ಅಡಕೆ ಮತ್ತು ಮಾವು ಬೆಳೆಗೆ ವಿಮೆ ಪರಿಹಾರ ವಿಳಂಬ

KannadaprabhaNewsNetwork |  
Published : Oct 12, 2025, 01:01 AM IST
ಫೋಟೋ :11ಎಚ್‌ಎನ್‌ಎಲ್2ಹಾನಗಲ್ಲ ತಾಲೂಕಿನಲ್ಲಿ ವಿಮೆ ಕಂತು ಕಟ್ಟಿದ ರೈತರ ಅಡಕೆ ಮತ್ತು ಮಾವು ಬೆಳೆಗೆ ಪರಿಹಾರ ಮೊತ್ತ ವಿಳಂಬ ಖಂಡಿಸಿ ಶುಕ್ರವಾರ ರೈತ ಸಂಘದಿAದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಅಡಕೆ ಮತ್ತು ಮಾವು ಬೆಳೆಗೆ ವಿಮೆ ಪರಿಹಾರ ವಿಳಂಬ ಖಂಡಿಸಿ ಶುಕ್ರವಾರ ಇಲ್ಲಿನ ತೋಟಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿದ್ದ ರೈತ ಸಂಘ ಪರಿಹಾರ ಬಿಡುಗಡೆಗೆ ಒತ್ತಾಯಿಸಿತು.

ಹಾನಗಲ್ಲ: ಅಡಕೆ ಮತ್ತು ಮಾವು ಬೆಳೆಗೆ ವಿಮೆ ಪರಿಹಾರ ವಿಳಂಬ ಖಂಡಿಸಿ ಶುಕ್ರವಾರ ಇಲ್ಲಿನ ತೋಟಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿದ್ದ ರೈತ ಸಂಘ ಪರಿಹಾರ ಬಿಡುಗಡೆಗೆ ಒತ್ತಾಯಿಸಿತು.

2024-25ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಅಡಕೆ ಬೆಳೆಗೆ ವಿಮೆ ನೋಂದಣಿ ಮಾಡಿಸಿದ್ದ ತಾಲೂಕಿನ 11327 ರೈತರ 6498 ಹೆಕ್ಟೇರ್ ಪ್ರದೇಶಕ್ಕೆ ವಿಮಾ ಪರಿಹಾರ ಆಗಿಲ್ಲ. ಜೂನ್ ಅಂತ್ಯಕ್ಕೆ ವಿಮೆ ಪರಿಹಾರ ಬಿಡುಗಡೆಗೊಳ್ಳಬೇಕಿತ್ತು. ಇದೇ ಸಾಲಿನ ಮಾವು ಬೆಳೆಗೆ ವಿಮೆ ನೋಂದಣಿ ಮಾಡಿಸಿದ 3496 ರೈತರ 2684 ಹೆಕ್ಟೇರ್ ಭೂಮಿಯ ಫಸಲಿಗೆ ಮೇ ಅಂತ್ಯಕ್ಕೆ ವಿಮಾ ಪರಿಹಾರ ಜಮೆಗೊಳ್ಳಬೇಕಿತ್ತು. ಈ ಎರಡೂ ಬೆಳೆಗಳ ಪರಿಹಾರ ಮೊತ್ತಕ್ಕೆ ಬಡ್ಡಿ ಸೇರಿಸಿ ಶೀಘ್ರದಲ್ಲಿ ಜಮೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ವಿಮೆ ಕಂಪನಿಯೊಂದಿಗೆ ಚರ್ಚಿಸಿ 10 ದಿನದ ಒಳಗಾಗಿ ಅಡಕೆ ಬೆಳೆಗೆ ಪರಿಹಾರ ಮತ್ತು ಈ ತಿಂಗಳ ಅಂತ್ಯದಲ್ಲಿ ಮಾವು ಬೆಳೆಗೆ ಪರಿಹಾರ ಮೊತ್ತ ಜಮೆಗೊಳಿಸುವುದಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಭರವಸೆ ನೀಡಿದರು.ವಿಮಾ ಕಂಪನಿ ಮತ್ತು ಬೆಂಗಳೂರಿನ ಲಾಲ್‌ಬಾಗ್ ತೋಟಗಾರಿಕೆ ಮುಖ್ಯ ಕಚೇರಿ ಅಧಿಕಾರಿಗಳನ್ನು ಇಲ್ಲಿಗೆ ಆಹ್ವಾನಿಸಿ ರೈತರೊಂದಿಗೆ ಚರ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಹಾನಗಲ್ಲನಲ್ಲಿ ಸಭೆ ಆಯೋಜಿಸಲಾಗುತ್ತದೆ ಎಂದರು. ವಿಮಾ ಕಂಪನಿ ಅಧಿಕಾರಿ ಬಸವರಾಜ ಹಿರೇಮಠ ಮತ್ತು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ಭುವನೇಶ್ವರ ಇದ್ದರು.ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ರೈತರಾದ ರುದ್ರಪ್ಪ ಹಣ್ಣಿ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಶ್ರೀಧರ ಮಲಗುಂದ, ಉಮೇಶ ಮೂಡಿ, ಅಶೋ ಸಂಶಿ, ಕೊಟ್ರೇಶಪ್ಪ ಬೆಲ್ಲದ, ಶ್ರೀಕಾಂತ ದುಂಡಣ್ಣನವರ, ರಾಜೀವ ದಾನಪ್ಪನವರ, ರಾಜೇಂದ್ರಪ್ಪ ಗಾಳಪೂಜಿ, ಮಾಲಿಂಗಪ್ಪ ಅಕ್ಕಿವಳ್ಳಿ ಇದ್ದರು.2023-24ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಶುಂಠಿ, ಹಸಿಮೆಣಸಿನಕಾಯಿ, ಮಾವು ಅಡಕೆ ಬೆಳೆಗೆ ವಿಮೆ ಕಂತು ಕಟ್ಟಿದ ಕೆಲವೊಂದು ರೈತರಿಗೆ ಈತನಕ ಪರಿಹಾರ ಸಿಕ್ಕಿಲ್ಲ. ಈ ತಾಂತ್ರಿಕ ದೋಷ ಸರಿಪಡಿಸಿ ರೈತರ ಖಾತೆಗೆ ವಿಮಾ ಮೊತ್ತ ಜಮೆಗೊಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆ ರೈತ ಎಂದು ಹೇಳಿಕೊಳ್ಳಲು ಮುಜುಗರ ಬೇಡ: ಜಿಲ್ಲಾಧಿಕಾರಿ ಸಂಗಪ್ಪ ಎಂ.
16ರಂದು ಬೆಳಗಾವಿ ಚಲೋಗೆ ಪತ್ರ ಬರಹಗಾರರ ನಿರ್ಣಯ