ಧಾರವಾಡ:
ದಾವಣಗೆರೆ ಜಿಲ್ಲೆಯ ಹರಿಹರದ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಜೂ. 9ರಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಕೆ.ಎಸ್. ಭಗವಾನ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಶ್ರೀರಾಮನು ದಶರಥನ ಮಗನಲ್ಲ ಎನ್ನುವುದಲ್ಲದೇ, ಹಿಂದೂ ಧರ್ಮಗ್ರಂಥಗಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಹಿಂದೆಯೂ ಭಗವಾನ್, ಶ್ರೀರಾಮ, ಶ್ರೀಕೃಷ್ಣ, ಭಗವದ್ಗೀತೆ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಮತ್ತದೆ ರೀತಿಯ ಹೇಳಿಕೆಗಳನ್ನು ನೀಡಿದ್ದು, ಧಾರ್ಮಿಕ ಭಾವನೆಗೆ ಉದ್ದೇಶಪೂರ್ವಾಗಿ ಧಕ್ಕೆ ತರಲು ಮಾಡಿರುವ ಪ್ರಯತ್ನವಿದು. ಆದ್ದರಿಂದ ಅವರ ವಿರುದ್ಧ ಕಾನೂನು ವಿಧಿಗಳ ಅಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಅವರನ್ನು ಒಂದು ವಾರದಲ್ಲಿ ಬಂಧಿಸದೆ ಹೋದಲ್ಲಿ ಮೈಸೂರಿನ ಅವರ ಮನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶಿವಸೇನೆ ಜಿಲ್ಲಾಧ್ಯಕ್ಷ ಗಂಗಾಧರ ಕುಲಕರ್ಣಿ, ಸಿದ್ಧಾರ್ಥ ಶಿವಶರಣವರ, ಭರತ ಸಾವಂತ, ಪ್ರಸಾದ ತೋಷಿ, ನವೀನ ರಾಟಿ, ಅಕ್ಷಯ ಕದಂ ಸೇರಿದಂತೆ ಮತ್ತಿತರರು ಇದ್ದರು.