ರಾಮನಗರ: ಸಾಮಾಜಿಕ ಹರಿಕಾರ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜು ಅರಸು ಜನ್ಮ ದಿನದ ಪ್ರಯುಕ್ತ ಪ್ರತಿ ಬುಧವಾರ ಮತ್ತು ಭಾನುವಾರ ಪೌರ ಕಾರ್ಮಿಕರೆಲ್ಲರು ಸೇರಿ ಹಮ್ಮಿಕೊಳ್ಳುವ ಸ್ವಚ್ಛತಾ ಆಂದೋಲನಕ್ಕೆ ನಗರಸಭೆ ಅಧ್ಯಕ್ಷ ಶೇಷಾದ್ರಿ ಚಾಲನೆ ನೀಡಿದರು.
ನಗರದ ರಂಗರಾಯರದೊಡ್ಡಿ ಕೆರೆಯ ಬಳಿ ಪೌರಕಾರ್ಮಿಕರೊಂದಿಗೆ ಸೇರಿ ನಗರಸಭೆ ಅಧ್ಯಕ್ಷ ಶೇಷಾದ್ರಿ, ಆಯುಕ್ತ ಜಯಣ್ಣ ಹಾಗೂ ಸದಸ್ಯರು ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು.ಪ್ರತಿ ಬುಧವಾರ ಮತ್ತು ಭಾನುವಾರ ಬೆಳಗ್ಗೆ 1 ಗಂಟೆ ಕಾಲ ನಿಗದಿತ ವಾರ್ಡುಗಳಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಳ್ಳುವರು. ಈ ಆಂದೋಲನ ನಿರಂತರವಾಗಿ ಮುಂದುವರಿಯಲಿದೆ ಎಂದುಹೇಳಿದರು.
ಸಿರಿಗೌರಿ ಕಲ್ಯಾಣಿ :ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಇ - ಖಾತಾ ಅಭಿಯಾನದಲ್ಲಿ ಮಾತನಾಡಿದ ಅವರು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು 2025-26 ನೇ ಸಾಲಿನ ಗಣೇಶ ವಿಸರ್ಜನಾ ಕೇಂದ್ರಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಬ್ಬಾಚರಣೆ ಸಮಯದಲ್ಲಿ ಜನರಿಗೆ ಅನುಕೂಲವಾಗುವ ಅಗತ್ಯ ಮೂ ಸೌಕರ್ಯಗಳಾದ ಕ್ರೇನ್ ವ್ಯವಸ್ಥೆ, ಕಲ್ಯಾಣಿಗೆ ಬಣ್ಣ ಹೊಡೆಯುವುದು, ಸಿಸಿ ಟಿವಿ ಅಳವಡಿಕೆ, ನೀರಿನ ಪಂಪ್ ಟ್ಯಾಂಕರ್, ಶುಚಿತ್ವ, ನುರಿತ ಈಜುಗಾರರು ಮತ್ತು ಸುರಕ್ಷತಾ ಪರಿಕರಗಳನ್ನು ಒದಗಿಸಲು 15.97 ಲಕ್ಷ ವೆಚ್ಚದ ಟೆಂಡರ್ ನೀಡಲಾಗಿದೆ ಎಂದರು.ಈ ಸಂದರ್ಭದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನರಸಿಂಹ, ಮಂಜುನಾಥ್, ನಿಜಾಮುದ್ದೀನ್ ಷರೀಫ್, ಆರೀಫ್ , ಪಾರ್ವತಮ್ಮ, ಸಮದ್, ಬೈರೇಗೌಡ, ಗಿರಿಜಮ್ಮ, ನಾಗಮ್ಮ, ವಿಜಯ ಕುಮಾರಿ, ಆಯುಕ್ತ ಜಯಣ್ಣ ಹಾಜರಿದ್ದರು.20ಕೆಆರ್ ಎಂಎನ್ 3.ಜೆಪಿಜಿ
ಸಾಮಾಜಿಕ ಹರಿಕಾರ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜು ಅರಸು ಜನ್ಮ ದಿನದ ಪ್ರಯುಕ್ತ ಪ್ರತಿ ಬುಧವಾರ ಮತ್ತು ಭಾನುವಾರ ಪೌರ ಕಾರ್ಮಿಕರೆಲ್ಲರು ಸೇರಿ ಹಮ್ಮಿಕೊಳ್ಳುವ ಸ್ವಚ್ಛತಾ ಆಂದೋಲನಕ್ಕೆ ನಗರಸಭೆ ಅಧ್ಯಕ್ಷ ಶೇಷಾದ್ರಿ ಚಾಲನೆ ನೀಡಿದರು. ಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತ ಜಯಣ್ಣ ಹಾಜರಿದ್ದರು.