ಕೊಪ್ಪಳ: ಸಮಾಜದಲ್ಲಿ ಶೋಷಣೆಗೆ ಒಳಗಾದ ಮಾಜಿದೇವದಾಸಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಸರ್ಕಾರದ ಯೋಜನೆ ಮತ್ತು ಸೌಲಭ್ಯ ಸದುಪಯೋಗ ಪಡೆದುಕೊಂಡು ಸಮಾಜದೊಂದಿಗೆ ಬೆರೆತು ಬದುಕು ರೂಪಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ದರಗದ ಹೇಳಿದ್ದಾರೆ.
ಮಹಿಳೆಯರ ಮೇಲೆ ಇತ್ತಿಚಿನ ದಿನಗಳಲ್ಲಿ ಅಹಿತಕರ ಘಟನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ವಯಂ ರಕ್ಷಣೆ ಮತ್ತು ಕಾನೂನಿನ ನೆರವು ಪಡೆದು ಸ್ವಾವಲಂಬಿ ಬದುಕಿನತ್ತ ಹೊಸಮುಖ ಮಾಡಿ ಎಂದು ಜಾಗೃತಿ ಬಿತ್ತಿ ಚಿತ್ರ ಬಿಡುಗಡೆಗೊಳಿಸಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಇಲಾಖೆಯು ಸಾಕಷ್ಟು ಯೋಜನೆ ರೂಪಿಸಿದ್ದು,ಅವುಗಳ ಸದುಪಯೋಗ ಪಡೆದುಕೊಳ್ಳಿ,ಎಲ್ಲರೂ ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲಾಗಿದೆ ಎಂದರು.ಇದೇ ವೇಳೆ ಮಾಜಿ ದೇವದಾಸಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಹಾಗೂ ವಿವಿಧ ಆಟೋಟಗಳ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ, ಸಮಾಜ ಸೇವಕ ಶಾರದಾ ಪಾನಘಂಟಿ, ಮಹಿಳಾ ಧ್ವನಿ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ರಮಾ, ವೈದ್ಯ ಕೈಲಾಸ್, ಡಾ. ಕವಿತಾ, ಲ್ಯಾಬ್ ಟೆಕ್ನಿಷಿಯನ್ ಸಂತೋಷ, ಹಿರಿಯ ಸಹಾಯಕರು ಉತ್ತಮ್ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಕಾರ್ಯಕರ್ತರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.