ಕನ್ನಡಪ್ರಭವಾರ್ತೆ ತಿಪಟೂರು
ಕ್ರಿಯಾತ್ಮಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರಿಯಾಶೀಲತೆಯನ್ನು ಹೊರತೆಗೆಯುವ ಕೆಲಸ ಆಗಬೇಕಾಗಿದೆ. ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಅವಶ್ಯಕತೆಗನುಗುಣವಾಗಿ ತರಬೇತಿ ಆಧಾರಿತ ಕೋರ್ಸ್‌ಗಳು ಇಂದು ಬೇಡಿಕೆಯಲ್ಲಿವೆ. ವಿದ್ಯಾರ್ಥಿ ಸ್ನೇಹಿ ಕೈಗಾರಿಕೆಗಳ ಸ್ಥಾಪನೆ ಇಂದಿನ ಅವಶ್ಯಕತೆಯಾಗಿದೆ. ಜಾಗತಿಕ ಮಾರುಕಟ್ಟೆಗೆ ನಮ್ಮ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ. ಇಂದು ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಇನ್ನೋವೇಷನ್ ಅಂಡ್ ಇನ್‌ಕ್ಯೂಬೇಶನ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ. ತುಮಕೂರು ವಿವಿಯ ಎಂಟು ಡಿಪಾರ್ಟ್‌ಮೆಂಟ್‌ಗಳಲ್ಲಿ ಈಗಾಗಲೇ ಇದನ್ನು ಪ್ರಾರಂಭಿಸಲಾಗಿದೆ. ನಾಡಿನ ಪ್ರಮುಖ ಕಲ್ಪತರು ವಿದ್ಯಾಸಂಸ್ಥೆ ಈ ನಿಟ್ಟಿನಲ್ಲಿ ಇನ್ನೋವೇಷನ್ ಅಂಡ್ ಇನ್‌ಕ್ಯೂಬೇಶನ್ ಸೆಂಟರ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ತುಮಕೂರಿನ ಕೊಪ್ಪೊರಾಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಚ್.ಜಿ. ಚಂದ್ರಶೇಖರ್ ಮಾತನಾಡಿ ಓದಿದ ಎಲ್ಲರಿಗೂ ಕೆಲಸ ದೊರೆಯುವುದಿಲ್ಲ. ಹತ್ತು ಜನರಿಗೆ ಉದ್ಯೋಗವಕಾಶ ಇದ್ದರೆ ಸಾವಿರ ಜನರು ಅದಕ್ಕೆ ಕಾಯುತ್ತಿರುತ್ತಾರೆ. ಯುವ ಜನತೆ ಕೆಲಸವನ್ನೇ ಹುಡುಕುತ್ತಾ ಕೂರುವುದು ಬಿಟ್ಟು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿ ಇನ್ನೂ ಹಲವರಿಗೆ ಉದ್ಯೋಗ ಕೊಡುವುದರಿಂದ ದೇಶದ ಜಿಡಿಪಿ ಹೆಚ್ಚಾಗುತ್ತದೆ. ತಮ್ಮ ದಿನನಿತ್ಯದ ಓದಿನ ಜೊತೆಗೆ ಇನ್‌ಕ್ಯೂಬೇಶನ್ ಸೆಂಟರ್ ಮೂಲಕ ತರಬೇತಿ ಪಡೆದರೆ ಕೆಲಸದ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಅಲ್ಲದೆ ಸ್ವ-ಉದ್ಯೋಗದಾತರು ಸರಕಾರಕ್ಕೆ ತೆರಿಗೆ ಪಾವತಿಸುವುದರಿಂದ ದೇಶದ ಅಭಿವೃದ್ಧಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದರು. ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ ನೂರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುವ ಇನ್ನೋವೇಷನ್ ಅಂಡ್ ಇನ್‌ಕ್ಯೂಬೇಶನ್ ಸೆಂಟರ್‌ನ್ನು ಕಲ್ಪತರು ವಿದ್ಯಾಸಂಸ್ಥೆ ಪ್ರಾರಂಭಿಸುತ್ತಿದ್ದು ಯುವ ಪೀಳಿಗೆ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸಲು, ಎಂಟರ್‌ಪ್ರೆನರ್ ಆಗಲು ತರಬೇತಿ ನೀಡಿ ತಯಾರು ಮಾಡಲಾಗುವುದು. ಈಗಾಗಲೇ ಯುವಕರು ಹಳ್ಳಿಗಳಿಂದ ಕೆಲಸ ಅರಸಿ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಕೇವಲ ವಯಸ್ಸಾದವರು ಉಳಿಯುತ್ತಿದ್ದಾರೆ. ಆದರೆ ಸ್ಥಳೀಯ ಸ್ಟಾರ್ಟಪ್‌ಗಳಿಂದ ನಗರಕ್ಕೆ ಯುವಕರು ವಲಸೆ ಹೋಗುವುದು ತಪ್ಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮತ್ತು ತುಮಕೂರು ಟಿಐಇಸಿ ಸಿಇಒ ಡಾ.ಸತೀಶ್ ಎಂ. ಭಾವಂಕರ್ ಮಾತನಾಡಿದರು. ಕೆವಿಎಸ್ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್, ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಬಿ.ಎಸ್.ಉಮೇಶ್ ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್.ಸಂಗಮೇಶ್, ಕೆಐಟಿ ಪ್ರಾಂಶುಪಾಲ ಸತೀಷ್‌ಕುಮಾರ್, ಎಂಬಿಎ ಮುಖ್ಯಸ್ಥೆ ದೀಪ್ತಿ ಅಮಿತ್, ಸಂಸ್ಥೆಯ ವಿವಿಧ ಶಾಲಾಕಾಲೇಜುಗಳ ಪ್ರಾಂಶುಪಾಲರಾದ ಡಾ.ಉಮೇಶ್, ಡಾ.ವಿಜಯಕುಮಾರಿ, ದೇವಿಕ. ಬಿ. ಸ್ವಾಮಿ, ವೀಣಾ ಮತ್ತಿತರರಿದ್ದರು.