ಕನ್ನಡಪ್ರಭ ವಾರ್ತೆ ಯಮಕನಮರಡಿ
ಸಭೆಯಲ್ಲಿ ಪ್ರಗತಿಪರ ರೈತ ಚಿದಂಬರ ದೇಶಪಾಂಡೆ ಮಾತನಾಡಿ, ಇಂದಿನ ಮಕ್ಕಳಿಗೆ ಹಿರಿಯರಿಗೆ ಕೊಡುವ ಗೌರವ ಕಡಿಮೆಯಾಗುತ್ತಿದೆ. ಇದನ್ನು ತಂದೆ ತಾಯಿಗಳು ಸೂಕ್ಷ್ಮವಾಗಿ ಗಮನಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು. ಸನಾತನ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪಣ ತೊಡಬೇಕೆಂದು ತಿಳಿಸಿದರು,
ಪ್ರಾಧ್ಯಾಪಕ ನೀಲಕಂಠ ಭೂಮಣ್ಣನವರ ಮಾತನಾಡಿ, ತಂದೆ ತಾಯಿಗಳು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದರು.ಬ್ಯಾಂಕ್ ನಿವೃತ್ತ ನೌಕರ ಖ.ಏ.ದೇಶಪಾಂಡೆ, ಸಂಸ್ಥೆಯ ಚಿಕ್ಕೋಡಿ ವಿಭಾಗದ ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಮಾತನಾಡಿದರು. ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸವರಾಜ ಕುರುಬೇಟ, ಗ್ರಾಪಂ ಅಧ್ಯಕ್ಷ ಬಾಳವ್ವ ಆಡಿಮನಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಅಬ್ದುಲ ಗಣಿ ದರ್ಗಾ, ಮಾಜಿ ಸದಸ್ಯ ಶಂಕರ ದುಂಡಗಿ, ಗಣ್ಯರಾದ ಹಯಾತ್ ಚಾಂದ ಮಕಂದಾರ್, ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ್ ಪಾಲ್ಗೊಂಡಿದ್ದರು. ಸಿಬ್ಬಂದಿ ಮೇಲ್ವಿಚಾರಕ ಚಂದ್ರಶೇಖರ ಹಲಸಗಿ, ಗೌರವ್ವ ಅಡಿಮನಿ, ಅಕ್ಷತಾ ಸುಲಧಾಳ, ರಾಘವೇಂದ್ರ ಗಡ್ಡನವರ, ರಮೇಶ ಮೇಟಿ, ಹಾಗೂ ಸ್ಥಳೀಯ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.