ಕನ್ನಡಪ್ರಭ ವಾರ್ತೆ ಮೈಸೂರು
ಛಾಯಾಗ್ರಾಹಕರ ವೃತ್ತಿಯಿಂದ ಹಣ ಸಂಪಾದನೆ ಮಾತ್ರವಲ್ಲದೆ ಪ್ರತಿಯೊಬ್ಬ ಛಾಯಾಗ್ರಾಹಕರಿಗೆ ನೈಪುಣ್ಯತೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ. ತಾಳ್ಮೆ, ಶಿಸ್ತು ಸಹ ಬರುತ್ತದೆ. ಒಟ್ಟಾರೆ ಛಾಯಾಗ್ರಹಣ ವೃತ್ತಿ ಒಂದು ಸೃಜನಾತ್ಮಕ ಕಲೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಫೋಟೋಗ್ರಾಫರ್ ಕೆಲಸ ಅತ್ಯಂತ ಸವಾಲಿನ ಕೆಲಸ. ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ನಡುವೆ ಸ್ಪರ್ಧೆಗಳು ಹೆಚ್ಚಾಗುತ್ತಿದ್ದು, ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವಂತಹ ನೈಪುಣ್ಯತೆ ಬೆಳೆಸಿಕೊಳ್ಳಬೇಕು. ಆ ಮೂಲಕ ಆ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುವಂತಹ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.ಛಾಯಾಗ್ರಹಕರು ಶುಭ ಸಂದರ್ಭಗಳಲ್ಲಿ ತೆಗೆಯುವಂತಹ ಒಂದು ಕ್ಷಣದ ಚಿತ್ರವು ಗ್ರಾಹಕರ ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ ಎಂದರು.ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮಾತನಾಡಿದರು. ಇದೇ ವೇಳೆ ಹಿರಿಯ ಛಾಯಾಗ್ರಹಕರಾದ ಸುದರ್ಶನ್, ಪಾಪಣ್ಣ, ನಾಗರಾಜುನಾಯ್ಡು, ಎಸ್.ಎನ್. ಬಾಬು, ಎನ್. ಸೋಮಸುಂದರ್ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳ ಪದಗ್ರಹಣಇತ್ತೀಚೆಗೆ ಜರುಗಿದ ಅಸೋಸಿಯೇಷನ್ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಬಿ. ವಿಜಯ್, ಉಪಾಧ್ಯಕ್ಷ ಎಚ್. ರಾಜಗೋಪಾಲ್, ಕಾರ್ಯದರ್ಶಿ ಧನಂಜಯ, ಸಹ ಕಾರ್ಯದರ್ಶಿ ಕೆ.ಎನ್. ಉಮಾಶಂಕರ್, ಖಜಾಂಚಿ ಕೆ. ಉಮೇಶ್, ಜನ ಸಂಪರ್ಕ ಅಧಿಕಾರಿ ಕೆ.ಜಿ. ಸಿದ್ದಲಿಂಗಪ್ರಸಾದ್, ನಿರ್ದೇಶಕರಾದ ಮಹೇಶ್, ಎ. ಮೋಹನ್, ಎಂ. ಲೋಕೇಶ್, ಎಂ.ಎನ್. ಮಂಜುನಾಥ್, ಎಂ. ನಾರಾಯಣಸ್ವಾಮಿ, ಮಂಜುನಾಥ, ಕೆ.ಯು. ವರ್ಗಿಸ್ ಅವರ ಪದಗ್ರಹಣ ಮಾಡಿದರು.