ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರಿನ ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಭೆ ನಡೆಸಿ ಮಾತನಾಡಿ, ಯಾವುದೇ ಫೈನಾನ್ಸ್ ಕಂಪನಿ ಅಧಿಕಾರಿಗಳು ಸಾಲಗಾರರ ಮನೆ ಬಳಿ ಹೋಗಿ ಸಾಲ ಪಾವತಿಸುವ ಬಗ್ಗೆ ಬಲವಂತ ಮಾಡಬಾರದು, ಸಾಲಗಾರರಿಗೆ ಕಿರುಕುಳ ನೀಡಿ ವಸೂಲಾತಿ ಸಮಯದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಬಾರದು ಎಂದು ಎಚ್ಚರಿಕೆ ನೀಡಿದರು.
ಅರ್.ಬಿ.ಐ ಸೂಚನೆ ಮತ್ತು ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಬೇಕು. ಸಾಲ ಪಡೆಯುವವರಿಗೆ ಸಾಲ ಮಂಜೂರಾತಿ ವಿವರವನ್ನು ಕನ್ನಡದಲ್ಲಿ ನೀಡಿ ಅರ್ಥ ಆಗುವಂತೆ ಓದಿ ಹೇಳಬೇಕು ಎಂದು ಸೂಚನೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿಯಲ್ಲಿ ಒತ್ತಡ ಹೇರಿದ ಪರಿಣಾಮ ಹಲವೆಡೆ ಆತ್ಮಹತ್ಯೆ ಸಂಭವಿಸಿವೆ. ಈ ಸಂಬಂಧ ಜಿಲ್ಲಾಡಳಿತ ಮಂಡ್ಯದಲ್ಲಿ ಸಹಾಯವಾಣಿ ತೆರೆದಿದ್ದು ಅಗತ್ಯ ಉಳ್ಳವರು ದೂರವಾಣಿ ಸಂಖ್ಯೆ 08232- 224655 ಕರೆ ಮಾಡಬೇಕೆಂದು ಅವರು ತಿಳಿಸಿದರು.
ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ
ಮಂಡ್ಯ: 66/11 ಕೆ.ವಿ ಬಸರಾಳು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಳ್ಳಲಾಗಿದ್ದು ಫೆ.7ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಸರಾಳು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು : ಬಸರಾಳು, ಶಿವಪುರ , ಬೇಬಿ, ಕಂಬದಹಳ್ಳಿ, ಬಿದರಕಟ್ಟೆ, ಮಾರಸಿಂಗನಹಳ್ಳಿ, ಅಂಕುಶಾಪುರ, ಬೆನ್ನಹಟ್ಟಿ, ಶಾನಭೋಗನಹಳ್ಳಿ, ಬೊಮ್ಮನಹಳ್ಳಿ, ಅನುಕುಪ್ಪೆ, ಮನುಗನಹಳ್ಳಿ, ಎಂ.ಹಟ್ನ, ಗಣಿಗ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.