ವಿಕಲಚೇತನರಿಗೆ ಅನುಕಂಪ ತೋರುವ ಬದಲು ಅವಕಾಶ ನೀಡಿ

KannadaprabhaNewsNetwork |  
Published : Jan 06, 2025, 01:02 AM IST
ಪೊಟೋ-ಪಟ್ಟಣದ ಪರ್ವತ ಮಲ್ಲಯ್ಯನ ದೇವಸ್ಥಾನದಲ್ಲಿ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. | Kannada Prabha

ಸಾರಾಂಶ

ವಿಕಲಚೇತನರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು, ಜೀವನದ ಭದ್ರತೆಯ ಜತೆಯಲ್ಲಿ ಎಲ್ಲ ರೀತಿಯ ಅವಕಾಶ ನೀಡುವ ಮೂಲಕ ಜೀವನದಲ್ಲಿ ಮುಂದೆ ಬರುವಂತೆ ನೋಡಿಕೊಳ್ಳಬೇಕು

ಲಕ್ಷ್ಮೇಶ್ವರ: ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವನೆ ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆ ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡುವುದು ಅಂಗವಿಕಲರ ದಿನಾಚರಣೆಯ ಮುಖ್ಯ ಉದ್ದೇಶ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಶನಿವಾರ ಪಟ್ಟಣದ ಪರ್ವತಮಲ್ಲಯ್ಯನ ದೇವಸ್ಥಾನದಲ್ಲಿ ಪುಲಿಗೆರೆ ಶ್ರೀಸೋಮೇಶ್ವರ ಅಂಗವಿಕಲರ ಸಂಘ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುರಸಭೆ ಲಕ್ಷೇಶ್ವರ ನಗರ ಪುನರ್ವಸತಿ ಕಾರ್ಯಕರ್ತರ ಸಹಯೋಗದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು, ಜೀವನದ ಭದ್ರತೆಯ ಜತೆಯಲ್ಲಿ ಎಲ್ಲ ರೀತಿಯ ಅವಕಾಶ ನೀಡುವ ಮೂಲಕ ಜೀವನದಲ್ಲಿ ಮುಂದೆ ಬರುವಂತೆ ನೋಡಿಕೊಳ್ಳಬೇಕು. ಅಂಗವಿಕಲರು ಸ್ವಾವಲಂಬಿಯಾಗಿ ಬದುಕಬೇಕು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು, ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಜಿ ಜಿಪಂ ಅಧ್ಯಕ್ಷ, ನ್ಯಾಯವಾದಿ ಎಸ್.ಪಿ.ಬಳಿಗಾರ, ರಾಮರಾವ್ ವರ್ಣೇಕರ್, ಶಿಕ್ಷಕಿ ಮೈತ್ರಾದೇವಿ ಹಿರೇಮಠ, ವೀಣಾ ಸಾತಣ್ಣವರ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ನ್ಯಾಯವಾದಿ ಆರ್.ಸಿ.ಪಾಟೀಲ್, ನದಾಫ್‌, ಫುಲಗೇರಿ ಸೋಮೇಶ್ವರ ಅಂಗವಿಕಲರ ಸಂಘ ಅಧ್ಯಕ್ಷ ಶಿವಲಿಂಗಪ್ಪ ಕುಂಬಾರ, ಎಂ.ಆರ್. ಡಬ್ಲ್ಯೂ.ಶಿರಹಟ್ಟಿ, ಭಾರತಿ ಮೂರಶಿಳ್ಳಿ, ನಗರ ಪುನರವಸತಿ ಕಾರ್ಯಕರ್ತ ಮಂಜುನಾಥ ರಾಮಗೇರಿ, ಪರಮೇಶ ಬಳಿಗಾರ, ಶರಣಪ್ಪ ಶಿಳ್ಳಿನ, ನಾಗಪ್ಪ ಅಣ್ಣಿಗೇರಿ, ನಾಮದೇವ ಲಮಾಣಿ, ವನಜಾಕ್ಷಿ ಹಾಲಗಿಮಠ, ಬಸವರಾಜ ಅರ್ಕಸಾಲಿ, ಶರಣಪ್ಪ ಬಡ್ನಿ ಸೇರಿದಂತೆ ಸೋಮೇಶ್ವರ ಅಂಗವಿಕಲರ ಸಂಘ ಸದಸ್ಯರು ನಗರದ ವಿಕಲಚೇತನರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ