ಮಳೆಮಾಪನ ವ್ಯವಸ್ಥೆ ದುರಸ್ತಿಗೆ ಶೀಘ್ರ ಕ್ರಮ: ಶಾಸಕ ಅಶೋಕ್ ರೈ

KannadaprabhaNewsNetwork |  
Published : Jan 31, 2026, 02:45 AM IST
ಫೋಟೋ: ೨೭ಪಿಟಿಆರ್-ಎಂಎಲ್‌ಎತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಶಕೀಲ್ ಅಹ್ಮದ್ ಜೊತೆ ಶಾಸಕ ಅಶೋಕ್ ರೈ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ಹವಾಮಾನ ಆಧಾರಿತ ಬೆಳೆ ವಿಮೆ ಬಾಕಿ ಇರುವ ಕೋಡಿಂಬಾಡಿ, ಕೊಡಿಪ್ಪಾಡಿ, ವಿಟ್ಲ ಹಾಗೂ ಬಲ್ನಾಡು ಗ್ರಾಮಗಳ ಪೈಕಿ ಕೋಡಿಂಬಾಡಿ ಹಾಗೂ ಕೊಡಿಪ್ಪಾಡಿ ಗ್ರಾಮದ ರೈತರಿಗೆ ಬೆಳೆವಿಮೆ ಮಂಜೂರಾಗಿದ್ದು, ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರ ವಿಮೆ ಶೀಘ್ರ ಮಂಜೂರಾಗಲಿದೆ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಬಾಕಿ ಇರುವ ಕೋಡಿಂಬಾಡಿ, ಕೊಡಿಪ್ಪಾಡಿ, ವಿಟ್ಲ ಹಾಗೂ ಬಲ್ನಾಡು ಗ್ರಾಮಗಳ ಪೈಕಿ ಕೋಡಿಂಬಾಡಿ ಹಾಗೂ ಕೊಡಿಪ್ಪಾಡಿ ಗ್ರಾಮದ ರೈತರಿಗೆ ಬೆಳೆವಿಮೆ ಮಂಜೂರಾಗಿದ್ದು, ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರ ವಿಮೆ ಶೀಘ್ರ ಮಂಜೂರಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.ಮಂಗಳವಾರ ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್ ಜೊತೆ ಶಾಸಕ ಅಶೋಕ್ ರೈ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಕೋಡಿಂಬಾಡಿ, ಕೊಡಿಪ್ಪಾಡಿ, ವಿಟ್ಲ ಹಾಗೂ ಬಲ್ನಾಡು ಗ್ರಾಮದ ರೈತರಿಗೆ ಕಾಳುಮೆಣಸು ವಿಮೆ ಮಾತ್ರ ಮಂಜೂರಾಗಿದೆ. ಅಡಕೆ ಬೆಳೆ ವಿಮೆ ಮಂಜೂರಾಗಿರಲಿಲ್ಲ, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈ ಪೈಕಿ ಕೊಡಿಪ್ಪಾಡಿ ಮತ್ತು ಕೋಡಿಂಬಾಡಿ ಗ್ರಾಮದ ರೈತರಿಗೆ ವಿಮಾ ಮಂಜೂರಾಇ ಆಗಿದ್ದು ಇನ್ನು ಶೀಘ್ರದಲ್ಲೇ ಖಾತೆಗೆ ಹಣ ಮಂಜೂರಾಗಲು ಮಾತ್ರ ಬಾಕಿ ಇದೆ . ವಿಟ್ಲ ಮ್ತತು ಬಲ್ನಾಡು ಗ್ರಾಮದ ರೈತರಿಗೆ ಶೀಘ್ರದಲ್ಲೇ ವಿಮಾ ಮಂಜೂರಾತಿಯಾಗಲಿದೆ ಎಂದರು.

೬ ಸಾವಿರ ಖಾತೆ ಕೈವೈಸಿ ಆಗಿಲ್ಲ:ಜಿಲ್ಲೆಯಲ್ಲಿ ಒಟ್ಟು ೬ ಸಾವಿರ ರೈತರು ಬೆಳೆವಿಮಾ ಕಂತು ಪಾವತಿ ಮಾಡಿದ್ದಾರೆ. ಆದರೆ ಅವರ ಖಾತೆ ಕೈವೈಸಿಯಾಗದ ಕಾರಣ ವಿಮಾ ಕಂಪನಿಯಿಂದ ವಿಮೆ ಜಮೆಯಾಗಿಲ್ಲ. ಜಮೆಯಾಗದ ಈ ಖಾತೆಗಳಿಗೆ ಮುಂದಿನ ದಿನಗಳಲ್ಲಿ ಏನು ಕ್ರಮಕೈಗೊಳ್ಳುವುದು ಎಂಬ ಕುರಿತು ಇನ್ನೊಂದು ಹಂತದ ಸಭೆ ನಡೆಯಲಿದ್ದು ಅಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದ್ದಾರೆ.

ಮಳೆಮಾಪನ ಸಮರ್ಪಕವಾಗಿ ಕೆಲಸ ಮಾಡದೇ ಇರುವುದು ಕೂಡಾ ವಿಮಾ ಪರಿಹಾರ ಮೊತ್ತದಲ್ಲಿ ಏರುಪೇರಾಗಲು ಒಂದು ಕಾರಣವಾಗಿದೆ. ಸರ್ವೆ ಮಾಡುವ ವೇಳೆ ಮಳೆ ಮಾಪನವೂ ಪರಿಗಣಿಸಲ್ಪಡುವ ಕಾರಣ ಆಯಾ ಗ್ರಾಮದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದು ಕೂಡಾ ಪರಿಗಣಿಸಲ್ಪಡುವ ಕಾರಣ ಮಳೆ ಮಾಪನ ದೋಷದಿಂದ ಹಲವು ಮಂದಿ ರೈತರಿಗೆ ವಿಮಾ ಮೊತ್ತದಲ್ಲಿ ಲೋಪ ಉಂಟಾಗಿದೆ. ಗ್ರಾಮದಲ್ಲಿರುವ ಮಳೆಮಾಪನವನ್ನು ಶೀಘ್ರ ದುರಸ್ತಿ ಅಥವಾ ಹೊಸ ಮಳೆಮಾಪನ ಅಳವಡಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಈ ಬಗ್ಗೆ ಶೀಘ್ರ ಕ್ರಮವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು