ಕಾಲ್ವೆಯಲ್ಲಾಪುರದ ನೀರಿನ ಸಮಸ್ಯೆ ಪರಿಹರಿಸಲು ಸೂಚನೆ

KannadaprabhaNewsNetwork |  
Published : May 01, 2026, 02:00 AM IST
ಕಾಲ್ವೆಯಲ್ಲಾಪುರ ಗ್ರಾಮದ ಮನೋಹರ ನಗರದ ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸುತ್ತಿರುವ ತಹಸೀಲ್ದಾರ್ ಎಸ್. ರೇಣುಕಾ. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆಗೊಳಗಾದ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯಿತಿಯ ಕಾಲ್ವೆಯಲ್ಲಾಪುರ ಗ್ರಾಮದ ಮನೋಹರ ನಗರಕ್ಕೆ ತಹಸೀಲ್ದಾರ್ ಎಸ್.ರೇಣುಕಾ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ನೀರಿನ ಬವಣೆಯನ್ನು ಆಲಿಸಿದ್ದಾರೆ.

ಹಾನಗಲ್ಲ: ಕುಡಿಯುವ ನೀರಿನ ಸಮಸ್ಯೆಗೊಳಗಾದ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯಿತಿಯ ಕಾಲ್ವೆಯಲ್ಲಾಪುರ ಗ್ರಾಮದ ಮನೋಹರ ನಗರಕ್ಕೆ ತಹಸೀಲ್ದಾರ್ ಎಸ್.ರೇಣುಕಾ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ನೀರಿನ ಬವಣೆಯನ್ನು ಆಲಿಸಿದ್ದಾರೆ.

ಕನ್ನಡಪ್ರ ಬುಧವಾರ ಈ ಗ್ರಾಮದ ನೀರಿನ ಬವಣೆ ಕುರಿತು ವರದಿ ಪ್ರಕಟಿಸಿ ಗಮನಸೆಳೆದಿತ್ತು. ಕೂಡಲೇ ಸ್ಪಂದಿಸಿದ ಇಬ್ಬರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.

ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ನೀರು ಪೂರೈಕೆಯಲ್ಲಾದ ಅನಾನುಕೂಲವನ್ನು ಸರಿಪಡಿಸಲು ಬಾಳಂಬೀಡ ಪಿಡಿಒ ಟಿ.ಬಿ. ಮುಗಾನವರ ಅವರನ್ನು ಸ್ಥಳಕ್ಕೆ ಕರೆಸಿ ಕೂಡಲೇ ನಳದ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಪೈಪ್ ಒಡೆದಿದೆ ಎಂದು ನೆಪ ಹೇಳಿ ನಳದ ಮೂಲಕ ನೀರು ಹರಿಸುವುದನ್ನು ನಿಲ್ಲಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಎಸ್. ರೇಣುಕಾ ಒಂದು ದಿನದಲ್ಲಿ ಎಲ್ಲವನ್ನು ಸರಿಪಡಿಸಲು ಸೂಚಿಸಿದ್ದಾರೆ.

ಇನ್ನೊಂದೆಡೆ ಜಲಜೀವನ ಮಿಶನ್ ಅನುಷ್ಠಾನಾಧಿಕಾರಿ ಚಂದ್ರಶೇಖರ ನೆಗಳೂರ ಇದೇ ಕಾಲ್ವೆಯಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಅವೈಜ್ಞಾನಿಕವಾಗಿ ಕೊಳವೆ ಭಾವಿಗೆ ಕೇಬಲ್ ಜೋಡಣೆ ಹಾಗೂ ವೈರಿಂಗ್ ಅವ್ಯವಸ್ಥೆ ಪರಿಶೀಲಿಸಿ ಕೂಡಲೆ ಸರಿಪಡಿಸಲು ಪಿಡಿಒಗೆ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಶಿರಹಟ್ಟಿಯ ಫಕೀರೇಶ್ವರ ರಥೋತ್ಸವ
ಎಚ್ಐವಿಗೆ ಸೂಕ್ತ ಚಿಕಿತ್ಸೆ ಪಡೆಯಲಿ: ಡಿ.ಎನ್. ಚಂದ್ರಶೇಖರ