ದೇವರಾಜ ಅರಸು, ರಾಜೀವ್ ಗಾಂಧಿ ನೈತಿಕ ರಾಜಕಾರಣದ ಕ್ರಾಂತಿ ಪುರುಷರು

KannadaprabhaNewsNetwork |  
Published : Aug 21, 2025, 01:00 AM IST
3 | Kannada Prabha

ಸಾರಾಂಶ

ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜಕೀಯವಾಗಿ ಸ್ಥಾನಮಾನಗಳನ್ನು ಕಲ್ಪಿಸಿ ಕೊಡುವಲ್ಲಿ ದೇವರಾಜ್ ಅರಸು ಅವರ ಪಾತ್ರ ಅಗಣಿತವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನೈತಿಕ ರಾಜಕಾರಣದ ಕ್ರಾಂತಿ ಪುರುಷರು ಎಂದು ಮಾಜಿ ಸಚಿವೆ ರಾಣಿ ಸತೀಶ್ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬುಧವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆ ಎಚ್.ಎಂ. ಚನ್ನಬಸಪ್ಪ ಮತ್ತು ದೇವರಾಜ್ ಅರಸು ಅವರು ಆತ್ಮೀಯ ಒಡನಾಡಿಗಳಾಗಿದ್ದರು. ಸರ್ಕಾರ ಯಾವಾಗಲೂ ನಮ್ಮ ತಂದೆಯವರ ಬಳಿ ಸಲಹೆಗಳನ್ನು ಪಡೆಯುತ್ತಿದ್ದನ್ನು ನಾನು ಕಂಡಿದ್ದೇನೆ ಎಂದು ಹೇಳಿದರು.ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜಕೀಯವಾಗಿ ಸ್ಥಾನಮಾನಗಳನ್ನು ಕಲ್ಪಿಸಿ ಕೊಡುವಲ್ಲಿ ದೇವರಾಜ್ ಅರಸು ಅವರ ಪಾತ್ರ ಅಗಣಿತವಾಗಿದೆ. ನಾವು ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನು ತರುವಲ್ಲಿ ಅವರ ಪಾತ್ರ ಹೆಚ್ಚಿತ್ತು. ಮಹಿಳೆಯರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಜಾರಿ ಮಾಡಿ ಆರ್ಥಿಕ ಸಬಲೀಕರಣ ಮತ್ತು ಭದ್ರತೆಗೆ ಅಡಿಗಲ್ಲು ಹಾಕಿದವರು ಅರಸು ಎಂದರು.ಇತಿಹಾಸ ಹಾಗೂ ಪರಂಪರೆ ತಜ್ಞ ಪ್ರೊ. ರಂಗರಾಜು ಮಾತನಾಡಿ, ಡಿ. ದೇವರಾಜ ಅರಸು ಅವರು ಸಾರ್ವಕಾಲಿಕ ಹಿಂದುಳಿದ ವರ್ಗಗಳ ಚಿರಸ್ಮರಣಿಯ ನಾಯಕರಾಗಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಸರ್ಕಾರವನ್ನು ಮುನ್ನಡೆಸಿ ಸಾವಿರಾರು ಯೋಜನೆಗಳನ್ನು ಜಾರಿಗೆ ತಂದರು. ಬಡವರ ಹಿಂದುಳಿದವರ ಮತ್ತು ದೀನದಲಿತರ ಪಾಲಿನ ಆಶಾಕಿರಣವಾಗಿ ಬೆಳೆದು ನಿಂತಿದ್ದರು ಎಂದು ತಿಳಿಸಿದರು.ಉಳುವವನೇ ಭೂಮಿಯ ಒಡೆಯ ಕಾನೂನನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದು ಬಡವರ ಪಾಲಿನ ಆರಾಧ್ಯದವಾಗಿ ರೂಪುಗೊಂಡರು. ದಿಟ್ಟತನದಿಂದ ಅವರು ಮಾಡಿದ ಈ ಪ್ರಯತ್ನದ ಫಲದಿಂದ ಇಂದು ಕರ್ನಾಟಕದಲ್ಲಿ ಬಹುತೇಕ ಜನರು ಊಟ ಮಾಡುವಂತೆ ಆಗಿದೆ ಎಂದರು. ಪಿರಿಯಾಪಟ್ಟಣದ ಸ್ವಾತಂತ್ರ್ಯ ಸೇನಾನಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಎಚ್.ಎಂ. ಚನ್ನಬಸಪ್ಪ ಅವರ ಪ್ರತಿಮೆಯನ್ನು ಮೈಸೂರಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲು ಹಾಗೂ ಪ್ರತಿ ವರ್ಷ ಕಾಂಗ್ರೆಸ್ ಭವನದಲ್ಲಿ ಎಚ್.ಎಂ. ಚನ್ನಬಸಪ್ಪ ಜಯಂತಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮುಖಂಡರಾದ ಹೆಡತಲೆ ಮಂಜುನಾಥ್, ಎಂ. ಶಿವಣ್ಣ, ಎಂ. ಶಿವಪ್ರಸಾದ್, ನಾಗೇಶ್, ಎನ್. ಸೋಮಣ್ಣ, ಮಲ್ಲೇಶ್, ಲತಾ ಸಿದ್ದಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮಂಜುಳಾ ಮಾನಸ, ಶಾಮ್, ಯೋಗೇಶ್, ಭಾಸ್ಕರ್ ಗೌಡ, ವೆಂಕಟಸುಬ್ಬಯ್ಯ, ತಲಕಾಡು ಮಂಜುನಾಥ್, ಚಂದ್ರು, ಈಶ್ವರ್ ಚಕ್ಕಡಿ, ಗಿರೀಶ್, ಅರುಣ್ ಕುಮಾರ್, ಸಂತೋಷ್ ಮಳಿಯೂರ್, ಗೋಪಿನಾಥ್, ಯೇಸುದಾಸ್, ಸುರೇಶ್ ಪಾಳ್ಯ, ನಂದೀಶ್, ಚಂದ್ರಶೇಖರ್ ಮೊದಲಾದವರು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ