ಪ್ರವಾದಿ ಮೊಹಮ್ಮದ್‌, ಹಜರತ್ ಆಯಿಷಾ ವಿರುದ್ಧ ಅವಹೇಳನ ಸಲ್ಲದು : ಅಂಜುಮನ್ ಎ ಇಸ್ಲಾಮಿಯಾ

KannadaprabhaNewsNetwork |  
Published : Aug 27, 2024, 01:46 AM ISTUpdated : Aug 27, 2024, 09:42 AM IST
೨೬ಎಚ್‌ಆರ್‌ಆರ್ ೧ಹರಿಹರದಲ್ಲಿ ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ರಾಮಗಿರಿ ಮಹಾರಾಜ್ ಎಂಬ ವ್ಯಕ್ತಿ ಮುಸ್ಲಿಂ ಧಾರ್ಮಿಕ ಮಹಾಪುರುಷರ ವಿರುದ್ಧ  ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಹರಿಹರದಲ್ಲಿ ಸೋಮವಾರ ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆ ಪದಾಧಿಕಾರಿಗಳು ಗ್ರೇಡ್-೨ ತಹಶೀಲ್ದಾರ್ ಪುಷ್ಪವತಿ ಇವರಿಗೆ ಮನವಿ ನೀಡಿದರು. | Kannada Prabha

ಸಾರಾಂಶ

  ನಾಸಿಕ್ ಜಿಲ್ಲೆಯಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಎಂಬ ವ್ಯಕ್ತಿ ಮುಸ್ಲಿಂ ಸಮುದಾಯದವರು ಗೌರವಿಸುವ ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾ ಅವರ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ   ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆಯಿಂದ ತಹಸೀಲ್ದಾರರಿಗೆ ಮನವಿ  

  ಹರಿಹರ :  ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಎಂಬ ವ್ಯಕ್ತಿ ಮುಸ್ಲಿಂ ಸಮುದಾಯದವರು ಗೌರವಿಸುವ ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾ ಅವರ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್ ಮಾತನಾಡಿ, ಪ್ರವಾದಿ ಮೊಹಮ್ಮದ್ ಹಾಗೂ ಹಜರತ್ ಆಯಿಷಾರಿಗೆ ಮುಸ್ಲಿಮರು ಅತ್ಯಂತ ಗೌರವ ನೀಡುತ್ತಾರೆ. ಇಂತಹ ಧಾರ್ಮಿಕ ಮಹಾಪುರುಷರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಕಾರ್ಯದರ್ಶಿ ಸೈಯದ್ ಆಸಿಫ್ ಜುನೈದಿ ಮಾತನಾಡಿ, ದೇಶದಲ್ಲಿ ವಿವಿಧ ಧರ್ಮೀಯರ ನಡುವೆ ಇರುವ ಸಾಮರಸ್ಯ ಹದಗೆಡಿಸಿ ರಾಜಕೀಯ ಲಾಭ ಪಡೆಯಲು, ಸ್ವಾರ್ಥ ಸಾಧನೆಗೆ ಹಲವರು ಪ್ರಯತ್ನಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಮಗಿರಿ ಮಹಾರಾಜ್ ಸೇರ್ಪಡೆಗೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಎಚ್ಚರಿಕೆ ಮೂಡಿಸಬೇಕಿದೆ ಎಂದರು.

ನಗರಸಭಾ ಸದಸ್ಯರಾದ ಎಂ.ಆರ್. ಮುಜಮ್ಮಿಲ್, ಆರ್.ಸಿ. ಜಾವೀದ್, ಸಂಸ್ಥೆ ಪದಾಧಿಕಾರಿಗಳಾದ ಫಯಾಜ್ ಅಹ್ಮದ್, ಗುತ್ತೂರು ನಾಸಿರ್ ಪೈಲ್ವಾನ್, ಎಂ.ಆರ್. ಸೈಯದ್ ಸನಾವುಲ್ಲಾ, ಮೊಹ್ಮದ್ ಬಿ. ಸಿಬ್ಗತ್‌ಉಲ್ಲಾ, ಎಚ್, ಫ್ರಕ್ರುಲ್ಲಾ ಖಾನ್, ಸೈಯದ್ ಅಶ್ಫಾಖ್, ಟಿ. ರೋಷನ್ ಜಮೀರ್, ಎಚ್.ನೂರುಲ್ಲಾ, ಸೈಯದ್ ರಹಮಾನ್, ಬಿ.ಸೈಯದ್ ಬಶೀರ್, ಎಂ.ಎಸ್. ಸಾದಿಖ್‌ ಉಲ್ಲಾ, ಮೊಹ್ಮದ್ ಅಲಿ, ಅಫ್ರೋಜ್ ಖಾನ್, ಹಾಜಿ ಅಲಿ ಖಾನ್, ಎಂ. ಫಾರೂಖ್, ಕೆ. ಸರ್ಫರಾಜ್ ಅಹ್ಮದ್, ಗೌಸ್ ಪೀರ್, ರಹಮತ್ ಉರ್ ರಹಮಾನ್ ಇದ್ದರು.

ಕೋಟ್‌ ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಡಾ.ರಾಧಾ ಗೋಬಿನಂದಾಕರ್ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇ

- ಮುಸ್ಲಿಂ ಮುಖಂಡರು, ಅಂಜುಮನ್‌ ಸಂಸ್ಥೆ 

PREV

Recommended Stories

ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಸರಿಯಲ್ಲ : ಸತೀಶ್‌
ಆರ್‌ಎಸ್‌ಎಸ್ ಗೀತೆ ಹಾಡಿದ ಕೈ ಶಾಸಕ ಡಾ। ರಂಗನಾಥ್‌