ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವೀರ ಸೇನಾನಿಗಳನ್ನು ಜಾಲತಾಣದಲ್ಲಿ ಅವಮಾನಿಸಿದ ಬೆಳವಣಿಗೆ ಖಂಡಿಸಿ ಸುಂಟಿಕೊಪ್ಪ ಹೋಬಳಿ ಜೈ ಜವಾನ್ ಮಾಜಿ ಸೈನಿಕರ ಟ್ರಸ್ಟ್‌ನ ನಿವೃತ್ತ ಯೋಧರು ಸುಂಟಿಕೊಪ್ಪ ಕನ್ನಡವೃತ್ತದಲ್ಲಿ ಜಮಾವಣೆಗೊಂಡು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.ಇತ್ತೀಚೆಗೆ ಕೊಡಗಿನ ಇಬ್ಬರು ಮಹಾನ್‌ಸೇನಾನಿಗಳನ್ನು ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣ ವಿರುದ್ಧ ಜಿಲ್ಲೆಯ ಮಾಜಿ ಸೈನಿಕರ ಸಂಘ ಶುಕ್ರವಾರ ಮಡಿಕೇರಿ ಚಲೋ ಪ್ರತಿಭಟನೆಗೆ ಕರೆ ನೀಡಿತ್ತು.
ಸುಂಟಿಕೊಪ್ಪ ಹೋಬಳಿ ಸುಂಟಿಕೊಪ್ಪ ಹೋಬಳಿ ಜೈ ಜವಾನ್ ಮಾಜಿ ಸೈನಿಕರ ಟ್ರಸ್ಟ್‌ನ ನಿವೃತ್ತ ಯೋಧರುಗಳು ಮಡಿಕೇರಿಗೆ ತೆರಳುವ ಸಂದರ್ಭ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಸುಂಟಿಕೊಪ್ಪ ಹೋಬಳಿ ಜೈ ಜವಾನ್ ಮಾಜಿ ಸೈನಿಕರ ಟ್ರಸ್ಟ್ ಅಧ್ಯಕ್ಷ ಪಿ.ಜಿ.ಶ್ರೀನಿವಾಸನ್, ಉಪಾಧ್ಯಕ್ಷ ಕೆ.ಎಂ.ಬೆಳ್ಯಪ್ಪ, ಕಾರ್ಯದರ್ಶಿ ಕೆ.ಜಿ.ಶಿವನ್, ಖಜಾಂಚಿ ಟಿ.ಬಿ.ರಾಜೇಶ್, ಸದಸ್ಯರಾದ ಎಂ.ಎನ್.ಪೆಮ್ಮಯ್ಯ, ಎ.ಕೆ.ಅಪ್ಪು, ಯೋಗೇಶ್ ಕೆ.ಕೆ., ಡಿ.ಟಿ.ರವಿ, ಡಿ.ಕೆ.ದೇವಯ್ಯ, ಸಿ.ಕೆ.ಚಂಗಪ್ಪ, ಎನ್.ಎನ್.ಶಿವಪ್ರಸಾದ್ ಹಾಗೂ ಎನ್.ಬಿ.ಮಧು ಇದ್ದರು.ಅಹಲ್ಯಭಾಯಿ ಹೊಳ್ಕರ್ ತ್ರಿಶತಾಬ್ಧಿ ಆಚರಣೆ
ಆಧುನಿಕ ಸಮಾಜಕ್ಕೆ ಹಾಗೂ ಸ್ತ್ರೀ ವರ್ಗದವರಿಗೆ ಅಹಲ್ಯಾಬಾಯಿ ಹೋಳ್ಕರ್ ಜೀವನ, ಸಂಸ್ಕೃತಿ ಹಾಗೂ ಸಂಸ್ಕಾರ ಸ್ಫೂರ್ತಿದಾಯಕ ಎಂದು ಕವಯತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ವಿಮಲ ದಶರಥ್ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಸೋಮವಾರ ನಡೆದ ಅಹಲ್ಯಭಾಯಿ ಹೊಳ್ಕರ್ ತ್ರಿಶತಾಬ್ಧಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ವೀಣಾ ಮಾತನಾಡಿ ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಉತ್ತಮ ಅವಕಾಶ, ಸಮಾನತೆ, ಗೌರವವಿತ್ತು. ಪರಕೀಯರ ದಾಳಿಯಿಂದ ವಾತಾವರಣ ಬದಲಾಯಿತು. ಆಧುನಿಕ ಕಾಲದಲ್ಲಿಯೂ ಈಗ ಸ್ತ್ರೀಯರಿಗೆ ಸಿಗುತ್ತಿರುವ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ಅಹಲ್ಯ ಬಾಯಿ ಪರಿಕಲ್ಪನೆ ಆಗಿದೆ ಎಂದರು.
ವಿದ್ಯಾರ್ಥಿಗಳಾದ ಕೌಶಲ್ಯ, ಮುತ್ತಮ್ಮ, ಅಂಜು ಅಹಲ್ಯ ಬಾಯಿ ಹೊಳ್ಕರ್ ಜೀವನ ಮತ್ತು ಸಾಧನೆಯ ಕುರಿತು ವಿಚಾರ ಮಂಡನೆ ಮಾಡಿದರು.ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯ ಮುದ್ದಪ್ಪ, ಕಾಲೇಜಿನ ಮಹಿಳಾ ಘಟಕದ ಸಂಚಾಲಕಿ ಅಂಬಿಕಾ ಬಿ.ಯು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಂಚಾಲಕ ನಾಗರಾಜು ಎಚ್.ವಿ. ಇದ್ದರು.