಾರಿ ವಸ್ತುಗಳು ನಗರಸಭೆ ವಶಕ್ಕೆ
ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ಧ ಪಿಂಡ ಪ್ರದಾನ