ಅವಿಷ್ಕಾರದ ಜ್ಞಾನ, ಹೊಸತನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

KannadaprabhaNewsNetwork |  
Published : Aug 21, 2025, 01:00 AM IST
5 | Kannada Prabha

ಸಾರಾಂಶ

ಈಗೀನ ಕಾಲಮಾನವನ್ನು ಡಿಜಿಟಲ್ ಸುವರ್ಣಯುಗ ಎನ್ನಬಹುದು. ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮನುಷ್ಯನ ಜಾಗದಲ್ಲಿ ನಿಂತು ಕೆಲಸ ಮಾಡಲು ಪ್ರಾರಂಭಿಸಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಅವಿಷ್ಕಾರದ ಜ್ಞಾನ ಮತ್ತು ಹೊಸತನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಲಹೆ ನೀಡಿದರು.ನಗರದ ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳ ಕ್ಯಾಂಪಸ್‌ ಆರ್.ಪಿ. ಸಿಂಘಾನಿಯಾ ಸಭಾಂಗಣದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ, ಜೆಎಸ್‌ಎಸ್ ವ್ಯವಹಾರ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ಡಿಜಿಟಲ್ ಇನೋವೇಶನ್ ಅಂಡ್ ಟ್ರಾನ್ಸ್‌ ‌ಫಾರ್ಮೇಷನ್ ಇನ್ ಸೌತ್‌ ಈಸ್ಟ್‌ ಏಷ್ಯಾ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಈಗೀನ ಕಾಲಮಾನವನ್ನು ಡಿಜಿಟಲ್ ಸುವರ್ಣಯುಗ ಎನ್ನಬಹುದು. ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮನುಷ್ಯನ ಜಾಗದಲ್ಲಿ ನಿಂತು ಕೆಲಸ ಮಾಡಲು ಪ್ರಾರಂಭಿಸಿವೆ. ಈ ಕ್ಷೇತ್ರಗಳಲ್ಲಿ ಹೊಸ ಹೊಸ ಮುಂದುವರೆದ ತಂತ್ರಜ್ಞಾನಗಳನ್ನು ಬಳಸಲು ಅನೇಕ ದೇಶಗಳು ಮುಂದಡಿ ಇಟ್ಟಿವೆ. ಹೀಗಾಗಿ, ಯುವ ಸಮೂಹಕ್ಕೆ ಅದರಲ್ಲೂ ಪದವೀಧರರಿಗೆ ಹೊಸ ಹೊಸ ಅವಕಾಶಗಳು ಹೇರಳವಾಗಿ ಲಭ್ಯವಾಗಲಿವೆ ಎಂದರು. ಡಿಜಿಟಲ್ ಇನೋವೇಶನ್ ಎನ್ನುವುದರ ವ್ಯಾಪ್ತಿಯೂ ಆಕಾಶದಷ್ಟಿದೆ. ಭಾರತವು ಜನಸಂಖ್ಯೆಯಲ್ಲಿ ಒಂದನೇ ಸ್ಥಾನವಿರುವುದರಿಂದ ಮಾನವ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಹೀಗಾಗಿ, ನಮ್ಮ ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸತನ್ನು ಬಳಕೆ ಮಾಡುವುದಕ್ಕೆ ಬಹಳ ಅವಕಾಶಗಳು ಇವೆ ಎಂದು ಅವರು ಹೇಳಿದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್, ಮಲೇಷಿಯಾ ವಿಜ್ಞಾನ ಮತ್ತು ತಾಂತ್ರಿಕ ವಿವಿ ಅಧ್ಯಕ್ಷ ಪ್ರೊ. ಪ್ರೇಮಕುಮಾರ್ ರಾಜಗೋಪಾಲ್, ಜೆಎಸ್‌ಎಸ್ ಎಸ್‌ ಅಂಡ್ ಟಿ ವಿವಿ ಕುಲಪತಿ ಪ್ರೊ.ಎ.ಎನ್. ಸಂತೋಷಕುಮಾರ್, ಕುಲಸಚಿವ ಡಾ.ಎಸ್.ಎ. ಧನರಾಜ್, ಎಸ್‌ ಜೆಸಿಇ ಪ್ರಾಂಶುಪಾಲ ಡಾ.ಸಿ. ನಟರಾಜ್, ಡೀನ್ ಡಾ.ಪಿ. ನಾಗೇಶ್, ಜೆಎಸ್‌ಎಸ್ ಸಿಎಂಎಸ್ ಮುಖ್ಯಸ್ಥರಾದ ಡಾ. ಸ್ವರೂಪ ಸಿಂಹ, ಕಾರ್ಯಕ್ರಮದ ಸಂಯೋಜಕಿ ಡಾ. ಅರುಣ ಆದರ್ಶ ಮೊದಲಾದವರು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ